ಸಾವು

Savu (1)1
ಸಾವು ಸದಾ ತನ್ನ ಬೆನ್ನ ಹಿಂದಿಹುದೆಂಬ ಅರಿವು ತನಗರಿಯದಂತೆಯೇ ಮಾನವತೆಯತ್ತ ಸಾಗಿಸುವುದು. ಬರಿಯ ವ್ಯತ್ಯಾಸಗಳ ದೊಂಬರಾಟಗಳೇ ಬದುಕ ನೆಮ್ಮದಿ ಕೆಡಿಸುವುದೆಂದರೆ ತಪ್ಪಲ್ಲ. ಎಲ್ಲರೊಳಗೊಂದಾಗುವ ಭಾವವೇ ಸಂತೃಪ್ತ ಬದುಕಿನ ಮೂಲ ಎಂಬುದು ಈ ಕವನದ ಸಾರ.

– ಚಿದಾನಂದ್ ಎನ್ ಕೋಟ್ಯಾನ್

twitter handle: @chidakotyan

chidakotyan@gmail.com

chidanand @ fb

ದೇವರು – ಮೂವರು – ದ್ವಂದ್ವವೂ

BeautyPlus_20180820210709_save copy
ಇಲ್ಲಿ, ಅತ್ತ ಎಡಕ್ಕೂ ಸರಿಯದ, ಇತ್ತ ಸಂಪೂರ್ಣ ಬಲಕ್ಕೂ ಸರಿಯದ, ಯಾವುದಕ್ಕೂ ಬಂಧಿಯಾಗದ ತಾತ್ವಿಕ ನಿಲುವಿನ ಮಧ್ಯಮ ವಿಚಾರವೇ ಶ್ರೇಷ್ಠ. ವಿಚಾರದೊಳಗೆ ದೇವರ ಅಸ್ತಿತ್ವವನ್ನು ತಂದು ಮಾಡಲಾಗುವ ಚರ್ಚೆ ಅನಗತ್ಯವೆಂಬ ಮನೋಭಾವದಲ್ಲಿ ಮೂಡಿದ ಕವನ.

– ಚಿದಾನಂದ್ ಎನ್ ಕೋಟ್ಯಾನ್

twitter handle: @chidakotyan

chidakotyan@gmail.com

chidanand @ fb

ಒಲುಮೆಯ ಚಿಗುರು

ಒಲುಮೆಯ ಚಿಗುರು b
ನಿಸರ್ಗದ ಜೊತೆ ಸಾಮಾನ್ಯ ಜೀವಿಯಂತೆ ಬೆರೆತು ಬಾಳಬೇಕಾದ ಮಾನವ, ಅಭಿವೃದ್ದಿ ಎನ್ನುವ ಮಾನದಂಡದಿಂದ ಸಂಪೂರ್ಣ ಕುರುಡಾಗಿರುವುದರಿಂದ ಪರಿಸರ ಸಂರಕ್ಷಣೆ ವಾಸ್ತವದ ಬಹುಮುಖ್ಯ ಹೊಣೆ, ಅನಿವಾರ್ಯತೆ ಮತ್ತು ಸವಾಲು. ಸೃಷ್ಟಿಯ ಪ್ರಕ್ರಿಯೆಯಲ್ಲಿ ಹಾಗೂ ಕ್ರಿಯಾಶೀಲತೆಯಲ್ಲಿ ಪ್ರಕೃತಿ ಮಾತೆಯನ್ನು ಮೀರಿಸುವರಾರು? ಇಲ್ಲಿ “ಮಾತೆ” ಎಂಬ ಹೋಲಿಕೆ ಏಕೆ ಬಂತು? ಪ್ರಕೃತಿ – ಹೆಣ್ಣು ಇವರಿಬ್ಬರಲೂ ಸಾಮ್ಯತೆಯೇ? ಈ ಕುರಿತಾದ ಎರಡು ಆಯಾಮದಲ್ಲಿರುವ (ಪ್ರಕೃತಿ, ಹೆಣ್ಣು) ಕವನ

twitter handle: @chidakotyan

chidakotyan@gmail.com

chidanand @ fb

IMG-20170815-WA0001

ಕಾನ್ವೆಂಟ್ ವ್ಯಾಮೋಹ

School VS

ಹೇ.. ನನಗೇತಕೆ ಕಾಡುತಿಹೆ..
ಕಾನ್ವೆಂಟ್ ಸ್ಕೂಲೆಂಬ ವ್ಯಾಮೋಹ;
ಬೆಟ್ಟದಂತಿಹ ಆ ಖರ್ಚುವೆಚ್ಚಗಳ
ಮುಟ್ಟಲಾಗದೆ ಪಡುವ ವ್ಯಥೆಗಳ
ನಡುವೆ ಬಿಡದೆ ಕಾಡುವ ಪ್ರಶ್ನೆಯೊಂದೇ;
ನನ್ನ ಮಕ್ಕಳನ್ನೇಕೆ ಕಳುಹಿಸಲಾಗಿಲ್ಲ,
ಸರ್ಕಾರಿ ಶಾಲೆಯಿದ್ದರೂ ಸನಿಹ ?!ಅರಿವಾಗುತಿದೆ ನನಗೀಗ;
ಸರ್ಕಾರಿ ಶಾಲೆಯಲಿ ಹತ್ತು ಹಲವು
ಅವ್ಯವಸ್ಥೆಗಳೇ ಇದ್ದರೇನು?
ಇಂಗ್ಲೀಷ್ ಭಾಷೆಯಲಿ ಹಿಡಿತವನು
ಅಷ್ಟಾಗಿ ತರಿಸದೇ ಹೋದರೇನು?
ಕಷ್ಟವೇನುಂಬುದನೇ ಅರಿಯದ
ವಾಸ್ತವದ ಹತ್ತು ಹಲವು ಮಕ್ಕಳನ್ನದು
ತನ್ನಿಂತಾನೆ ರೂಪಿಸಲು ಶಕ್ತವಾಗಿರಲು;
ಏನಾದರೇನು? ಹೇಗಿದ್ದರೇನು?

ಮತ್ತೆ ಮತ್ತೆ ಅರಿವಾಗುತಿಹುದು;
ಶಿಕ್ಷಣವೆಂದರೆ ಅಂಕ ಗಳಿಕೆಯಲ್ಲ;
ಉದ್ಯೋಗದ ಮಾರ್ಗವೊಂದೇ ಅಲ್ಲ;
ಬದುಕ ಕಲಿಸುವ ಮಾಧ್ಯಮವದು.
ಪಂಥವೆಂಬ ವಿಭಾಗದಲಿ ಸಿಲುಕದೆ;
ವಿಶ್ವ ಮಾನವನಾಗಿಸುವ ಸಾಧನವದು.
ಮರೆಯಾಗುತಿಹ ದೇಸೀತನವನು
ಮರಳಿ ಪಡೆಯಲೆಂದಿರುವ ಅಸ್ತ್ರವದು;
ಸಂಸ್ಕೃತಿ ಸಂಸ್ಕಾರಗಳ ಸಾಕಾರವದು

ಪ್ರತಿಷ್ಠೆಯೆಂಬುದೇಕೆ ಇವೆರಡರಲಿ?
ವಿಕಾಸವಾಗಲೇಬೇಕಿದೆ ಗುಣಮಟ್ಟವು;
ಸರ್ಕಾರಿ ಶಾಲೆ ಜನಮಾನಸವ ಮುಟ್ಟಲು.
ತಪ್ಪೇನಿದೆ ಒಂದರಿಂದಲೇ ಇಂಗ್ಲೀಷ್
ಬರೀ ಭಾಷೆಯಾಗಿ ಕಲಿಕೆಯಾದಲ್ಲಿ;
ಕನ್ನಡವು ಹೃದಯದ ಭಾಷೆಯಾಗಿರಲು?
ಮಕ್ಕಳಲಿ ಜೀವನ ಮೌಲ್ಯವ ಅರಿಯಲು
ಶಿಕ್ಷಣದಲಿ ಬೇಕಿದೆ ಸರಳತೆಯ ಮೆಟ್ಟಿಲು;
ಸರ್ಕಾರಿ ಶಾಲೆ ಕಟ್ಟಿಹುದದನು ಸುತ್ತಲೂ!

                                                 – ಚಿದಾನಂದ್ ಎನ್ ಕೋಟ್ಯಾನ್
IMG-20170815-WA0001