ಆತ್ಮಾವಲೋಕನ

Athmavalokana
ಹತ್ತು ಹುಡುಗಿಯರ ಗುಂಪಿನಿಂದ ಒಂದು ಮುಖ ತಲೆ ಎತ್ತಿ ನೋಡಿತು….
ಹೌದು.. ಇದು ಅವಳೇ… ಅನನ್ಯ. ಇವಳೇಕೆ ಇಲ್ಲಿ… ಇವಳು ಯಾಕೆ ಚೈತನ್ಯ ಅಂದ್ಲು…
ನನಗರಿವಿಲ್ಲದ ಸತ್ಯ , ನೂರಾರು ಪ್ರಶ್ನೆಗಳಿಗೆ ಉತ್ತರದ ಅಗತ್ಯವಿದೆ.

ಭಾಗ-೧ ‘ಬಂಧನ’

ಮುಂಜಾನೆ ನಾಲ್ಕು ಗಂಟೆ, ಆಗ ತಾನೇ ಕಣ್ಣಿಗೆ ನಿದ್ರಾದೇವಿ ಒಲಿದು ಬಂದಿದ್ದಳಷ್ಟೆ. ಒಂದೇ ಸಮನೆ ಮೊಬೈಲ್ ರಿಂಗಣಿಸುತ್ತಿದೆ. ನಿದ್ದೆ ಕಣ್ಣಲ್ಲೇ “ಹಲೋ!” ಎಂದೆ.
“ಸರ್, ಇದು ಪೊಲೀಸ್ ಸ್ಟೇಷನ್ ನಿಂದ” ಎನ್ನುವಷ್ಟರಲ್ಲಿ ನಿದ್ದೆ ಹೇಳಹೆಸರಿಲ್ಲದಂತೆ ಮಾಯವಾಗಿತ್ತು.
“ಹೇಳಿ, ಸರ್”
“ಸರ್, ನಿಮ್ಮ ಪರಿಚಯದವರೊಬ್ಬರನ್ನು ನಿನ್ನೆ ರಾತ್ರಿ ಅರೆಸ್ಟ್ ಮಾಡಿದ್ದೇವೆ, ಒಮ್ಮೆ ಸ್ಟೇಷನ್ ಕಡೆ ಬಂದು ಹೋಗಿ”
“ಓಕೆ ಸರ್” ಎನ್ನುವಷ್ಟರಲ್ಲಿ ಕರೆ ಕಡಿತಗೊಂಡಿದ್ದು, ಯಾರಾಗಿರಬಹುದು ನನ್ನ ಪರಿಚಯದವರು ಎಂದು ತಲೆ ಕೆರೆದುಕೊಂಡು ಯೋಚಿಸುವ ಸರದಿ ನನ್ನದಾಗಿತ್ತು.
 ಮುಖ ತೊಳೆದು ಬಟ್ಟೆ ಬದಲಾಯಿಸಿಕೊಂಡು ಬೈಕ್ ಏರಿ ಸ್ಟೇಷನ್ ಕಡೆ ಪ್ರಯಾಣ ಸಾಗಿತು. ನಮ್ಮ ಮನೆಯಿಂದ ಒಂದು ಒಂದೂವರೆ ಕಿಲೋಮೀಟರ್ ದೂರ ಇದೆ ಅಷ್ಟೇ ಸ್ಟೇಷನ್ನಿಗೆ. ಬೈಕ್ ಸ್ಟಾಂಡ್ ಹಾಕಿ ನಿಲ್ಲಿಸಬೇಕು ಎನ್ನುವಷ್ಟರಲ್ಲಿ ಒಳಗಿನಿಂದ ಪೊಲೀಸ್ ಪೇದೆ ಹೊರಗೆ ಬಂದು “ಏನು ವಿಷಯ?” ಎನ್ನಬೇಕೆ..
“ಸರ್, ಕಾಲ್ ಮಾಡಿದ್ರಿ, ಈವಾಗಷ್ಟೇ  ಹಾಗೆ ಬಂದಿದ್ದು”
“ಇಲ್ಲವಲ್ಲ..”
“ಈವಾಗ ಹತ್ತು ನಿಮಿಷ ಮುಂಚೆ ಕಾಲ್ ಬಂದಿತ್ತು ಸರ್, ಯಾರನ್ನೋ ಅರೆಸ್ಟ್ ಮಾಡಿದ್ದೇವೆ, ಸ್ಟೇಷನ್ ಗೆ ಬನ್ನಿ ಅಂತ ಹೇಳಿದ್ರು”
“ಬನ್ನಿ ಕೂತ್ಕೊಳ್ಳಿ, SHO ಬಾತ್ ರೂಮ್ ಗೆ ಹೋಗಿದ್ದಾರೆ. ಅವ್ರು ಕಾಲ್ ಮಾಡಿರೋಕೂ ಸಾಕು, ಆದ್ರೆ ಇಲ್ಲಿ ಯಾರನ್ನೂ ಬಂಧಿಸಿಲ್ಲ”…
ಅಷ್ಟರಲ್ಲಿ ಒಳನಿಗಿಂದ, “ಯಾರು..? ಏನು ವಿಷಯ?”
‘ಸರ್, ನೀವು ಕಾಲ್ ಮಾಡಿದ್ರಾ ಇವರಿಗೆ’.. ಎಂದು ಅವರೊಳಗೆ ಮಾತು ಕತೆ ಪ್ರಾರಂಭವಾಯ್ತು. 
“ಇಲ್ಲವಲ್ಲ”
“ಅವನಿಗೆ ಯಾರೋ ಪೊಲೀಸ್ ಸ್ಟೇಷನ್ ಎಂದು ಯಾಮಾರಿಸಿರಬೇಕು, ಕಾಲ್ ಬಂದಿರೋ ನಂಬರ್ ನೋಡು ಒಮ್ಮೆ”
“ಸರಿ ಸರ್, ನೋಡ್ತೀನಿ”
“ನಿಮ್ಗೆ ಬಂದಿರೋ ನಂಬರ್ ಕೊಡಿ ನಾನು ಮಾತಾಡ್ತೀನಿ”
ನಾನು ನಂಬರ್ ಡಯಲ್ ಮಾಡಿ ಅವರ ಕೈಗೆ ಮೊಬೈಲ್ ಕೊಟ್ಟು, “ರಿಂಗ್ ಆಗ್ತಾ ಇದೆ.. ಸರ್..”
“ಹಲೋ ಸರ್ ಇದು ಸುಬ್ರಹ್ಮಣ್ಯ ಪೊಲೀಸ್ ಸ್ಟೇಷನ್ ನಿಂದ, ಇದು ಯಾವ ಸ್ಟೇಷನ್ ಸರ್…?” “ಓ ಹೌದಾ ಅವ್ರು ಇಲ್ಲಿ ಬಂದು ವಿಚಾರಿಸಿದ್ದರು ಸರ್ ನಮಗೆ ಮಾಹಿತಿ ಇರ್ಲಿಲ್ಲ”. ಸರಿ ಸರ್, ಅವರನ್ನು ಕಳಿಸಿಕೊಡ್ತೀನಿ”…
ಕಾಲ್ ಕಟ್ ಮಾಡಿ ಮೊಬೈಲ್ ಕೈಗೆ ಕೊಡುತ್ತಾ, “ಅದು ಮಡಿಕೇರಿ ಟೌನ್ ಸ್ಟೇಷನ್ ರೀ, ನೀವು ಅಲ್ಲಿಗೆ ಹೋಗಿ”…
“ಸರಿ ಸರ್, ಬರ್ತೀನಿ”
“ಓಕೆ, ಆರಾಮ ಹೋಗಿ, ಹಿಮ ಬೀಳ್ತಾ ಇದೆ”.
“ಓಕೆ ಸರ್, ಥ್ಯಾಂಕ್ಸ್”
ಈಗ ನಿಜವಾಗಿಯೂ ನನ್ನ ತಲೆ ಕೆಟ್ಟಿದೆ, ಯಾರಪ್ಪಾ ಇದು ಮಡಿಕೇರಿಯಲ್ಲಿ ಇರೋನು…ಈಗ ಹೋಗ್ಲೇಬೇಕಷ್ಟೇ ಮನೆಗೆ ಏನು ವಿಷಯ ಹೇಳಿಲ್ಲ (ಹೇಳೋಕೆ ನಂಗೂ ಗೊತ್ತಿಲ್ಲ). ಏನು ಮಾಡುವುದು.. ತಂಗಿಗೊಂದು ಮೆಸೇಜ್ ಹಾಕಿಬಿಟ್ಟೆ, “ಅರ್ಜೆಂಟಾಗಿ ಮಡಿಕೇರಿಗೆ ಹೋಗ್ತಾ ಇದ್ದೀನಿ, ಮಧ್ಯಾಹ್ನ ಬರ್ತೀನಿ ಮನೆಯಲ್ಲಿ ಏನೂ ಹೇಳೋದು ಬೇಡ, ಬಂದು ವಿಷಯ ಹೇಳ್ತೀನಿ.”
ಎರಡು ಗಂಟೆ ಪ್ರಯಾಣ ಸಾಗಿತು, ಗಂಟೆ ಆವಾಗ್ಲೇ ಏಳರ ಆಸುಪಾಸು. ಮಡಿಕೇರಿಯ ಕೊರೆಯುವ ಚಳಿಗೆ ಮೈ ಕೈ ಕಾಲು ನಡುಗುತ್ತಿತ್ತು. ನೇರವಾಗಿ ಸ್ಟೇಷನ್ ಕಡೆ ಹೋಗೋಣ ಆಮೇಲೆ ಎಲ್ಲಾ ಎಂದು ತಲೆ ಆಡಿಸಿ ಮೆಟ್ಟಿಲೇರಿದೆ.
ಒಳಗೆ ಬಂದು ನಿಂತಿದ್ದೇನೆ ಅಷ್ಟೇ, “ಹೇಳಿ ಸರ್, ಏನಾಗಬೇಕಿತ್ತು?”
“ಸರ್, ಕಾಲ್ ಮಾಡಿದ್ರು’
“ಓ, ನಿತಿನ್ ಆಲ್ವಾ’
“ಹೌದು ಸರ್”
“ಕೂತ್ಕೊಳ್ಳಿ, ಬಂದೆ ಈವಾಗ”..
“ಸರ್, ನಿತಿನ್ ಬಂದಿದ್ದಾರೆ, ಏನ್ ಮಾಡ್ಲಿ”.. ಎಂದು ಒಳಗೆ ಇರೋರಿಗೆ ಕೇಳ್ತಾ ಇದ್ದಾರೆ.
“ತಡಿಯಪ್ಪಾ, ಬರ್ತೀನಿ.. ಇರು..”
ಹಾಗೆ ಹತ್ತು, ಹದಿನೈದು ನಿಮಿಷ ಕಳೆದಿರಬಹುದು. ಒಳಗಿದ್ದ ಅಧಿಕಾರಿ ಹೊರಗಡೆ ಬಂದು,
“ಏನಾಗ್ಬೇಕಪ್ಪಾ ಆ ಹುಡುಗಿ ನಿಂಗೆ?”
“ಯಾರು ಸರ್?”
“ಯಾರಿಗೋಸ್ಕರ ಬಂದೆ ಈವಾಗ ನೀನು?”
ಅದೇ ಸರ್, ಯಾರನ್ನೋ ಅರೆಸ್ಟ್ ಮಾಡಿದ್ದೀರಾ ಅಂತ ಹೇಳಿದ್ರಿ, ಯಾರು ಅಂತ ಗೊತ್ತಾಗಿಲ್ಲ”…
“ಓ, ನಿಂಗೆ ಹೇಳಿಲ್ಲ ಅಲ್ವಾ, ಚೈತನ್ಯ ಅಂತ ಯಾರಾದ್ರೂ ಪರಿಚಯ ಇದ್ದಾರಾ?”
“ಇಲ್ಲ, ಸರ್”..
  “ಸರಿ, ಬಾ ಇಲ್ಲಿ”.. ಎಂದು ಒಳಗೆ ಕರೆದರೆ ನನ್ನ ತಲೆ ಗಂಟೆಗೆ 120 ಕಿ ಮೀ ಸ್ಪೀಡ್ ನಲ್ಲಿ ಯಾರಾಗಿರಬಹುದು ಎಂದು ಚಿಂತಿಸುತ್ತಾ ಇದೆ.
ಎದುರಲ್ಲೇ ಇರೋ ಲಾಕಪ್ ಒಳಗಡೆ ಇಣುಕಿ, “ಬಾರಮ್ಮಾ, ಎಲ್ಲಿದ್ದೀರಿ…? ನಿತಿನ್ ಬಂದಿದ್ದಾನೆ ನೋಡಿ”…
ಹತ್ತು ಹುಡುಗಿಯರ ಗುಂಪಿನಿಂದ ಒಂದು ಮುಖ ತಲೆ ಎತ್ತಿ ನೋಡಿತು….
ಹೌದು.. ಇದು ಅವಳೇ… ಅನನ್ಯ. ಇವಳೇಕೆ ಇಲ್ಲಿ… ಇವಳು ಹೇಗೆ ಚೈತನ್ಯ ಅಂದ್ಲು ಎಂಬ ನೂರಾರು ಪ್ರಶ್ನೆಗಳಿಗೆ ಉತ್ತರದ ಅಗತ್ಯವಿದೆ.
“ಏನು ಎದ್ದು ಬರೋಕೆ ಆಗಲ್ವಾ ನಿಂಗೆ?.. ಕರ್ದಿರೋದು  ಕೇಳ್ಸಲ್ವಾ ನಿಂಗೆ?”
ನಾನೇ ಸೆಲ್ ಪಕ್ಕ ಹೋಗಿ “ಸರ್, ಈ ಹುಡುಗಿಯ ಪರಿಚಯ ಇದೆ, ಏನು ವಿಷಯ ಅಂತ ಹೇಳಿ ಸರ್”…
“ಏನಾಗ್ಬೇಕು ನಿಂಗೆ ಈ ಹುಡುಗಿ?”..
ಏನು ಆಗ್ಬೇಕು ಅಂತ ಹೇಳೋದು… ಒಂದು ಒಂದೂವರೆ ಗಂಟೆ ಪ್ರಯಾಣದ ಪರಿಚಯ ಎನ್ನುವುದೇ ಅಥವಾ ತಿಂಗಳ ಸ್ನೇಹ ಎನ್ನೋದಾ ಅಥವಾ ಗಂಟೆಗಟ್ಟಲೆ ಮಾತಾಡ್ತೀವಿ ಅನ್ನೋದಾ ಒಂದೂ ಅರ್ಥ ಆಗ್ತಿಲ್ಲ…
“ಹಲೋ… ನಿನ್ ಜೊತೇನೇ ಕೇಳ್ತಾ ಇರೋದು.. ಹೇಗೆ ಪರಿಚಯ ನಿಮಗಿಬ್ಬರಿಗೂ?”
“ಸರ್, ಅವಳು ನನ್ನ ರಿಲೇಟಿವ್”
“ಮತ್ತೆ ಚೈತನ್ಯ ಅಂದ್ರೆ ಗೊತ್ತಿಲ್ಲ ಅಂದೆ?”
“ಹಾಗಲ್ಲ ಸರ್, ನಾವು ಅವಳನ್ನು ಅನನ್ಯ ಅಂತ ಕರೆಯೋದು, ರೆಕಾರ್ಡ್ಸ್ ನಲ್ಲಿ ಮಾತ್ರ ಅವ್ಳು ಚೈತನ್ಯ”.
“ಓ ದೇವನೊಬ್ಬ ನಾಮ ಹಲವು ಅಂದಂಗೆ ಆಲ್ವಾ”..
ಮುಗುಳ್ನಕ್ಕು ಸುಮ್ಮನಾದೆ.
“ಸರ್, ವಿಷಯ ಏನು ಅಂತ ಹೇಳಿಲ್ಲ”
“ಹೇಳೋದು ಏನು.. ರಾತ್ರಿ ಅರೆಸ್ಟ್ ಮಾಡಿದ್ದೇವೆ ಅಂದ್ರೆ ಏನು ವಿಷಯ ಇರ್ಬೋದು?..
“ಗೊತ್ತಿಲ್ಲ ಸರ್”..
 “ನಿನ್ನೆ ನೈಟ್ ಪಕ್ಕದ ಲಾಡ್ಜ್ ರೈಡ್ ಮಾಡಿದ್ವಿ, ಒಳಗೆ ಇರೋರು ಎಲ್ಲರನ್ನೂ ಅಲ್ಲಿಂದ ಎಳ್ಕೊಂಡು ಬಂದಿರೋದು. ಆದ್ರೆ ಇವಳು ಮಾತ್ರ ಹೊಸ ಮುಖ, ಅಲ್ಲದೆ ಒಬ್ಬಳೇ ಇದ್ದಳು ರೂಮಲ್ಲಿ ಅದ್ಕೆ ಅವಳ ಬಗ್ಗೆ ಸ್ವಲ್ಪ ಮಾನವೀಯತೆ ತೋರಿಸ್ತಾ ಇದ್ದೀವಿ. ಅವಳು ಹೇಳೋದು ಮೈಸೂರು ಬಸ್ ಮಿಸ್ ಆಗಿದ್ದಕ್ಕೆ ಅವ್ಳ ಫ್ರೆಂಡ್ ಯಾರೋ ರೂಂ ಮಾಡಿ ಕೊಟ್ಟ ಅಂತ ಸತ್ಯನೋ ಸುಳ್ಳೋ ಆ ಪರಮಾತ್ಮನಿಗೇ ಗೊತ್ತು”.
“ಇಲ್ಲ ಸರ್, ಅವಳು ಅಂತ ಹುಡುಗಿ ಅಲ್ಲ, ಮೈಸೂರಿನಲ್ಲಿ ಕೆಲಸ ಮಾಡ್ತಾ ಇದ್ದಾಳೆ, ಅಮ್ಮನಿಗೆ ಹುಷಾರಿಲ್ಲ ಅಂತ ಬಂದಿದ್ಲು”.
“ಹುಂ, ಸರಿ, ಸಾಹೇಬರು ಬರಲಿ ಆಮೇಲೆ ಕಳುಹಿಸಿ ಕೊಡ್ತೀನಿ”.
“ಸರಿ ಸರ್, ಅವಳ ಜೊತೆ ಮಾತಾಡ್ಬೋದ..?”
“ಸರಿ, ಐದು ನಿಮಿಷ ಅಷ್ಟೇ, ಬೇಗ ಹೊರಗೆ ಬನ್ನಿ”
“ಓಕೆ ಸರ್, ಥ್ಯಾಂಕ್ಸ್”
ನಿಧಾನಕ್ಕೆ ಸೆಲ್ ಬಳಿ ಬಂದು ಎಲ್ಲರ ಮುಖವನ್ನೂ ನೋಡಿದೆ, ಹೌದು ಪೊಲೀಸ್ ಹೇಳಿದಂತೆ ಅವರೆಲ್ಲರೂ ರಾತ್ರಿ ರಾಣಿಯರೇ. ಅವರ ನಡುವೆ ಇವಳೇನು ಎಂದು ನನಗೇ ಅರ್ಥ ಆಗ್ತಾ ಇಲ್ಲ.
“ಅನು, ಇಲ್ಲಿ ಬಾ” ಎಂದೆ. ಕಣ್ಣೀರ ಕೊಡಿ ಹರಿದು ಮುಖದ ಕಳೆಯೇ ಕಳೆದು ಹೋಗಿತ್ತು
“ಅಣ್ಣಾ ಈವಾಗ ಏನೂ ಕೇಳಬೇಡ, ಹೊರಗಡೆ ಬಂದು ಎಲ್ಲ ವಿಷಯ ಹೇಳ್ತೀನಿ”.
“ಸರಿ, ನೀನು ಏನೂ ತಪ್ಪು ಮಾಡಿಲ್ಲ ಎಂದು ನಂಬಿದ್ದೇನೆ, ಅಳೋದನ್ನು ಮೊದಲು ನಿಲ್ಲಿಸು”
“ಸರಿ”
“ಸರಿ, ನಾನು ಹೊರಗೆ ಇದ್ದೀನಿ” ಎಂದು ಹೊರಗೆ ಬಂದೆ.
ಗಂಟೆ 9 ಆಗ್ತಾ ಇದೆ, ಹೊಟ್ಟೆ ತಾಳ ಹಾಕುತ್ತಿತ್ತು, ಪಾಪ ಅದಕ್ಕೇನು ಗೊತ್ತು ಮನದ ತಳಮಳ.. ಆಕೆ ಅಪರಿಚಿತೆಯಾ ಎಂದರೆ ಅಲ್ಲ ಎನ್ನಲೂ ಸಾಧ್ಯವಿಲ್ಲ. ಪರಿಚಿತಳೇ ಎಂದರೆ ಹೌದು ಎನ್ನಲೂ ಧೈರ್ಯವಿಲ್ಲ. ಅಷ್ಟರಲ್ಲಿ ಸಾಹೇಬರು ಬಂದು ಛೆ0ಬರ್ ಬಳಿ ಕರೆದಿದ್ದು ಆಯ್ತು. ಅದೇ ಹಿಂದಿನ ಪರಿಚಯ ಪತ್ರ ಓದಿ ಮುಗಿಸಿದೆ.
“ಸರಿ, ಆ ಹುಡುಗಿನಾ ಕರ್ಕೊಂಡು ಬನ್ನಿ”..
“ಏನಮ್ಮಾ, ನಿಂಗೆ ರಾತ್ರಿ ಜರ್ನಿ ಯಾಕೆ ಬೇಕಾಗಿತ್ತು?.. ಈವಾಗ ಬೇರೆ ಏನಾದರೂ ಸಮಸ್ಯೆ ಆಗಿದ್ರೆ ಏನು ಮಾಡ್ತಾ ಇದ್ದೆ?. ಹೀಗೆ ಹಲವು ಪ್ರಶ್ನೆ, ಬುದ್ಧಿ, ಮಾತು ಎಲ್ಲವೂ ಬಂತು. ಕೊನೆಗೆ ಕಾನ್ಸ್ಟೇಬಲ್ ನ ಕರೆದು ಸಣ್ಣ ಕೇಸ್ ದಾಖಲು ಮಾಡಿ ಬಿಡೋಕೆ ಹೇಳಿ ಬಿಟ್ರು. ನನಗೋ ಕೈಯಲ್ಲಿ ಇದ್ದ ಜೀವ ಬಾಯಿಗೆ ಬಂದಂತೆ ಆಯಿತು. ಹೇಗಾದರೂ 10 – 10:30 ಆಗೊವಷ್ಟರಲ್ಲಿ ಸ್ಟೇಷನ್ ಮೆಟ್ಟಿಲು ಇಳಿದು ಹೊರಗೆ ಬಂದೆ.
“Sorry ಅಣ್ಣಾ” ಅಂದ್ಳು. ನನಗೆ ಪಿತ್ತ ನೆತ್ತಿ ಮೇಲೆ ಏರಿ ಹೋಗಿದೆ. “ಈವಾಗ ಸುಮ್ನಿರು, ನಾಷ್ಟ ಮಾಡೋದಿದ್ರೆ ಬಾ ಜೊತೆಗೆ, ಇಲ್ಲ ಅಂದ್ರೆ ಇಲ್ಲೇ ಇರು. ನಾನು ಮಾಡ್ಕೊಂಡು ಬರ್ತೀನಿ” ಎಂದು ಅವಳ ಮುಖವನ್ನು ನೋಡಿದೆ. ಪಾಪ ಅವಳಿಗೂ ಹಸಿವಾಗಿರಬೇಕು ಗಪ್ ಚುಪ್ ಅನ್ನದೆ ನನ್ನ ಹಿಂಬಾಲಿಸಿದಳು. ಹೋಟೆಲ್ ಒಳಗೆ ಬಂದವಳಿಗೆ “ಹೋಗಿ ಚೆನ್ನಾಗಿ ಮುಖ ತೊಳೆದು ಬಾ, ಆಮೇಲೆ ತಿಂಡಿ ತಿನ್ನೋಣ” ಸರಿ ಎಂಬಂತೆ ತಲೆಯಾಡಿಸಿ ಹೋಗಿ ಬಂದು ತಿಂಡಿ ತಿನ್ನುತ್ತಾ ಏನೋ ಹೇಳಲು ಬಂದವಳ ಬಾಯಿ ಮುಚ್ಚಿಸಿ, ತಿಂಡಿ ತಿಂದು ಮುಗಿಸು ಎಂಬಂತೆ ಕಣ್ಣಲ್ಲೇ ಸೂಚನೆ ನೀಡಿದೆ.
ಬಂದು ಬೈಕ್ ಏರಿ “ಮನೆ ಎಲ್ಲಿ ಮನೆಗೆ ಬಿಡ್ತೀನಿ”
“ಬೇಡ ನಾನು ಬಸ್ ಲಿ ಹೋಗ್ತೀನಿ”
“ಮರ್ಯಾದೆಯಿಂದ ಬಾ ಕುಳಿತುಕೋ, ಮನೆಗೆ ತಲುಪಿಸೋದು ಈವಾಗ ನನ್ನ ಜವಾಬ್ದಾರಿ. ಮತ್ತೆ ಏನೆ ಆದರೂ ನಂಗೇನೂ ಇಲ್ಲ”.
“ಸರಿ ನನ್ನ ಬ್ಯಾಗ್ ಲಾಡ್ಜ್ ನಲ್ಲಿ ಇದೆ, ತಗೊಂಡು ಬರ್ತೀನಿ”
“ನಾನೂ ಬರ್ತೀನಿ”
“ಬೇಡ, ನಾನು ತಗೋಬರ್ತೀನಿ”
“ಏನು… ನಾನು ಬಂದ್ರೆ ಏನಾದರೂ ಸಮಸ್ಯೆ ಇದ್ಯಾ?”
“ಹಾಗೇನಿಲ್ಲ”
“ಸರಿ, ಬೇಗ ತಗೊಂಡು ಬಾ”..
ಹಾಗೆ ಹೋದವಳು ಲಗೇಜ್ ಹಿಡ್ಕೊಂಡು ಬಂದು “ಹೊರಡೋಣ, ಸ್ವಲ್ಪ ಮುಂದೆ ಹೋಗಿ ನಿಲ್ಸಿ, ಮಾತಾಡ್ಬೇಕು ನಿಮ್ಮ ಜೊತೆ”..
ಸರಿ ಎಂದು ಹೊರಟೆ,
ಮೂರ್ನಾಲ್ಕು ಕಿಲೋಮೀಟರು ಮುಂದೆ ಬಂದು ಬೈಕ್ ಸೈಡ್ ಹಾಕಿ “ಹೇಳು ಈವಾಗ” ಎಂದೆ.
“ನಿಮಗೆ ಏನನಿಸುತ್ತದೆ ಈವಾಗ?”
“ಅಂದರೆ?”
“ನನ್ನ ಬಗ್ಗೆ”..
“ಏನೋ ಎಲ್ಲೊ ನನಗರಿವಿಲ್ಲದ ಸತ್ಯ ನಿನ್ನ ಬಳಿ ಸುಳಿದಾಡುತ್ತಿದೆ”.
“ಹೌದು ನಾನು ತಪ್ಪು ಮಾಡಿದ್ದೇನೆ”…..
ನನಗೆ ಏನು ಹೇಳೋದು ಅಂತ ಗೊತ್ತಾಗ್ತಾ ಇಲ್ಲ. ಹಾಗೆಂದು ಅವಳನ್ನು ಅಲ್ಲೇ ಬಿಟ್ಟು ಬರೋದು ಬೇಡ ಎಂದು ಮನೆಗೆ ತಲುಪಿಸಿ ನಾನು ನನ್ನ ಮನೆಯ ದಾರಿ ಹಿಡಿದೆ…

ಭಾಗ-೨  ಅಪ್ಪ- ಅಮ್ಮ ಮತ್ತು ಮುದ್ದು ತಂಗಿ ಅಚ್ಚು 

ಹಾಯ್… ನಾನು ನಿತಿನ್, ಹೇಳ್ಕೊಳ್ಳೋಕೆ ನನ್ ಬಗ್ಗೆ ಏನೂ ಇಲ್ಲ. ಸಣ್ಣ ಸುಖೀ ಸಂಸಾರ. ಅಪ್ಪ ಅಮ್ಮನ ಜೊತೆ ಮುದ್ದು ತಂಗಿ. ಇವರ ಜೊತೆ ನೂರಾರು ಗೆಳೆಯರು ಅಲ್ಲ ಅಭಿಮಾನಿ ದೇವರುಗಳು.. ಯಾಕೆಂದರೆ ನಂಗೆ ಬಿದ್ದ ಏಟಿಗೂ ತಾಟಿಗೂ ಇಲ್ಲೇ ಕಾರಣಕರ್ತರು. ಮಾಡೋಕೆ ಏನೂ ಕೆಲಸ ಇಲ್ಲ, ಆದರೂ ನಿದ್ದೆ ಮಾಡೋಕೂ ಸಮಯವಿಲ್ಲ! ಕ್ರಿಕೆಟ್ ನನ್ನ ಜೀವ, ಊಟ ನಿದ್ದೆ ಬಿಟ್ಟು ಅದರಲ್ಲೇ ಕಾಲಹರಣ. ಹಾಗಂತ ನಾನೇನೂ ಸಚಿನ್ ತೆಂಡೂಲ್ಕರೂ ಅಲ್ಲ ರಾಹುಲ್ ದ್ರಾವಿಡೂ ಅಲ್ಲ, ಅವರಂತೆ ಬೆಳೆಯಬೇಕೆಂಬ ಹಂಬಲವೂ ಇಲ್ಲ. ಓದಿದ್ದು ಬಿಎಸ್ಸಿ ನರ್ಸಿಂಗ್ ಆದ್ರೆ ನನಗೆ ಹಿತವೆನಿಸುವ ಉದ್ಯೋಗ ದೊರಕಿಲ್ಲ ಇಷ್ಟೇ ನಾ ನನ್ನ ಬಗ್ಗೆ ಹೇಳುವುದಕ್ಕೆ ಸಾಧ್ಯ.
ಮುಂದಿನ ವರ್ಷನ್ ಬೇಕು ಅಂದ್ರೆ ಅಪ್ಪ ಅಮ್ಮನೇ ಬರ್ಬೇಕು. ಮುತ್ತು ರತ್ನಗಳು ಸಿಗಬೇಕೆಂದರೆ ತಂಗಿಯಿರಬೇಕು. ಸಾಹಸ ಸಸ್ಪೆನ್ಸ್ ಥ್ರಿಲ್ಲರ್ ಬೇಕೆಂದರೆ ಅಭಿಮಾನಿಗಳು ಬರಬೇಕು. ವಿಲನ್ ಪಾತ್ರ ಕಾಣಬೇಕಾದರೆ ಅಕ್ಕ ಪಕ್ಕದ ಮನೆಯವರೂ ಸಾಕು. ಆದ್ರೂ ಒಂಥರಾ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ ತರ ಎಲ್ಲರನ್ನೂ ಖುಷಿಯಾಗಿಟ್ಟಿದ್ದೀನಿ.
ಹಾ ಈಗ ನಾನು ಹೇಳೋಕೆ ಬಂದಿದ್ದು ಏನು ಅಂದ್ರೆ ನಾಡಿದ್ದು ನನ್ ಅಭಿಮಾನಿಯೊಬ್ಬನ ತಂಗಿಯ ಮದುವೆ ಅಂತೆ, ಮನೆಗೆ ಬಂದು ಫಲ-ತಾಂಬೂಲ ಸಹಿತ ಲಗ್ನ ಪತ್ರಿಕೆ ತಲುಪಿಸಿದ್ದಾನೆ. ಹೋಗ್ದೇ ಇದ್ರೆ ತಾಳಿ ಕಟ್ಟಲ್ಲಾಂತ ವರನೂ ಕೂತಿರುವಾಗ ನಾನ್ಯಾಕೆ ಹೋಗದಿರಲಿ… ಅಪ್ಪ ಅಮ್ಮನ ಜೊತೆ ಮೂರು ದಿನಗಳ ಹಿಂದೆನೇ ನೋಟೀಸ್ ಜಾರಿ ಮಾಡಿದ್ದೆ, ಅಮ್ಮನ ಬಳಿ ರಿಸಲ್ಟ್ ತಿಳ್ಕೊಂಡು ಬರ್ತೀನಿ.
“ಲೇ ಕೋಣ.. ಫಸ್ಟ್ ಹೋಗಿ ಈ ಕರಡಿ ರೂಪನಾ ಕೋತಿ ತರ ಆದ್ರೂ ಮಾಡ್ಕೊಂಡು ಬಾರೋ ಮದ್ವೆಗೆ ಹಿಂಗೆ ಹೋದ್ರೆ ಹುಡುಗಿ ನಿನ್ನ ನೋಡಿ ಹೆದರಿ ಬಿಟ್ಟಾಳು ಕಣೋ”.
“ಅಮ್ಮಾ ಮದ್ವೆ ನಂಗಲ್ಲಮ್ಮಾ ಪಮ್ಮುದು..”
“ನೀನು ಹಿಂಗೆ ಹೋದ್ರೆ ಶಿವ ಪೂಜೆಗೆ ಕರಡಿ ಹೋದಂಗೆನೆ”
“ಅಣ್ಣಾ ಅಮ್ಮ ನಿಂಗೆ ಏನೋ ಕ್ಲೂ ಕೊಡ್ತಾ ಇದ್ದಾಳೆ ನಿಂಗೆ ಅರ್ಥ ಆಗ್ತಾ ಇಲ್ಲ ಅಷ್ಟೇ”
“ಏನೇ ಅದೂ…?”
“ಅಮ್ಮಾ ಅವ್ನು ಹಂಗೇ… ಹೋಗ್ಲಿ ಬಿಡು ಅವನನ್ನು ಕೋತಿ ಮಾಡ್ಬೇಕು ಅಂತ ಏನೂ ಇಲ್ಲ ಅವ್ನು ಕೋತೀನೇ…”
“ಲೇ ಗೂಬೆ ಏನು ಪ್ಲ್ಯಾನ್ ನಿಂದು..? ನೀನು ಬರ್ತೀಯಾ…?”
“ಇಲ್ಲಪ್ಪ.. ನಾನು ಬರಲ್ಲ.”
“ಹುಂ ಸರಿ ಬಿಡು..”
“ನಾಳೆ ರಾತ್ರಿ ಹೊರಡ್ತೀನಿ ನಾನು.. ಎಲ್ಲ ಪ್ಯಾಕ್ ಮಾಡಿ ಇಡೇ ಅಚ್ಚು..”
“ಅಮ್ಮಂಗೆ ಹೇಳು.. ನಂಗಾಗಲ್ಲ..”
“ಹೌದು, ನಂಗೆ ಅದೇ ಕೆಲಸ ಬೇಕಾದ್ರೆ ಮಾಡ್ಕೊ…”
“ಅಚ್ಚು.. ಪ್ಲೀಸ್ ರೆಡಿ ಮಾಡಿ ಕೊಡೇ…”
“ಹು ಸರಿ ಫಸ್ಟ್ ಡೈರಿ ಮಿಲ್ಕ್ ತಗೋ ಬಾ ಆಮೇಲೆ ಮಾಡ್ತೀನಿ!”
“ಇದಕ್ಕೂ ಡೈರಿ ಮಿಲ್ಕಾ?!”
“ಬೇಡ ಅಂದ್ರೆ ಬೇಡ..”
“ಸರಿ ಸರಿ.. ನೀನು ರೆಡಿ ಮಾಡಿ ಇಡು ನಾನು ಗ್ರೌಂಡ್ ಗೆ ಹೋಗಿ ಬರ್ತೀನಿ”..
ನೋಡಿದ್ರಲ್ಲ ಇದೇ ನನ್ನ ಪ್ರಪಂಚ, ಸದಾ ಕಚ್ಚಾಡುವಂತೆ ಕಂಡರೂ ಪ್ರೀತಿ ಸ್ನೇಹದ ಒಳ ಹರಿವಿಗೇನೂ ಕಮ್ಮಿಯಲ್ಲ.
ಹಾಗೆ ನನ್ನ ಬಳಗದ ಪರಿಚಯ ಮಾಡೋಕೆ” ಮರೆತೇ ಬಿಟ್ಟೆ. ಅಪ್ಪ ದಿವಾಕರ ಬ್ಯಾಂಕ್ ಉದ್ಯೋಗಿ, ಅಮ್ಮ ಕೃಷ್ಣವೇಣಿ ಸದ್ಯ ಗೃಹಿಣಿ . ಇನ್ನು ನನ್ನ ಅಚ್ಚು ಯಾನೆ ಅರ್ಚನಾ ಕಾಲೇಜು ಮೆಟ್ಟಿಲು ಹತ್ತಿ ಇಳಿದು ಬರ್ತಾ ಇದ್ದಾಳೆ ಎನ್ನಬಹುದು ಯಾಕೆಂದರೆ ಓದಿನ ಬಗ್ಗೆ ಹೇಳೋಕೆ ಹೋದ್ರೆ ಅವಳೇ ಹಿರಿಯವಳೆಂಬ ಕೀಳರಿಮೆಯೋ ಅಥವಾ ಹೆಮ್ಮೆಯೋ ನಾ ಅರಿಯೆ.
ಅಂತೂ ಇಂತೂ ರಾತ್ರಿಯಾಗಿ ಬೆಳಕು ಹರಿದಿತ್ತು, ನೇಸರ ನೆತ್ತಿಯೇರಿ ನಗುತಿದ್ದ.
ಮದುವೆಗೆ ಹೋಗ್ಬೇಕು ಅಂತ ಕಾಲಿಗೆ ಗೆಜ್ಜೆ ಕಟ್ಟಿ ಕುಣಿಯೋಕೆ ಮಾತ್ರ ಗೊತ್ತು ತಯಾರಿ ಮಾಡೋಕೆ ಬರೋಲ್ಲ ಇನ್ನೂ ಚಾಪೆ ಬಿಟ್ಟು ಏಳೋಕೆ ಆಗಿಲ್ಲ ಅಮ್ಮನ ಅಬ್ಬರದ ಪ್ರಚಾರ ಕಿವಿಗೆ ಇಂಪಾಗಿ ಕೇಳುತ್ತಿದೆ.
“ಅಚ್ಚೂ ಅಮ್ಮ ಯಾಕೆ ತುಂಬಾ ಚೆನ್ನಾಗಿ ಹಾಡ್ತಾ ಇದ್ದಾರೆ!…” ಎಂದು ಬೆಡ್ ಶೀಟ್ ಒಳಗಿಂದಾನೆ ಕಿಚಾಯಿಸಿದೆ.
“ಇದಕ್ಕೇನೂ ಕಮ್ಮಿಯಿಲ್ಲ.. ಎದ್ದು ಬೇಗ ಟೀ ಕುಡಿದರೆ ಒಳ್ಳೆಯದು ಇಲ್ಲಾಂದ್ರೆ ಮತ್ತೆ ಊಟಕ್ಕೆ ಎದ್ರೆ ಸಾಕು!”
ಇದು ಬೆದರಿಕೆ ನಾ ಅಥವಾ ಸಲಹೆ ನಾ ಗೊತ್ತಿಲ್ಲ. ಮನಸ್ಸಿಲ್ಲದ ಮನಸ್ಸಿನಿಂದ ಎದ್ದು ಫ್ರೆಶ್ ಆಗಿ ಅಮ್ಮನ ಕೈ ರುಚಿ ಸವಿಯೋಕೆ ತಯಾರಾದೆ.
“ಅಮ್ಮಾ ಅಚ್ಚು ಎಲ್ಲಿ?…”
“ಹಾ ಯಾವಾಗಲೂ ಎಲ್ಲಿ ಹೋಗ್ತಾಳೆ?”
“ಕಾಲೇಜು ಅಂತ ಹೋಗ್ತಾಳೆ… ಗೊತ್ತಿಲ್ಲ ಸರಿ!” ಎನ್ನಲು
“ನೀವು ಇಬ್ಬರೂ ಸೇರಿ ನನ್ನ ಗೋಳು ಹುಯ್ಕೊಳ್ಳೋಕಷ್ಟೇ ಆಗ್ಬೋದು, ನನಗೇನೂ ಉಪಕಾರ ಇಲ್ಲ.. ಹೇಗೆ ನನ್ನ ಹೊಟ್ಟೇಲಿ ಹುಟ್ಟಿದ್ರೋ ನಿಮಿಗೇ ಗೊತ್ತು…’ ಎನ್ನುವಷ್ಟರಲ್ಲಿ ನಾ ಎದ್ದು ಕೈ ತೊಳೆದು ಬಂದೆ.
ಆವಾಗ್ಲೇ ಅಮ್ಮಂಗೆ ಅರಿವಾಗಿದ್ದು, ಬೆನ್ನಿಂದನೆ ಬಂದು, “ಸಾರಿ ಕಣೋ ಬೇಜಾರಾಗ್ಬೇಡ, ಯಾಕೋ ನೀನು ಹೊರಗಡೆ ಹೋಗ್ತಿದ್ದೀಯ ಅನ್ನೋವಾಗ ತುಂಬಾ ಮಿಸ್ ಮಾಡ್ಕೊತ್ತಿದ್ದೀನಿ…”
“ಹೋಗ್ಲಿ ಬಿಡು ನಾನೇನು ನಿಮ್ಮನ್ನೆಲ್ಲ ಬಿಟ್ಟು ದೂರ ಹೋಗ್ತಾ ಇರೋದಾ..? ಎರಡು ದಿನ ಅಷ್ಟೇ ಮತ್ತೆ ಇಲ್ಲಿಗೆ ಬರ್ತೀನಿ ಬಿಡು”.. ಎಂದು ನಗುತ್ತಾ ಹೇಳ್ದೆ.
“ಸರಿ, ಅಪ್ಪ ಬೇಗ ಬರ್ತೀನಿ ಅಂತ ಹೇಳಿದ್ರು ಎಲ್ಲ ರೆಡಿ ಮಾಡಿ ಇಡು ಹೋಗು..”
“ಅಚ್ಚು ರೆಡಿ ಮಾಡ್ತೀನಿ ಅಂತ ಹೇಳಿದ್ಳು ಮಾಡಿಲ್ಲವಾ?”
“ಹೋಗಿ ನೋಡು, ಅವ್ಳಿಗೆ ನೆನಪು ಇತ್ತೋ ಇಲ್ವೋ ಬೆಳಿಗ್ಗೆ ಬೇಗ ಎದ್ದು ನೋಟ್ಸ್ ಕಂಪ್ಲೀಟ್ ಮಾಡೋಕೆ ಇದೆ ಅಂತಿದ್ಳು..”
ಹೋಗಿ ನೋಡಿದರೆ ಬೀರು ಒಳಗಿದ್ದ ಬ್ಯಾಗ್ ಹಾಗೇ ಇದೆ.
“ಅಮ್ಮಾ, ಅವ್ಳಿಗೆ ಮರ್ತೋಗಿದೆ ಬರ್ಲಿ ಇದೆ ಅವ್ಳಿಗೆ… ಹೇಗಿದ್ರೂ ಬಸ್ 9 ಗಂಟೆಗೆ ಅಲ್ವಾ ಆಮೇಲೆ ರೆಡಿ ಮಾಡಿದ್ರೆ ಆಯ್ತು..”
“ಸರಿ”
“ನಾನು ಅಂಗಡಿಯವರೆಗೆ ಹೋಗಿ ಬರ್ತೀನಿ ಅಮ್ಮ..”
“ಸರಿ ಕಣೋ.. ಸಂಜೆ ಅವಳನ್ನು ಕಾಲೇಜಿನಿಂದ ಕರ್ಕೊಂಡು ಬಾ”
“ಹುಂ ಸರಿ…” ಎಂದು ಬೈಕ್ ಏರಿ ಹೊರಟೆ.
ಮನೆ ಪಕ್ಕದ ಅಂಗಡಿಗೆ ಬಂದು ಗೆಳೆಯರ ಜೊತೆ ಹರಟೆ ಹೊಡೆಯುತ್ತಾ ಕೂತವರಿಗೆ ಸಂಜೆಯಾಗಿದ್ದು ಗೊತ್ತೇ ಇಲ್ಲ. ಒಂದು ಡೈರಿ ಮಿಲ್ಕ್ ತಗೊಂಡು ಗೆಳೆಯರಿಗೆ ಬಾಯ್ ಹೇಳಿ ಕಾಲೇಜು ಕಡೆ ಹೊರಟೆ. ಅದಾಗಲೇ ಕಾಲೇಜು ಬಿಟ್ಟು ವಿದ್ಯಾರ್ಥಿಗಳು ನಾ ಮುಂದು ತಾ ಮುಂದು ಎಂಬಂತೆ ಏದುಸಿರು ಬಿಡುತ್ತಾಮೆಟ್ಟಿಲು ಇಳಿಯುತ್ತಿದ್ದಾರೆ.
“ಏನಣ್ಣಾ ಇಲ್ಲಿ..?” ಎಂದು ಅಚ್ಚು ಅಚ್ಚರಿಯೆಂಬಂತೆ
“ನಿಂಗೆ ಕಾಯ್ತಾ ಇದ್ದೀನಿ”..
“ಅಲ್ಲ.. ಕಾಳು ಹಾಕೋಕೆ ಬಂದ್ಯಾ ಹೆಂಗೆ?!”
“ಸುಮ್ನೆ ಬರ್ತೀಯಾ..? ಇದಕ್ಕೇ ನಾನು ಬರಲ್ಲ ಅಂತ ಹೇಳೋದು ಎಂದು ಮುಖ ಸಿಂಡರಿಸಿಕೊಂಡು ಹೇಳ್ದೆ..”
“ಆಯ್ತಪ್ಪಾ… ನಡಿ ಹೋಗೋಣ… ಏನು ತಾವು ಇವತ್ತು ಈ ಕಡೆ ಬಂದಿದ್ದು?”
“ಅಮ್ಮ ಹೇಳಿದ್ರು ..ಸೋ”
“ಹೋ..”
“ಹೇ ಅಣ್ಣಾ.. ನೀನು ಇವತ್ತಲ್ವಾ ಹೋಗೋದು?..”
“ಹುಂ ಹೌದು.. ಯಾಕೆ?”
“ಸಾರಿ ಕಣೋ ನಿನ್ನೆ ಪ್ಯಾಕ್ ಮಾಡೋಕೆ ಮರ್ತೇ ಹೋಯ್ತು..”
“ಹೂ ಗೊತ್ತಾಯ್ತು.. ಈಗ ಹೋಗಿ ಫಸ್ಟ್ ಅದೇ ಕೆಲಸ ನಿಂಗೆ..”
“ಓ ಅದ್ಕೆ ಅಲ್ವಾಇಷ್ಟು ದಿನ ಇಲ್ಲದ ಪ್ರೀತಿ ಈವಾಗ ಬಂದಿದ್ದು.. ಮನೇಲೇ ಬಿದ್ದುಕೊಂಡು ಇರ್ತೀಯಾ ಆದ್ರೆ ಇದಕ್ಕೆ ನಾನೇ ಆಗ್ಬೇಕು ಅಲ್ವಾ..”
“ಸಾರಿ ಅಚ್ಚು..”
“ಏಯ್ ಯಾಕೋ ಏನಾಯ್ತು?”
“ಏನಿಲ್ಲ”.. ಎನ್ನುವಷ್ಟರಲ್ಲಿ ಮನೆ ತಲುಪಿದೆವು. ನೇರ ರೂಂಗೆ ಹೋಗಿ ಬಾಗಿಲು ಹಾಕಿಕೊಂಡು ನನ್ನಷ್ಟಕ್ಕೆ ಕೂತೆ. ಹೊರಗಿನಿಂದ ಅಮ್ಮ ಅಚ್ಚುಗೆ ಬಯ್ಯುತ್ತಾ ಇರೋದು ಕೇಳ್ತಾ ಇದೆ. ಬಾಗಿಲು ತೆರೆದು ಅಮ್ಮ ಅವ್ಳಿಗೆ ಯಾಕೆ ಬೈತೀರಾ ಅವ್ಳು ನಿಮ್ಮ ಮಗಳು ನೆನಪಿರ್ಲಿ ಅಂದಿದ್ದೇ ತಡ ಗಿಜಿ ಗಿಜಿ ಅನ್ನುತ್ತಿದ್ದ ಮನೆಯಲ್ಲಿ ನೀರವ ಮೌನ. ಸ್ವಲ್ಪ ಹೊತ್ತಿನ ಬಳಿಕ ಅಮ್ಮನ ಬಿಕ್ಕಳಿಕೆ ಕೇಳ್ತಾ ಇದೆ. ಸಾರಿ ಅಮ್ಮ ತಪ್ಪಾಯ್ತು ಅಂದಿದ್ದಕ್ಕೆ ಬಿಗಿದಪ್ಪಿ “ಯಾಕೋ ಹಿಂಗೆಲ್ಲ ಮಾಡ್ತೀಯಾ…?”
“ಹೇ..ಇಲ್ಲ ಅಮ್ಮಾ ಯಾಕೋ ಬೇಜಾರು ಆಯ್ತು ಅದ್ಕೆ…”
“ಬಾಯಿ ಮುಚ್ಚಿ ಕೂತ್ಕೋ, ಏನೂ ಹೇಳೋದು ಬೇಡ..” ಎಂದು ಏನೋ ಹೇಳಲು ಬಂದವನ ತಡೆ ಹಿಡಿದರು.
“ಸರಿ” ಎಂದು ತಲೆ ಅಲ್ಲಾಡಿಸಿ ನೇರವಾಗಿ ರೂಂ ಸೇರಿದ್ದೆ.
ಇದೆಲ್ಲವನ್ನೂ ನೋಡುತ್ತಿದ್ದ ಅಚ್ಚು, ಅಮ್ಮ ಯಾಕೆ ಇಷ್ಟೊಂದು ಎಮೋಷನಲ್ ಆಗಿದ್ದಾರೆ ಅಂತ ಯೋಚನೆ ಮಾಡ್ತಾ ಇದ್ದಾಳೆ.
“ಏನಾಯ್ತಮ್ಮಾ..?”
“ನಿಂಗೆ ಅವನು ನಿನ್ನೆಯೇ ಬಟ್ಟೆ ಪ್ಯಾಕ್ ಮಾಡೋಕೆ ಹೇಳಿದ್ದ ಆಲ್ವಾ.. ಯಾಕೆ ಮಾಡಿಲ್ಲ? ಅವ್ನು ನಿನ್ನ ಮೇಲೆ ಇಷ್ಟೊಂದು ಪ್ರೀತಿ ತೋರಿಸ್ತಾ ಇದ್ರೂ ನಿಂಗೆ ಅವ್ನ ಮೇಲೆ ಸ್ವಲ್ಪನೂ ಕಳಕಳಿ ಇಲ್ಲ ಅಲ್ವಾ..?”
ಮತ್ತೆ ಹೊರಗೆ ಬಂದು, “ಅಮ್ಮಾ ಅವ್ಳಿಗೆ ಏನೂ ಹೇಳ್ಬೇಡಿ ಪ್ಲೀಸ್ ನಾನೇ ಪ್ಯಾಕ್ ಮಾಡ್ಕೊತೀನಿ, ಲೀವ್ ಇಟ್ ..” ಅಂದೆ.
“ಹೇ ಅಣ್ಣಾ ನೀನು ರೆಡಿ ಮಾಡ್ತೀಯಾ….? ಅಮ್ಮ.. ಇವತ್ತು ಭೂಕಂಪ ಸುನಾಮಿ ಆಗುತ್ತೆ ನೋಡು!”
“ಸುಮ್ನೆ ಇರ್ತೀಯಾ ನೀನು..” ಎಂದು ಅಮ್ಮ ಅಡಿಗೆ ರೂಂ ಕಡೆ ಹೆಜ್ಜೆ ಹಾಕಿದಳು.
ಅಚ್ಚು ಯುನಿಫಾರ್ಮ್ ಬದಲಾಯಿಸಿ ಅಡಿಗೆ ಮನೆಗೆ ಬಂದು, “ಅಮ್ಮಾ ತಿನ್ನೋಕೆ ಏನಿದೆ ಹಸಿವಾಗ್ತಿದೆ..”
“ಅಲ್ಲಿ ಬೇಕರಿ ತಿಂಡಿ ಇದೆ. ಟೀ ನೂ ಮಾಡಿ ಇಟ್ಟಿದ್ದೀನಿ. ಅಣ್ಣಂಗೂ ಕೊಡು ಮಧ್ಯಾಹ್ನ ಊಟವೂ ಮಾಡಿಲ್ಲ ಅವ್ನು”.. ಎಂದು ಅವರ ಕೆಲಸದಲ್ಲಿ ನಿರತರಾಗಿದ್ದರು.
“ಹುಂ ಸರಿ, ಅಣ್ಣಾ.. ಬಾ ಟೀ ಕುಡಿಯೋಕೆ..”
ರೂಂ ಬಾಗಿಲು ಹಾಕಿ ಮಲಗಿದ್ದ ನನಗೆ ಹಸಿವಿನ ಪರಿವೆ ಇರಲಿಲ್ಲ. ಯಾಕಪ್ಪಾ ಈ ಮದ್ವೆಗೆ ಹೊರಟೆ ಎನ್ನುವ ಯೋಚನೆ ಕಾಡುತ್ತಿತ್ತು.
ನನ್ನ ಯಾವುದೇ ಪ್ರತಿಕ್ರಿಯೆ ಇಲ್ಲದ್ದನ್ನು ಕಂಡು ಅಚ್ಚು ರೂಂ ಗೆ ಬಂದು, “ಲೇ.. ಕೋಣ.. ಏನು ಕರ್ದಿದ್ದು ಕೇಳಿಲ್ವಾ..? ಬಾ ಟೀ ಕುಡಿಯೋಣ..”
“ನಂಗೆ ಬೇಡ.. ನೀನು ಕುಡಿ”
“ಯಾಕೆ ಬೇಡ? ಊಟಾನೂ ಮಾಡಿಲ್ವಂತೆ..?”
“ಹಸಿವಿಲ್ಲ ಕಣೇ..”
ಬೆನ್ನು ಹಾಕಿ ಮಲಗಿದ್ದ ನನ್ನ ಕೈ ಹಿಡಿದು ಎಳೆದು ಕೂರಿಸಿದಾಗ ಕಣ್ಣಂಚು ಒದ್ದೆಯಾಗಿತ್ತು.
“ಹೇ.. ಏನಾಯ್ತು? ಏನು ಇವತ್ತು ಡಿಫರೆಂಟ್ ಇದ್ದೀಯಾ..? ಬಾ ಅಣ್ಣಾ ಪ್ಲೀಸ್..”
“ನಂಗೆ ಬೇಡ ಅಚ್ಚು… ನೀನು ಕುಡಿ”
“ಬೇಡ, ನಂಗೂ ಬೇಡ..”
“ಅಯ್ಯೋ ಆಯ್ತು ಕಣೇ.. ನಡಿ, ಬಂದೆ..”
“ಅಬ್ಬಾ.. ಇದು ನನ್ನ ಅಣ್ಣ… ಹುಂ ಸರಿ ಬೇಗ ಬಾ ತಣ್ಣಗಾಗುತ್ತೆ ಮತ್ತೆ..”
“ಸರಿ ಸರಿ, ನೀನು ಹೋಗು..” ಎಂದು ಅರೆ ಮನಸ್ಸಿಂದ ಎದ್ದು ಮುಖ ತೊಳೆದು ಅಡುಗೆ ಮನೆಗೆ ನಡೆದೆ.
“ತಗೋ.. ಕುಡಿ, ಅಲ್ಲಿ ಚಿಪ್ಸ್ ಇದೆ ತಗೋ…”
“ಬೇಡ.. ಟೀ ಮಾತ್ರ ಸಾಕು..”
“ಅಮ್ಮಾ… ಅಣ್ಣ ಅಳ್ತಾ ಇದ್ದ ಮೋಸ್ಟ್ಲಿ ಅವ್ನಿಗೆ ನಮ್ಮನ್ನು ಬಿಟ್ಟು ಹೋಗೋಕೆ ಬೇಜಾರು ಅನ್ಸುತ್ತೆ..!”
ನಿಂಗೆ ಅವನನ್ನು ಗೋಳು ಹೊಯ್ಕೊಳ್ದೆ ಸುಮ್ನಿರೋಕೆ ಆಗಲ್ವಾ?..”
“ಅಮ್ಮಾ…” ಎಂದು ನಾನು ರಾಗ ಎಳಿಯೋಕೂ, “ಆಯ್ತಪ್ಪಾ… ನೀನೂ ಆಯ್ತು ನಿನ್ನ ತಂಗಿನೂ ಆಯ್ತು ನಾನು ಮಾತಾಡಲ್ಲ..”
“ಹೇ ಅಣ್ಣಾ… ಇವತ್ತು ಕಾಲೇಜ್ನಲ್ಲಿ ಒಂದು ವಿಷ್ಯ ಆಗಿತ್ತು ಗೊತ್ತಾ…?”
“ಇಲ್ಲ.. ಹೇಳು..”
“ನಿನ್ನ ಇವತ್ತು ಅವ್ಳು ಕೇಳಿದ್ಲು!”
“ಯಾರು?..”
“ಮೋನಿಕಾ..!”
“ಅವ್ಳಿಗೆ ತಲೆ ಕೆಟ್ಟಿರ್ಬೇಕು!.. ಡಾಕ್ಟರ್ ಹತ್ತಿರ ಕರ್ಕೊಂಡು ಹೋಗೋಕೆ ಹೇಳು..”
“ನಾನೂ ಅದೇ ಅನ್ಕೊಂಡೆ, ಹೋಗಿ ಹೋಗಿ ನಿನ್ನ ಇಷ್ಟ ಪಡ್ತಾಳಲ್ಲ ಅವ್ಳು ಎಂದು”.. ಒಳ ಒಳಗೇ ನಗ್ತಾ ಇದ್ದಾಳೆ.
“ನನ್ನ ಯಾರೂ ಇಷ್ಟ ಪಡೋದು ಬೇಡಪ್ಪಾ.. ಈಗ ನಾನು ಇಷ್ಟಪಡೋರು ಕೊನೆವರೆಗೂ ಇದ್ರೆ ಸಾಕು!..”
“ಯಾರಣ್ಣಾ ಅದೂ …? ನಂಗೆ ಹೇಳೇ ಇಲ್ಲ!…”
ಇದೆಲ್ಲವನ್ನೂ ಗಮನಿಸುತ್ತಿದ್ದ ಅಮ್ಮ ಯಾಕೋ ಕಣ್ಣಂಚು ಒರೆಸಿಕೊಂಡು, “ಅಚ್ಚೂ, ಅವನ ಬಟ್ಟೆ ಎಲ್ಲ ರೆಡಿ ಮಾಡಿ ಇಡೇ ಪಾಪ”..
“ನಂಗಾಗಲ್ಲ, ಬೇಕಾದ್ರೆ ಅವನೇ ಮಾಡಿಕೊಳ್ಳಲಿ”
“ನಿನ್ನ ಅಣ್ಣ ಅಲ್ವೇನೆ… ಯಾರ್ಯಾರೋ ಅಲ್ವಲ್ಲ?”…
“ಇವ್ನು ಯಾವ ಸೀಮೆ ಅಣ್ಣ .. ಇವತ್ತು ಇವ್ನು ಬಂದಿಲ್ಲ ಅಂದ್ರೆ ಒಂದು ಪ್ರೋಪೋಸ್ ಆದ್ರೂ ಆಗ್ತಾ ಇತ್ತು… ಅದನ್ನೂ ಹಾಳ್ಮಾಡ್ದ” ಎಂದು ನಕ್ಕು ಸುಮ್ಮನಾದಳು…
“ಸರಿ ಕಣೇ, ಇನ್ನು ನಾನು ಆ ಕಡೆ ತಲೆ ಹಾಕಲ್ಲ”
“ಸಾಕಪ್ಪಾ ಸಾಕು ನಿನ್ನ ನಾಟಕ, ನಿನ್ನ ತಂಗಿ ಅಂತ ಗೊತ್ತಿದ್ರೆ ಅವ್ನು ನನ್ ಕಣ್ ಎತ್ತಿನೂ ನೋಡ್ತಾ ಇರ್ಲಿಲ್ಲ. ನಾಳೆಯಿಂದ ಅವ್ನ ಟಾರ್ಚರ್ ಇರಲ್ಲ” ಎಂದು ಕಿಲ ಕಿಲ ನಗುತ್ತಾ “ಏನು ಅಂದ್ಕೊಂಡೆ ನೀನು ನನ್ನ?”
“ನೀನು ಫಸ್ಟ್ ನಿನ್ನ ಎಜ್ಯುಕೇಶನ್ ಕಂಪ್ಲೀಟ್ ಮಾಡು… ಆಮೇಲೆ ಇದೆಲ್ಲ…”
“ಆಮೇಲೆ ನೀನು ಸಪೋರ್ಟ್ ಮಾಡ್ತೀಯಾ?”
“ಎಸ್…”
“ಅಂದ್ರೆ ನೀನು ನನ್ನ ಮನೆಯಿಂದ ಹೊರಗೆ ಹಾಕಿ ಅಪ್ಪ ಅಮ್ಮನ ಜೊತೆ ಸುಖವಾಗಿ ಇರ್ಬೇಕು ಅಂದ್ಕೊಂಡಿದ್ದೀಯ ಆಲ್ವಾ?”
“ಯಪ್ಪಾ… ನಿನ್ ಜೊತೆ ಯಾರಪ್ಪಾ ವಾದಿಸೋದು… ಹೋಗಿ ನಿನ್ನ ಕೆಲಸ ನೋಡು”
“ಹಿಂಗೆ ಬಾ ದಾರಿಗೆ”
“ಹೇ ಅಚ್ಚು, ಇನ್ನು ಎರಡು ದಿನ ಏನು ಮಾಡ್ತೀಯ ನೀನು?”
“ಅಂದ್ರೆ, ನೀನು ಇಲ್ಲ ಅಂದ್ರೆ ನಂಗೆ ಬೋರ್ ಆಗುತ್ತೆ ಅಂತಾನಾ…? ಆ ಸೀನ್ ಎಲ್ಲ ಇಲ್ಲ ಬಿಡು.. ನಾನಂತೂ ಹ್ಯಾಪಿಯಾಗೇ ಇರ್ತೀನಿ…”
“ಓ.. ಓಕೆ ಓಕೆ..” ಎಂದ ನನಗೆ ಮನದ ಮೂಲೆಯಲ್ಲಿ ಹಲವಾರು ವರ್ಷಗಳ ಹಿಂದೆ ಮರೆಯಾಗಿದ್ದ ನೋವು ಮತ್ತೆ ಚಿಗುರೊಡೆಯುವಂತೆ ಭಾಸವಾಯಿತು.
“ಹೌದು,
ನಾನು ಇಲ್ಲ ಅಂದ್ರೆ ನಿಂಗೆ ಬೋರ್ ಆಗಲ್ವ ಅಣ್ಣಾ…?”
ಏನು ಉತ್ತರಿಸಲಿ… ಅವಳಿಲ್ಲದ ನನ್ನ ಬದುಕು ಹೇಗಿದ್ದೀತು ಎಂಬ ಸಣ್ಣ ಸುಳಿವು ಕೂಡ ಅವಳಿಗಿಲ್ಲವಲ್ಲ…
“ಬೋರ್ ಆಗುತ್ತೆ, ಆದ್ರೆ ನೀನು ಖುಷಿಯಾಗಿರ್ತೀಯಾ ಅಂದ್ರೆ ನಾನು ಹೇಗಿದ್ರೂ ಯಾರಿಗೇನು ?” ಎಂದೆ.
ಆರೋಗ್ಯಕರ ಚರ್ಚೆ ಆದ್ರೂ ಎಲ್ಲವನ್ನೂ ಕೇಳಿಸಿಕೊಳ್ಳುತ್ತಾ ಇದ್ದ ಅಮ್ಮನಿಗೆ ಯಾಕೋ ದಾರಿ ತಪ್ತಾ ಇದೆ ಅನ್ನಿಸಿತು. ಕೂಡಲೇ, “ಅಚ್ಚು, ಹೋಗಿ ಸ್ನಾನ ಮಾಡು.. ಗಂಟೆ ಏಳಾಗ್ತಾ ಬಂತು…”
“ಹಾಂ, ಸರಿ” ಎಂದು ಅವಳು ಸ್ನಾನಕ್ಕೆ ಹೋದ್ಳು. ಅವಳ ತಲೆ ಮರೆಯಾಗಿದ್ದೇ ತಡ, “ನೋಡು, ಅವಳು ಹೇಳಿದ್ದನ್ನೆಲ್ಲ ತಲೆಗೆ ತಗೋ ಬೇಡ” ಎಂದು ಸುಮ್ಮನಾದರೂ, ನನ್ನ ಒಳ ತಲ್ಲಣಗಳನ್ನು ಅವರು ಅರಿತಿದ್ದರು. “ನೀನೂ ಹೋಗಿ ನಿಂಗೆ ಬೇಕಾದ ಬಟ್ಟೆ ಎಲ್ಲ ತೆಗೆದಿಡು. ನಾನು ಬಂದು ರೆಡಿ ಮಾಡಿ ಕೊಡ್ತೀನಿ. ಅವಳಿಗೆ ಯಾರು ಹೇಳೋದು..” ಅಂತ ಸುಮ್ಮನಾದ್ರು.
“ಬೇಡ, ನಾನೇ ರೆಡಿ ಮಾಡ್ತೀನಿ”.. ಎಂದು ರೂಂ ಗೆ ಹೋಗಿ ಕೈಗೆ ಸಿಕ್ಕ ಬಟ್ಟೆ ಎಲ್ಲ ಬ್ಯಾಗ್ ಗೆ ತುಂಬಿಕೊಂಡೆ.
ಅಷ್ಟರಲ್ಲಿ ಅಪ್ಪ ಬಂದ್ರು. “9 ಗಂಟೆಗೆ ಬಸ್ ಅಂತೆ, ವಿಂಡೋ ಸೀಟ್ ಬುಕ್ ಮಾಡಿದ್ದೇನೆ” ಎಂದ್ರು.
“ಹಾಂ.. ಸರಿ ಅಪ್ಪಾ, ನಾನು ಸ್ನಾನ ಮಾಡಿ ಬರ್ತೀನಿ” ಎಂದು ಬಾತ್ ರೂಮ್ ಕಡೆ ಹೆಜ್ಜೆ ಹಾಕಿದೆ.
“ಯಾಕೆ.. ಏನಾಯ್ತು..? ಒಂತರಾ ಇದ್ದಾನೆ..!”
ಅಮ್ಮ ಏನೋ ಹೇಳ್ಬೇಕು ಅನ್ನುವಷ್ಟರಲ್ಲಿ ಅಚ್ಚು ಎಂಟ್ರಿ ಕೊಟ್ಳು.
“ಏನ್ ಮಾಡ್ದೆ ಅವ್ನಿಗೆ?”
“ಏನಿಲ್ಲ ಅಪ್ಪಾ, ಅವ್ನಿಗೆ ನಮ್ಮನ್ನು ಬಿಟ್ಟು ದೂರ ಹೋಗೋದು ಬೇಜಾರು ಅನ್ಸುತ್ತೆ”…ಆಗ ಅಳ್ತಾ ಇದ್ದ ಈಗ ಸ್ವಲ್ಪ ಸರಿ ಆಗಿದ್ದಾನೆ”.
‘ಅಳ್ತಾ ಇದ್ನಾ..!’ ಎಂದು ಅಪ್ಪ ಅಮ್ಮನ ಮುಖವನ್ನೇ ದಿಟ್ಟಿಸಿ ನೋಡಿದ್ರೂ, ಅಮ್ಮ ಕಣ್ಣಲ್ಲೇ ಮತ್ತೆ ಹೇಳ್ತೀನಿ ಎಂದು ಬಿಟ್ಟರು.
ಅದನ್ನು ನೋಡಿದ ಅಚ್ಚು “ಅಮ್ಮ ಏನು ಮಾಡಿಲ್ಲ ಅಪ್ಪಾ”… ಎಂದು ಅಮ್ಮನ ಪರ ವಕಾಲತ್ತು ಹಿಡಿದಳು.
“ಸರಿ ಸರಿ” ಎಂದು ಟಿವಿ ನೋಡುತ್ತಾ ಟೀ ಹೀರೋಕೆ ಶುರು ಮಾಡಿದರು.
ನಾನು ಸ್ನಾನ ಮುಗಿಸಿ ಬಂದು ರೆಡಿಯಾಗಿ ಹೊರಗೆ ಬಂದೆ.
“ನಿಂಗೆ ಯಾಕೆ ಈಗ..? ಅವ್ನು ಅಷ್ಟು ಹೇಳಿ ನಿಂಗೆ ಮಾಡೋಕೆ ಆಗಿಲ್ಲ.. ಈವಾಗ ಏನ್ ನೋಡೋದು?”
“ಅದೇ ಇರೋದು ಸಸ್ಪೆನ್ಸ್”..
“ನೋಡೋಣ ಈಚೆ ಕೊಡು”.. ಎಂದು ಕೈಯಲ್ಲಿದ್ದ ಬ್ಯಾಗ್ ಕಸಿದು ಅದರಲ್ಲಿದ್ದ ಬಟ್ಟೆಯನ್ನೆಲ್ಲಾ ಸೋಫಾದ ಮೇಲೆ ಚೆಲ್ಲಿದಳು.
ಅಪ್ಪನ ಬಿಪಿ ನೆತ್ತಿಗೇರಿತು. ಹೊಡೆಯಲೆಂದು ಕೈ ಎತ್ತಿ ನನ್ನ ನೋಡಿ ಕೈ ಕೆಳಗಿರಿಸಿದರು.
“ನೋಡು ನೋಡು ಹಿಂಗಾ ಬಟ್ಟೆ ಮಡಚೋದು..? ಐರನ್ ಕೂಡಾ ಮಾಡಿಲ್ಲ, ನೀನು ಮದ್ವೆಗೆ ತಾನೇ ಹೋಗೋದು?” ಎಂದು ನನ್ನ ಬೆಂಡೆತ್ತಿದ್ದನ್ನು ನೋಡಿ ಆಶ್ಚರ್ಯ.. ಯಾಕೆ ಹೀಗೆ ನಡ್ಕೊಳ್ತಾ ಇದ್ದಾಳೆ ಎಂಬ ಪ್ರಶ್ನೆ ಮೂಡುತ್ತಿದೆ.
“ಈಗ ಟೈಮ್ ಆಗ್ತಾ ಇದೆ, ನಿಂಗೆ ಈವಾಗನಾ ಇದನ್ನೆಲ್ಲ ನೋಡೋಕೆ, ಹೇಳೋಕೆ ಸಮಯ ಸಿಕ್ಕಿದ್ದು?” ಎಂದು ಅಪ್ಪ ಗದರಿಸಿದ್ರು.
ಆದ್ರೂ ಸುಮ್ಮನಾಗದ ಅವಳು, “ಅವನು ನನ್ನ ಅಣ್ಣ, ಅವ್ನ ಬಗ್ಗೆ ಯಾವಾಗ ಮಾತಾಡ್ಬೇಕು ಅಂತ ನಂಗೆ ಗೊತ್ತು” ಎನ್ನುವಷ್ಟರಲ್ಲಿ ಅಭಿಮಾನ, ಗೌರವ, ಪ್ರೀತಿ ತುಂಬಿ ಬಂತು.
“ಇರು, ಬಂದೆ” ಎಂದು ತನ್ನ ರೂಂ ಗೆ ಹೋಗಿ ಕೈಯಲ್ಲಿ ಒಂದು ಲಗೇಜ್ ಬ್ಯಾಗ್ ಹಿಡಿದು ತಂದು ಕೊಟ್ಟು, “ತಗೋ, ನಿಂಗೆ ಬೇಕಾಗಿರೋದು ಎಲ್ಲಾನೂ ಇದರಲ್ಲಿ ಇದೆ, ಕಡಿಮೆ ಇದ್ರೆ ಹೇಳು”..
ಎಲ್ಲರಿಗೂ ಆಶ್ಚರ್ಯ ಇದ್ಯಾವಾಗ ಮಾಡಿದ್ದು ಎಂದು.
ಇವತ್ತು ಬೆಳಿಗ್ಗೆ ಎದ್ದು ನಾನು ಮಾಡಿರೋ ಕೆಲಸ ಇದೇ.. ನಾನು ನನ್ನ ಅಣ್ಣನಾ ಬಿಟ್ಟ್ ಹಾಕ್ತೀನಾ!..”
“ಥಾಂಕ್ಯೂ ಅಚ್ಚೂ”
“ಅದೆಲ್ಲ ಬೇಡ ಬರುವಾಗ ನನ್ ಫೇವರಿಟ್ ತಗೊಂಡು ಬಾ”..
“ಓಕೆ.. ಶ್ಯೂರ್, ಆದ್ರೆ ನಿಂಗೆ ಇವತ್ತು ಒಂದು ಸರ್ಪ್ರೈಸ್ ಕೊಡ್ತೀನಿ” ಎಂದು ಅಮ್ಮ, ಅಚ್ಚುಗೆ ಬಾಯ್ ಹೇಳಿ ನಾನೂ ಅಪ್ಪ ಹೊರಟೆವು.
ಅಷ್ಟರಲ್ಲಿ ಕಂಡಕ್ಟರ್ ಕಾಲ್ ಮಾಡಿ ಬಸ್ ಸ್ಟಾಂಡ್ ಗೆ ಬಂದಿರೋದು ತಿಳಿಸಿದ.
ಮತ್ತೊಮ್ಮೆ ಬಾಯ್ ಹೇಳಿ ಹೊರಟು ಬಂದೆವು. ಬಸ್ ಸ್ಟಾಂಡ್ ನಲ್ಲಿ ಅಪ್ಪ ನನ್ನ ಬಿಟ್ಟು “ಆರಾಮ ಹೋಗಿ ಬಾ, ಏನಿದ್ದರೂ ಕಾಲ್ ಮಾಡು”.. ಎಂದು ಕೈಗೆ ನಾಲ್ಕು ಸಾವಿರ ಇತ್ತು “ಎಂಜಾಯ್ ಮಾಡಿ ಬಾ” ಅಂದ್ರು.
“ಸರಿ ಅಪ್ಪಾ, ನಿಮ್ಮನ್ನೆಲ್ಲ ತುಂಬಾ ಮಿಸ್ ಮಾಡ್ಕೊತೀನಿ”…
“ಓಕೆ.. ರೀಚ್ ಆದ್ಮೇಲೆ ಫೋನ್ ಮಾಡು”..
“ಸರಿ ಅಪ್ಪಾ, ಮಡಿಕೇರಿ ರೀಚ್ ಆದಾಗ ಕಾಲ್ ಮಾಡ್ತೀನಿ, ಅಚ್ಚುಗೆ ಹೇಳಿ ಎಚ್ಚರ ಇರೋಕೆ”..
“ಸರಿ, ಬಾಯ್.. ಟೇಕ್ ಕೇರ್..” ಎಂದು ಹೊರಟರು.
ಬಸ್ಸಿನಲ್ಲಿ ಕುಳಿತು ಅತ್ತ ಇತ್ತ ಕಣ್ಣಾಡಿಸಿದರೆ 5-6 ಸೀಟ್ ಖಾಲಿ ಇದೆ ಅಷ್ಟೇ. ಬಸ್ ಹೊರಟಿತು, ಪಕ್ಕದ ಸೀಟ್ ಕೂಡ ಖಾಲಿ ಇತ್ತು. ಚೆನ್ನಾಗಿ ನಿದ್ದೆ ಮಾಡ್ಬೇಕು ಎಂಬ ಪ್ಲಾನ್ ಹಾಕ್ಕೊಂಡೆ. 5 ನಿಮಿಷದಲ್ಲಿ ಬೋರ್ ಹೊಡಿಯೋಕೆ ಸ್ಟಾರ್ಟ್ ಆಯ್ತು. ಮೊಬೈಲ್ ಕೈಗೆ ಬಂತು, ವಾಟ್ಸಪ್ ತೆರೆದು ಬಂದ ಮೆಸೇಜ್ ಎಲ್ಲಾ ಓದ್ತಾ ಇದ್ದೆ. ಆವಾಗಲೇ ಅಚ್ಚುನ ಮೆಸೇಜ್, “ಅಣ್ಣಾ, ಟೇಕ್ ಕೇರ್.. ಹ್ಯಾಪಿ ಜರ್ನಿ…”
“ಥ್ಯಾಂಕ್ಯೂ ಡಿಯರ್… ಮಿಸ್ ಯು ಅಚ್ಚೂ…”
“ಮಿಸ್ ಯು ಟೂ”
“ಹೌದು…, ನೀನು ಯಾಕೆ ಇಷ್ಟೊಂದು ಸತಾಯಿಸೋದು ನನ್ನ?” ಎಂದು ಕೇಳ್ದೆ.
“ಒಂತರಾ ಖುಷಿ ಆಗುತ್ತೆ ಗೊತ್ತಾ…ಹೇ ಅಣ್ಣಾ ಏನೋ ಸರ್ಪ್ರೈಸ್ ಕೊಡ್ತೀನಿ ಅಂದಿದ್ದೆ ಅಲ್ವಾ ಏನದು…?”
“ಮಡಿಕೇರಿ ರೀಚ್ ಆದ್ಮೇಲೆ ಫೋನ್ ಮಾಡ್ತೀನಿ ಆವಾಗ ಹೇಳ್ತೀನಿ”
“ಹುಂ ಸರಿ ಎಷ್ಟು ಗಂಟೆಗೆ ರೀಚ್ ಆಗ್ತೀಯಾ?”
“11 ಗಂಟೆ ಆಗ್ಬಹುದು”
“ಅಲ್ಲಿವರ್ಗೂ ನಾನು ಕಾಯ್ಬೇಕಾ…?”
“ಬೇಕಾದ್ರೆ ಕೂತ್ಕೋ…”
“ಏನು ಮಡಿಕೇರಿ ರೀಚ್ ಆದ್ಮೇಲೆ?… ಏನು ವಿಷಯ…? ಯಾರಾದ್ರೂ ಇದ್ದಾರಾ ಕಂಪನಿಗೆ…! ಅದೇ ಸರ್ಪ್ರೈಸಾ?”
“ಹೇ ನಿಂಗೂ ಗೊತ್ತಾಗೋಯ್ತಾ… ಛೆ..” ಎಂದು ಕಿಚಾಯಿಸಿದೆ
“ಸಾಕು, ಸಾಕು… ನಿನ್ನ ಮುಸುಡಿಗೆ ಅದು ಬೇರೆ ಕೇಡು”
“ಅಲ್ವಾ ಮತ್ತೆ… ನೀನು ಹೋಂ ವರ್ಕ್ ಕಂಪ್ಲೀಟ್ ಮಾಡಿ ಕೂತ್ಕೋ… ಅಷ್ಟರಲ್ಲಿ ನಾನು ಕಾಲ್ ಮಾಡ್ತೀನಿ”
“ಸರಿ ಅಣ್ಣಾ ಬಾಯ್… ಟೇಕ್ ಕೇರ್…”
“ಓಕೆ ಬಾಯ್…”
ಹಾಗೆ ಸ್ಟೇಟಸ್ ನೋಡ್ತಾ ಇದ್ದೆ. ಆಗಲೇ ತೆಗೆದ ಸೆಲ್ಫಿ ಅಲ್ಲಿ ಬಂದು ಸೇರಿತ್ತು ಕೆಳಗಡೆ ಒಂದು ವಾಕ್ಯದ ಜೊತೆ – “ಹ್ಯಾಪಿ ಜರ್ನಿ…ಮಿಸ್ ಯು ದಿ ಮೋಸ್ಟ್ ಲವ್ವೇಬಲ್ ಅಣ್ಣಾ”..
ಕಣ್ಣಂಚು ಒದ್ದೆಯಾಗಿತ್ತು. ಸದಾ ನನ್ನ ಸತಾಯಿಸುವ ಅವಳ ಮನಸ್ಸು ಇಷ್ಟೊಂದು ಮುಗ್ಧವಾಗಿದ್ಯಾ…ಯೋಚಿಸುತ್ತಾ ಕುಳಿತ ನನಗೆ ಬಾಲ್ಯದ ದಿನಗಳು ಕಣ್ಣ ಮುಂದೆ ಇಣುಕಿ ಹೋಯಿತು.
ಹಾಂ ನಿಮ್ಗೆ ಒಂದು ಇಂಪಾರ್ಟೆಂಟ್ ವಿಷಯ ಹೇಳೋಕೆ ಬಿಟ್ಟೆ. ನನ್ನ ಅಪ್ಪ ಅಮ್ಮ ತಂಗಿ ನ ನೋಡಿದ್ರಲ್ವಾ… ಏನನಿಸ್ತು ನಿಮ್ಗೆಲ್ಲಾ,
ಎಷ್ಟು ಮುದ್ದು ಮಾಡ್ತಾರೆ ಎಷ್ಟು ಅನ್ಯೋನ್ಯವಾಗಿದ್ದೇವೆ ಎಂದು ಹೊಟ್ಟೆಕಿಚ್ಚು ಪಡ್ಬೇಡಿ. ನಾನು ಅವರು ಹೆತ್ತ ಮಗನೇ ಅಲ್ಲ ಅಚ್ಚು ಮಾತ್ರ ಅವರ ಕರುಳಕುಡಿ. ಹತ್ತು ವರ್ಷಗಳ ವೈವಾಹಿಕ ಜೀವನದ ಅನಂತರ ಮಕ್ಕಳಾಗದ ಅವರು ನನ್ನ ಅನಾಥಾಶ್ರಮದಿಂದ ದತ್ತು ಪಡೆದರು. ಅಪ್ಪ ಅಮ್ಮನ ಜೊತೆ ಚೆನ್ನಾಗಿ ಇದ್ದೆ. ಮೂರು ವರ್ಷಗಳ ಅನಂತರ ನನಗೊಬ್ಬಳು ತಂಗಿ ಬಂದಿದ್ದಾಳೆ. ಆಗಲೇ ನನಗೆ ಗೇಟ್ ಪಾಸ್ ಸಿಕ್ತಾ ಇತ್ತು ಆದ್ರೆ ಇಂದಿನ ದಿನಗಳವರೆಗೂ ನನ್ನ ಸ್ವಂತ ಮಗನಂತೆ ಕಾಣುತ್ತಿದ್ದಾರೆ. ಆದರೆ ಈ ವಿಷಯಗಳ್ಯಾವುದೂ ಅಚ್ಚುಗೆ ತಿಳಿದಿಲ್ಲ. ನಾನೇ ಮಾತು ಪಡೆದಿದ್ದೆ ಅಪ್ಪ ಅಮ್ಮನ ಜೊತೆ, ಕಾರಣವಿಷ್ಟೇ, ಬಯಸದೇ ಬಂದ ಸಂಬಂಧ ಕಳೆದುಹೋಗದಿರಲೆಂದು ಒಂದರ್ಥದಲಿ ಸ್ವಾರ್ಥಿ ಎನ್ನಬಹುದು ಅಲ್ವಾ…
ಇದೇ ಯೋಚನಾ ಲಹರಿಯಲ್ಲಿ ಮಡಿಕೇರಿ ರೀಚ್ ಆಗಿದ್ದೇ ಗೊತ್ತಾಗಿಲ್ಲ. ಸ್ವಲ್ಪ ತಡೀರಿ ಅಚ್ಚುಗೆ ಒಂದು ಕಾಲ್ ಮಾಡ್ತೀನಿ ..
‘ಹಲೋ… ಎಲ್ಲಿದ್ದೀಯಾ?”
“ಬಸ್ ಲಿ”
“ಥೂ ಅದು ಗೊತ್ತು… ಪ್ಲೇಸ್ ಹೇಳು”
“ಮಡಿಕೇರಿ ಕಣೇ”
“ಹುಂ ಓಕೆ ಚಳಿ ಇದ್ಯಾ?”
“ಸಿಕ್ಕಾಪಟ್ಟೆ…ಬಸ್ ನಿಂತಾಗ ಟೀ ಕುಡೀಬೇಕು. ಅಪ್ಪ ಅಮ್ಮ ಮಲಗಿದ್ರಾ?”
“ಹುಂ ಮಲಗಿದ್ರು”
“ಮತ್ತೆ ನೀನೇನು ಮಾಡ್ತಾ ಇದ್ದೀಯಾ?”
“ಹಾ ಯಾರೋ ಒಬ್ಬ ಕಾಲ್ ಮಾಡ್ತೀನಿ ಎಚ್ಚರ ಇರೋಕೆ ಹೇಳಿದ್ದ ಅವ್ನಿಗೆ ಕಾಯ್ತಾ ಇದ್ದೆ”
“ಹೋ… ಹಾಗೆ… ಸರಿ ಸರಿ ಬಾಯ್… ಹಾಗಾದ್ರೆ”
“ಕೋಣ ನಿಂಗೆ ಕಾಯ್ತಾ ಇದ್ದೆ”
“ಓಕೆ ಓಕೆ”
“ಏನೋ ಕೊಡ್ತೀನಿ ಅಂದಿದ್ದೆ…”
“ಹೂಂ ಹೌದು ಹೋಂ ವರ್ಕ್ ಮಾಡಿದ್ದೀಯಾ?”
“ಇಲ್ಲ… ಬೆಳಿಗ್ಗೆ ಬೇಗ ಏಳ್ಬೇಕು”
“ಓ ಹೌದಾ ಸರಿ ಹೋಗಿ ಬ್ಯಾಗ್ ನೋಡು ಏನೋ ಇಟ್ಟಿದ್ದೀನಿ”
“ಹಾ ಹೌದಾ… ಇರು ಬಂದೆ”
“ಹೇ ಅಣ್ಣಾ ಡೈರಿ ಮಿಲ್ಕ್ …! ಥ್ಯಾಂಕ್ಯೂ…ಯಾವಾಗ ಇಟ್ಟಿದ್ದು ಅದು?”
“ಇವತ್ತು ಸಂಜೆ”
“ಹೌದಾ?”
“ಹುಂ ತುಂಬಾ ಬೇಜಾರು ಅನ್ಸುತ್ತೆ ಅಚ್ಚೂ… ಸುಮ್ನೆ ಬಂದೆ ಅನ್ಸುತ್ತೆ ಈವಾಗ?”
“ನಂಗೂ ಹಾಗೇ ಅನ್ಸುತ್ತೆ ಕಣೋ… ಮದ್ವೆ ಮುಗ್ಸಿ ಬೇಗ ಬಾ”
“ಸರಿ ಸರಿ..””
“ಇನ್ನು ನೀನು ನಿನ್ ಮದ್ವೆ ಮುಗಿಸ್ಕೊಂಡು ಬರ್ಬೇಡ”
“ಶುರು ಆಯ್ತು ನಿಂದು… ಹೇ ಸ್ಟಾಂಡ್ ಬಂತು…. ನಾನು ಟೀ ಕುಡ್ದು ಕಾಲ್ ಮಾಡ್ತೀನಿ ಸರಿನಾ?”…
“ಹುಂ ಸರಿ… ಬೇಗ ಮಾಡು ನಿದ್ದೆ ಬರ್ತಾ ಇದೆ”
“ಸರಿ, ಮಾಡ್ತೀನಿ.. ಬಾಯ್…”
ಕಾಲ್ ಕಟ್ ಮಾಡಿ ಕಂಡಕ್ಟರ್ ಜೊತೆ ಟೈಮ್ ಇದ್ಯಾ ಅಂತ ಕೇಳ್ದೆ, ಹತ್ತು ನಿಮಿಷ ಅಷ್ಟೇ ಅಂದ.
ಬೇಗ ಹೋಗಿ ಒಂದು ಕಪ್ ಟೀ ತಗೊಂಡು ಬಂದೆ. ಟೀ ಕುಡೀತಾ ಮತ್ತೆ ಕಾಲ್..
“ಸಿಕ್ತಾ ಟೀ?”
“ಹುಂ..ಸಿಕ್ತು…”
ಅಷ್ಟರಲ್ಲಿ … “ಎಕ್ಸ್ಕ್ಯೂಸ್ ಮೀ….
“ಎಸ್… ಹೇಳಿ “…
“ಯಾರದ್ರೂ ಇದ್ದಾರಾ ಇಲ್ಲಿ?”
“ಇಲ್ಲ”
“ಕೂತ್ಕೊಬೋದಾ?…”
“ಧಾರಾಳವಾಗಿ”… ಎಂದು ನನ್ನ ಬ್ಯಾಗ್ ತೆಗೆದುಕೊಂಡು ತೊಡೆ ಮೇಲೆ ಇರಿಸಿದೆ.
“ಹಲೋ ಅಚ್ಚು… ಹೇಳು…”
“ಯಾರು ಅಣ್ಣ ಅದು?”
“ಪ್ಯಾಸೆಂಜರ್… ಸೀಟ್ ಖಾಲಿ ಇತ್ತು ಆಲ್ವಾ ಅದಕ್ಕೆ…”
“ಹುಂ… ಸರಿ…. ಹುಡುಗಿ ನಾ?!…”
“ಹೌದು…ಯಾಕೆ?”…
“ಚೆನ್ನಾಗಿದ್ದಾಳಾ?”…
“ಹಾ ..ಏನು ನಾನು ಇಲ್ಲಿ ಹುಡುಗಿ ನೋಡೋಕೆ ಬಂದಿರೋದು”
“ಕರ್ಮ ಹೋಗಿ ಹೋಗಿ ನಿನ್ನ ಜೊತೆ ಕೇಳ್ತೀನಲ್ಲ…! ಸರಿ ನಾನು ಮಲಗ್ತೀನಿ”
“ಇರೇ ಸ್ವಲ್ಪ ಹೊತ್ತು”
“ಬೆಳಿಗ್ಗೆ ಮಾಡ್ತೀನಿ ರೀಚ್ ಆದ್ಮೇಲೆ ಮೆಸೇಜ್ ಮಾಡು ಸರಿ ನಾ?”
“ಹುಂ ಸರಿ”
“ಬಾಯ್ ಟೇಕ್ ಕೇರ್”
“ಓಕೆ… ಬಾಯ್ ಗುಡ್ ನೈಟ್”
ಇನ್ನು ಏನು ಮಾಡೋದು ಅತ್ತ ಇತ್ತ ನೋಡೋ ಹಾಗೂ ಇಲ್ಲ ನಿದ್ದೆ ಮಾಡೋಕೂ ಆಗಲ್ಲ. ಮೈಸೂರು ಒಮ್ಮೆ ರೀಚ್ ಆದ್ರೆ ಸಾಕೆಂದು ಆಗಿತ್ತು. ಅಷ್ಟರಲ್ಲಿ ಅವ್ಳೇ “ಎಲ್ಲಿ ಹೋಗ್ತಾ ಇದ್ದೀರಾ?”
“ಮೈಸೂರು”
“ಹೋ ನಾನೂ ಮೈಸೂರೇ..”
“ಓಕೆ”
“ಏನು ವರ್ಕ್ ಮಾಡ್ತಾ ಇದ್ದೀರಾ ಹೇಗೆ?”
“ಇಲ್ಲ… ಮದ್ವೆ ಇದೆ”
ಹೀಗೆ ಮಾತುಕತೆ ಮುಂದುವರಿಯಿತು. ಅವಳ ಬಗ್ಗೆ ಏನೂ ಕೇಳೋಕೆ ಹೋಗಿಲ್ಲ ಯಾರದ್ರೂ ನಮಗ್ಯಾಕೆ ಬೇಕು ಎಂದು ಸುಮ್ಮನಾದೆ. ಕೊನೆಗೆ ಅವಳೇ ಮೌನ ಮುರಿದಳು. “ನನ್ ಬಗ್ಗೆ ಏನೂ ಕೇಳೇ ಇಲ್ಲ” ಎಂದು ನಗುತ್ತಾ.
“ಹಾಗೇನಿಲ್ಲ… ಪರಿಚಯ ಇಲ್ಲದವರೊಂದಿಗೆ ಪರಿಚಯ ಮಾಡೋಕೆ ಇಷ್ಟ ಇಲ್ಲ” ಎಂದು ಬಿಟ್ಟೆ.
“ಹಾಗಾದ್ರೆ ನೀವು ಹುಟ್ತಾ ಎಲ್ಲರೂ ಪರಿಚಯ ಇದ್ದ್ರು ಅನ್ನಿ…ಅಪ್ಪ ಅಮ್ಮ ಅಣ್ಣ ತಂಗಿ ಈಗ ಇರೋ ಫ್ರೆಂಡ್ಸ್ ಎಲ್ಲಾ..!!? ನೀವು ತುಂಬಾ ಗ್ರೇಟ್ ಕಣ್ರೀ ಎಂದು ನನ್ನ ಹೀನಾಯವಾಗಿ ಸೋಲಿಸಿಬಿಟ್ಟಳು.
“ಹಾಗೇನಿಲ್ಲ…”
“ಮಾತು ಮಾತು ಸೇರಿನೇ ಪರಿಚಯ ಆಗೋದು… ಪರಿಚಯನೇ ಮುಂದೆ ಸ್ನೇಹ ಸಂಬಂಧ ಎಂದು ಬರೋದು”
“ಸರಿ ನಿಮ್ಮ ಜೊತೆ ವಾದ ಮಾಡೋಕೆ ನಾನು ಬರಲ್ಲ” ಎಂದು ಮುಗುಳ್ನಕ್ಕೆ.
ಮೈಸೂರು ತಲುಪುವಷ್ಟರಲ್ಲಿ ಅವಳ ಬಗ್ಗೆ ಒಂದು ಗೌರವ ಮೂಡಿ ಅವಳ ಬಗ್ಗೆ ತಿಳ್ಕೊಂಡಿದ್ದೆ. ಹೆಸರು ಅನನ್ಯ, ಡಿಗ್ರಿ ಮುಗಿಸಿ ಮೈಸೂರಲ್ಲಿ ಯಾವ್ದೋ ಒಂದು ಕಂಪನಿಯ ರಿಸೆಪ್ಶನ್ ವಿಭಾಗದಲ್ಲಿ ಕೆಲಸ ಮಾಡ್ತಾ ಇದ್ದಾಳೆ. ಅಪ್ಪನನ್ನು ಐದಾರು ವರ್ಷಗಳ ಹಿಂದೆ ಕಳೆದುಕೊಂಡು ಅಮ್ಮ, ತಂಗಿಯ ಜೊತೆ ಬಾಳು ಸಾಗ್ತಾ ಇದೆ. ಬದುಕೆಂಬ ಜಟಕಾ ಬಂಡಿ ಅವಳ ಸೂಚನೆಯಂತೆ ನಡೆಯುತ್ತಿದೆ. ಇಷ್ಟೆಲ್ಲಾ ತಿಳಿದುಕೊಳ್ಳುವಷ್ಟರಲ್ಲಿ ಮೈಸೂರು ತಲುಪಿದೆ. ಪಮ್ಮು ಯಾನೆ ಪ್ರಮೋದ್ ಗೆ ಕಾಲ್ ಮಾಡಿ ಬಸ್ ಸ್ಟ್ಯಾಂಡ್ ಗೆ ಬಂದಿರೋದು ತಿಳಿಸಿದೆ. ಅವಳೂ ಅಲ್ಲೇ ಬಂದು ನಂಬರ್ ಬೇಡ್ವಾ ಎಂದು ಕೇಳಿದ್ದಕ್ಕೆ ಕೊಡಿ ಎಂದೆ. ಅತ್ತ ಇತ್ತ ಫೋನ್ ನಂಬರ್ ಹಂಚಿಕೊಂದಿದ್ದೂ ಆಯ್ತು.
“ಯಾವಾಗ ರಿಟರ್ನ್?” ಎಂದ್ಳು.
“ನಾಳೆ…ಮದ್ವೆ ಮುಗ್ಸಿ…”
“ಸರಿ…ಕಾಂಟಾಕ್ಟ್ ಲಿ ಇರಿ..
“ಸರಿ”
ಅಷ್ಟರಲ್ಲಿ ಪಮ್ಮು ಕಾರ್ ತಗೊಂಡು ಬಂದ. ಬಾಯ್ ಹೇಳಿ ನಾವು ಹೊರಟು ಬಂದೆವು. ಕಾರ್ ನಲ್ಲಿ ಕುಳಿತು ಅಚ್ಚು ಗೆ ರೀಚ್ ಆಗಿರೋದು ಮೆಸೇಜ್ ಹಾಕಿ, ಎದ್ದ ಮೇಲೆ ಕಾಲ್ ಮಾಡೋಕೆ ಹೇಳಿ ಅವನ ಜೊತೆ ಹರಟುತ್ತಾ ಮನೆಗೆ ತಲುಪಿದೆ. ಮದುವೆ ಮನೆಯಲ್ಲಿ ತಯಾರಿಯೆಲ್ಲ ಮುಗಿಸಿ ಎಲ್ಲರೂ ಅಲ್ಲಲ್ಲಿ ಬಿದ್ದುಕೊಂಡು ಗೊರಕೆ ಹೊಡೆಯುತ್ತಿದ್ದ ಸದ್ದು ಕೇಳಿಸಿತು. ಪಮ್ಮು ಬಂದು, “ಮೇಲೆ ರೂಂ ಖಾಲಿ ಇದೆ, ಅಲ್ಲೇ ಹೋಗಿ ಮಲ್ಕೋ ಬೆಳಿಗ್ಗೆ ಮಾತಾಡೋಣ ಎಂದು ಅವನು ಹೋಗಿ ಮಲ್ಕೊಂಡ. ರೂಂ ಸೇರಿದ ನನಗೂ ನಿದ್ದೆ ಆವರಿಸಿತು. ಇತ್ತ ಬೆಳಿಗ್ಗೆ ಐದು ಗಂಟೆಗೆ ಎದ್ದ ಅಚ್ಚು ಮೆಸೇಜ್ ನೋಡಿ ನೀನು ಎದ್ದ ಮೇಲೆ ಅಮ್ಮನಿಗೆ ಕಾಲ್ ಮಾಡು ಯಾಕಂದ್ರೆ ನೀನು ಏಳೋದು ನಾನು ಕಾಲೇಜ್ ಸೇರಿದ ಮೇಲೇನೆ, ಸಂಜೆ ಮನೆಗೆ ಬಂದು ಕಾಲ್ ಮಾಡ್ತೀನಿ ಎಂದಿದ್ದಳು.
ಬೆಳಿಗ್ಗೆ ಅಪ್ಪ ಅಮ್ಮನಿಗೆ ಕಾಲ್ ಮಾಡಿ ಮಾತಾಡಿ ಅಚ್ಚು ಬಂದಾಗ ಕಾಲ್ ಮಾಡ್ಲಿ ಎಂದು ಹೇಳಿ ಪಮ್ಮು ಜೊತೆ ಬ್ಯುಸಿ ಆಗಿಬಿಟ್ಟೆ. ಸಂಜೆಯಾಗುತ್ತಿದ್ದಂತೆ ಅಚ್ಚು ಕಾಲ್ ಮಾಡಿದ್ಳು, ಅವಳ ಜೊತೆ ರಾತ್ರಿ ನಡೆದ ಸಂಗತಿಯನ್ನು ಹಂಚಿಕೊಂಡಿದ್ದೂ ಆಯ್ತು. ನೀನು ಫಸ್ಟ್ ಅವ್ಳಿಗೆ ಕಾಲ್ ಮೆಸೇಜ್ ಮಾಡ್ಬೇಡ ಎಂಬ ಸಲಹೆನೂ ಕೊಟ್ಟಾಗಿದೆ. “ನಾಳೆ ಸಂಜೆ ಬರ್ತೀನಿ” ಎಂದು ಬಾಯ್ ಹೇಳಿದ್ದೂ ಆಯ್ತು. ದಾಂ ದೂಂ ಎನ್ನುವಂತೆ ಪಮ್ಮು ಅವನ ತಂಗಿಯ ಮದುವೆ ನೆರವೇರಿಸಿದ. ಬಂದ ಅತಿಥಿಗಳೆಲ್ಲ ಸಂತೃಪ್ತಿಯಿಂದ ಹರಸಿ ಹಾರೈಸಿದರು. ಗೆಳೆಯನ ತಂಗಿಯ ಮದುವೆ ಸಮಾರಂಭದ ಫೋಟೋ ಗ್ಯಾಲರಿಯಲ್ಲಿ ನನ್ನ ಇರುವಿಕೆಯನ್ನು ಧೃಢೀಕರಿಸಿ ಸಂಜೆಯಾಗುತ್ತಿದ್ದಂತೆ ನಾನು ಹೊರಟು ನಿಂತೆ. ಹಂಗೂ ಹಿಂಗೂ ಮನೆ ತಲುಪಿದಾಗ ರಾತ್ರಿ 9 ಗಂಟೆಯಾಗಿತ್ತು. ಮದುವೆ ಮತ್ತು ಪ್ರಯಾಣದ ಸುಸ್ತು ಮುಖದಲ್ಲಿ ಎದ್ದು ಕಾಣುತ್ತಿತ್ತೋ ಏನೋ ಊಟಕ್ಕೆ ಕುಳಿತಾಗ ಅಚ್ಚು “ಅಣ್ಣ, ನಾಳೆ ಭಾನುವಾರ, ಒಂದು ಕಡೆ ಹೋಗಿ ಬರೋಣ.. ಬೇಗ ನಿದ್ದೆ ಮಾಡಿ ಬೆಳಗ್ಗೆ ಬೇಗ ಏಳ್ಬೇಕು ಎಂದು ಹೇಳಿ ತಾನೂ ಹೋಗಿ ಮಲಗಿದಳು. ಅಪ್ಪ ಅಮ್ಮನ ಜೊತೆ ಮದುವೆಯ ಸಂಭ್ರಮದ ವಿವರಣೆ ನೀಡಿ ನಾನು ನಿದ್ರೆಗೆ ಜಾರಿದೆ.
“ಅಣ್ಣಾ..ಅಣ್ಣಾ.. ಗಂಟೆ ಎಂಟಾಯ್ತು .. ಏಳು.. ಏನ್ ಹೇಳಿದ್ದೆ ನಿಂಗೆ ನಿನ್ನೆ?”.. ಗಾಢ ನಿದ್ದೆಯಲ್ಲಿದ್ದ ನನ್ನ ಹಿಡಿದೆಬ್ಬಿಸಿದಳು.
“ಹತ್ತು ನಿಮಿಷ ಇರೇ…”
“ನಂಗೊತ್ತಿಲ್ಲ, ಒಂಬತ್ತು ಗಂಟೆಗೆ ಅಲ್ಲಿ ಇರ್ಬೇಕು.. ಇಲ್ಲ ಅಂದ್ರೆ ಹೋಗೋದು ಬೇಡ”.. ಎಂದು ಕೋಪದಲ್ಲೇ ಹೊರ ನಡೆದಳು. ಇನ್ನು ಅವಾಂತರ ಆಗೋದು ಬೇಡ ಎಂದು ಫ್ರೆಶ್ ಆಗಿ ಬಂದೆ.
“ಟೀ ಕುಡಿ.. ಬಾ…”
“ಬೇಡ.. ಬೇಗ ಹೊರಡೋಣ”..
“ಅದೆಲ್ಲ ಬೇಡ.. ಮರ್ಯಾದೆಯಿಂದ ತಿನ್ನು”..
“ಏನು.. ಇವತ್ತು ತಿನ್ನಿಸ್ತಾ ಇದ್ದೀಯಾ?”
ಆ ಕಡೆಯಿಂದ ಅಮ್ಮ “ಇವತ್ತು ನಿನ್ನ ಮುದ್ದು ತಂಗಿ ತಿಂಡಿ ಮಾಡಿದ್ದಾಳೆ, ತಿಂದಾದ್ಮೇಲೆ ಅದ್ಕೆ ನಾಮಕರಣ ಮಾಡು ಆಯ್ತಾ”…
“ನೀವೆಲ್ಲ ತಿಂದ್ರಾ?”
“ಇಲ್ಲಪ್ಪ… ನಿನ್ನಷ್ಟು ಧೈರ್ಯ ನಮಗಿಲ್ಲ”.
“ನೀನು ತಿಂದ್ಯೇನೆ?”
“ಟೇಸ್ಟ್ ಮಾಡ್ದೆ ಅಷ್ಟೇ ಚೆನ್ನಾಗಿದೆ ತಿಂದು ನೋಡು”…
“ಹೌದೌದು ಹೆತ್ತವರಿಗೆ ಹೆಗ್ಗಣ ಮುದ್ದು ಅಂತೆ”
“ಮೊದ್ಲು ತಿಂದು ನೋಡು, ಆಮೇಲೆ ಮಾತಾಡು”
ತಟ್ಟೆಗೆ ಸ್ವಲ್ಪ ಹಾಕಿ ಕೊಟ್ಟು, “ತಗೋ ತಿನ್ನು ಚೆನ್ನಾಗಿದ್ದರೆ ಮಾತ್ರ ಕೇಳು”
‘ಹೌದು… ಏನು ಇದು?”
“ಪಲಾವ್”
“ಪುಣ್ಯ”
“ಯಾಕೆ ಚೆನ್ನಾಗಿಲ್ವಾ?”…
“ಚೆನ್ನ್ನಾಗಿದೆ… ಸ್ವಲ್ಪ ಬೆಂದಿರೋದು ಜಾಸ್ತಿ ಅನ್ಸುತ್ತೆ ಸ್ವಲ್ಪ ಹಾಕು ನೀನು ಮಾಡಿರೋಡು ಆಲ್ವಾ”..
“ಬಡಿಸುತ್ತಿದ್ದ ಕೈ ನಡುಗುತ್ತಿತ್ತು.. ಕಣ್ಣೀರ ಹನಿಯೊಂದು ಕೆನ್ನೆನೂ ಸ್ಪರ್ಶಿಸದೆ ನೇರವಾಗಿ ಟೇಬಲ್ ಮೇಲೆ ಬಿತ್ತು. ಅದು ಹೇಗೋ ಕಷ್ಟ ಪಟ್ಟು ಬಡಿಸಿ ಎಲ್ಲವನ್ನೂ ಎತ್ತಿಟ್ಟು ಬಂದಾಗ, “ನೀನು ತಿಂಡಿ ತಿಂದ್ಯಾ?”
“ನಂಗೆ ಅಮ್ಮ ರೊಟ್ಟಿ ಮಾಡಿ ಇಟ್ಟಿದ್ದು ಅದನ್ನೇ ತಿಂದೆ”
“ಮತ್ತೆ ಇದು?”
“ನಮಿಗಿಬ್ರಿಗೆ ಮಾಡಿದ್ದೆ. ಆದ್ರೆ ನಂಗೆ ತಿನ್ನೋಕೆ ಆಗಿಲ್ಲ.”
“ಹುಂ.. ಸರಿ ಬೇಗ ರೆಡಿಯಾಗಿ ಬಾ”
“ಅಮ್ಮಾ.. ನಾವು ಹೋಗಿ ಬರ್ತೀವಿ”
“ಸರಿ ಕಣೋ… ಜಾಗ್ರತೆ…”
“ಸರಿ ಸರಿ”… ಅವಳ ಕಡೆ ತಿರುಗಿ “ಯಾವ ಕಡೆ ನಮ್ಮ ಪಯಣ?”
“ಇಲ್ಲೇ ಪಕ್ಕವೇ…”
“50 ಕಿ.ಮೀ. ಓಡೋವಷ್ಟೇ ಪೆಟ್ರೋಲ್ ಇರೋದು… ಸಾಕಾಗುತ್ತಾ?”
“ಹುಂ… ಸಾಕು”..
“ಸರಿ, ಬಾ ಕೂತ್ಕೋ..”
ಗೇಟ್ ದಾಟಿದ ಕೂಡಲೇ “ದೇವಸ್ಥಾನಕ್ಕೆ ಹೋಗೋಣ” ಎಂದ್ಳು
“ಸರಿ”
ದೇವರ ದರ್ಶನ ಪಡೆದು ಪ್ರಸಾದ ತಗೊಂಡು ಹೊರಗೆ ಬಂದು, “ಅಣ್ಣಾ, ಇಲ್ಲೇ ಸ್ವಲ್ಪ ಹೊತ್ತು ಕೂತು ಹೋಗೋಣ” ಎಂದ್ಳು .
“ಸರಿ ಎಂಬಂತೆ ತಲೆಯಾಡಿಸಿ ಸುತ್ತು ಪೌಳಿಯ ಜಗಲಿಯಲ್ಲಿ ಕುಳಿತ ನನಗೆ ಯಾಕೋ ಇವತ್ತು ಇವಳು ಒಂತರಾ ನಡ್ಕೊತಾ ಇದ್ದಾಳೆ ಎಂಬ ಅನುಮಾನ ಪ್ರಾರಂಭವಾಯ್ತು. ಆದ್ರೂ ತೋರಿಸಿಕೊಳ್ದೆ “ಏನು ಇವತ್ತು ದೇವಸ್ಥಾನಕ್ಕೆ..? ಏನಾದ್ರೂ ವಿಶೇಷ ದಿನಾನ ಇವತ್ತು?”
“ಇಲ್ಲ.. ಹಾಗೇ ಸುಮ್ಮನೆ ಬರ್ಬೇಕು ಅನಿಸ್ತು”..
“ಹುಂ.. ಸರಿ”..
“ಅಚ್ಚು ನಿಂಗೆ ಒಂದು ವಿಷಯ ಹೇಳ್ಬೇಕು”…
“ಏನು?”
“ಅದೇ.. ಅನನ್ಯ ಜೊತೆ ಮಾತು ಕಥೆ…”
“ಓ… ಹೌದಲ್ವಾ… ಹೇಳು ಈವಾಗ…”
“ಪಾಪ ಅವಳು ಮನೆ ಜವಾಬ್ದಾರಿ ನಡೆಸ್ತಾ ಇದ್ದಾಳೆ… ನಾನು ನೋಡು ಗಂಡಾಗಿ ಅಪ್ಪ ತಂದು ಹಾಕಿರೋದನ್ನ ತಿನ್ತಾ ಕಾಲ ಕಳೀತಾ ಇದ್ದೀನಿ, ಗ್ರೇಟ್ ಅನ್ಸುತ್ತೆ ಅವ್ಳ ಬಗ್ಗೆ”…
”ಅವ್ಳಿಗಿಂತ ನಂಗೆ ನೀನೆ ಗ್ರೇಟ್”…
“ಯಾಕೆ?”
“ಸುಮ್ನೆ.. ಫ್ಲೋಲಿ ಹೇಳ್ದೆ!…”
“ಹುಂ”..
“ಹೌದು… ಕಾಲ್ ಮಾಡಿದ್ಯ ನೀನು ಅವ್ಳಿಗೆ?”
“ಇಲ್ಲ…”
“ಮಾಡು ಈವಾಗ, ಮತ್ತೆ ನನ್ನ ಗರ್ಲ್ ಫ್ರೆಂಡ್ ಅಂತ ಪರಿಚಯ ಮಾಡ್ಸು”
“ಸರಿ”
“ಅನನ್ಯನಿಗೆ ಕಾಲ್ ಮಾಡಿ ಕುಶಲೋಪರಿ ಮಾತಾಡ್ತಾ, “ನನ್ ಗರ್ಲ್ ಫ್ರೆಂಡ್ ಜೊತೆ ನಿಮ್ಮ ಬಗ್ಗೆ ಹೇಳ್ದೆ..”
“ಗರ್ಲ್ ಫ್ರೆಂಡ್ ಇದ್ದಾರಾ ನಿಮ್ಗೆ?!”
“ಹಾ ಹೌದು… ತಡೀರಿ ಕೊಡ್ತೀನಿ ಅವ್ಳಿಗೆ”
ಹಾಗೆ ಅವರು ಕುಶಲೋಪರಿ ಮಾತಾಡ್ತಾ ಇದ್ರು
ಕಾಲ್ ಕಟ್ ಆದ್ಮೇಲೆ “ಅಣ್ಣಾ ನಂಗೆ ಒಂದು ಸಂಶಯ ಇದೆ ಅದನ್ನು ಕ್ಲಿಯರ್ ಮಾಡಿ ಕೊಡ್ತೀಯಾ?”
“ಏನು?”
“ಪ್ರಾಮಿಸ್ ಮಾಡು”
“ಸರಿ ಏನು ಹೇಳು..”
ನಂಗೆ ಮೊನ್ನೆಯಿಂದ ಕೆಲವೊಂದು ಮಾತು, ನಡವಳಿಕೆಯಿಂದ ಏನೋ ಮುಚ್ಚಿ ಇಡ್ತಾ ಇದ್ದೀರಿ ಅನ್ಸುತ್ತೆ”
“ಯಾರು?”
“ಅಪ್ಪ ಅಮ್ಮ ನೀನು ಎಲ್ರೂ”
“ಅರ್ಥ ಆಗಿಲ್ಲ ನಂಗೆ”
“ಜಾಣ ಕುರುಡು ಬೇಡ, ಹೇಳಣ್ಣ ಏನು ವಿಷಯ ಅಂತ, ನಾನು ಅವ್ರ ಮಗಳು ಆಲ್ವಾ ಹೇಳು…”
“ಲೇ ಹುಚ್ಚಿ ಏನ್ ಹೇಳ್ತಾ ಇದ್ದೀಯ ನೀನು”
“ಸತ್ಯ ಹೇಳಣ್ಣ ಪ್ಲೀಸ್”
“ಸರಿ… ಆದ್ರೆ ಒಂದು ಮಾತು ನಿನ್ನ ಬಾಯಿಯಿಂದ ನಾನು ಹೇಳೋ ವಿಷಯ ಅಪ್ಪ ಅಮ್ಮನ ಕಿವಿಗೆ ಬೀಳ್ಬಾರ್ದು”
“ಇಲ್ಲ, ಅವ್ರ ಜೊತೆ ಯಾವತ್ತೂ ಏನೂ ಏನೂ ಹೇಳಲ್ಲ”
“ಸರಿ”
“ಹೇಳು ಈವಾಗ ಏನು ಅದು?”
“ಹೇಳಿದ್ರು ಹೇಳದಿದ್ದರೂ ನಿನ್ನ ನಾನು ಕಳ್ಕೋತೀನಿ ಅನ್ಸುತ್ತೆ”
“ನೋ ಚಾನ್ಸ್ ನಿನ್ನ ನಾನು ಕಳ್ಕೊಳ್ಳೋದಾ… ಹುಚ್ಚಾ ನಂಗೆ…?”
“ನಾನು ನಿನ್ನ ಅಣ್ಣ ಅಲ್ಲ ಅಚ್ಚು…”
“ಅಂದ್ರೆ?”
“ನಾನೊಬ್ಬ ಅನಾಥ ನನ್ನ ದತ್ತು ಪಡೆದು ಸಾಕ್ತಾ ಇದ್ದಾರೆ”
“ಓ… ಹಂಗಾ ವಿಷಯ…?”
“ಇವತ್ತಿನಿಂದ ನೀನು ನನ್ನ ಬಿಟ್ಟು ಎಲ್ಲೂ ದೂರ ಹೋಗೋ ಆಗಿಲ್ಲ ಯಾಕೆ ಗೊತ್ತಾ ಕಳೆದ ಎರಡು ದಿನಗಳಲ್ಲಿ ನಿನ್ನ ಅನುಪಸ್ಥಿತಿ ನಿನ್ನ ಮೇಲಿನ ಪ್ರೀತಿ ಹೆಚ್ಚಿಸಿಬಿಡ್ತು.. ಎಷ್ಟು ಮಿಸ್ ಮಾಡ್ಕೊಂಡೆ ಗೊತ್ತಾ… ನಿನ್ನಂತಾ ಅಣ್ಣ ಇರೋವಾಗ ಅಪ್ಪ ಅಮ್ಮನ ನೆನಪೇ ಆಗಲ್ಲ.. ಯಾವತ್ತೂ ನನ್ನ ಬಿಟ್ಟು ಎಲ್ಲೂ ಹೋಗ್ಬೇಡಿ ಪ್ಲೀಸ್…”
“ಅಯ್ಯೋ ಹುಚ್ಚಿ… ನಿನ್ನ ಬಿಟ್ಟು ಎಲ್ಲೂ ಹೋಗಲ್ಲ” ಎಂದು ಅವಳಿಗೆ ಧೈರ್ಯ” ತುಂಬುವಾಗ ನನ್ನ ಕಣ್ಣುಗಳು ತೇವಗೊಂಡಿತ್ತು. ಬಯಸದೆ ಬಂದು ದುಃಖ ಇಷ್ಟೊಂದು ಖುಷಿ ಕೊಡುತ್ತೆ ಎಂದು ಇವತ್ತೇ ನನಗರಿವಾಗಿದ್ದು”
“ಆವಾಗ ತಿಂಡಿ ತಿನ್ನ್ನೋಕೆ ಆಗ್ದೆ ಇದ್ರೂ ಚೆನ್ನಾಗಿದೆ ಎಂದು ಮತ್ತೆ ಕೇಳಿ ತಿಂದೆ ನೋಡು ಆವಾಗ್ಲೇ ಅನ್ಕೊಂಡೆ ನಿನ್ಗಿಂತಾ ಬೆಸ್ಟ್ ಇನ್ನು ನಂಗೆ ಈ ಜನ್ಮ ಅಲ್ಲ ಏಳು ಜನ್ಮದಲ್ಲೂ ಸಿಗಲ್ಲ ಅಂತ ನನ್ನ ಖುಷಿಗೆ ನೀನೆಷ್ಟು ತ್ಯಾಗ ಮಾಡ್ತೀಯ ಅಲ್ವಾ” ಎಂಬ ಭಾವೋದ್ವೇಗದ ಮಾತುಗಳು ಕೇಳಿಬರುತ್ತಿವೆ
“ಸರಿ ಇದನ್ನೆಲ್ಲ ಇಲ್ಲೇ ಮರ್ತು ಬಿಡು.. ಈವಾಗ ಎಲ್ಲಿಗೆ ಹೋಗ್ಬೇಕು?”
“ಮತ್ತೆ ಎಲ್ಲೋ ಹೋಗೋಕೆ ಇದೆ ಅಂದೆ?”
“ಹಾಗೆ ಸುಮ್ನೆ ಹೇಳ್ದೆ… ಅಮ್ಮಂಗೆ ಡೌಟ್ ಬರ್ಬಾರ್ದು ಅಂತ”
“ಸರಿ, ಸರಿ.. ನಡಿ ಹೋಗೋಣ”
“ಇಲ್ಲ ಇನ್ನೊಮ್ಮೆ ದೇವರ ದರ್ಶನ ಮಾಡ್ಕೊಂಡು ಬರೋಣ”
“ಯಾಕೆ?”
“ಬೇಕು ಬಾ”
“ಸರಿ, ನಡಿ”
ಎದ್ದು ದರ್ಶನ ಪಡೆದು ಹೊರ ಬಂದಾಗ “ಮತ್ತೊಮ್ಮೆ ಯಾಕೆ ಹೋಗಿದ್ದು? ಏನು ಬೇಡ್ಕೊಂಡೆ?”
“ನಿನ್ನಂತ ತಲೆ ಹರಟೆ ಯಾವತ್ತೂ ಸಿಗ್ದೇ ಇರಲಿ ಅಂತ” ಕಿಲಕಿಲನೆ ನಕ್ಕಳು
ಹೀಗೆ ಸಂತಸದ ದಿನಗಳು ಉರುಳಿದವು. ಅನನ್ಯ ಕಾಲ್ ಮೆಸೇಜ್ ಮಾಡ್ತಾ ಒಳ್ಳೆಯ ಸ್ನೇಹಿತೆಯಾಗಿದ್ದಾಳೆ
ಇನ್ನೂ ಅಚ್ಚು ನನ್ನ ಗರ್ಲ್ ಫ್ರೆಂಡ್ ಅಂತಾನೇ ತಿಳಿದಿದ್ದಾಳೆ. ಅಪ್ಪ ಅಮ್ಮ ಅಚ್ಚುನಲ್ಲಾದ ಬದಲಾವಣೆಗಳನ್ನು ಗಮನಿಸುತ್ತಾ ಸಂತಸಪಡುತ್ತಿದ್ದಾರೆ.    

ಭಾಗ-  ಆತ್ಮಾವಲೋಕನ

ಮನೆಗೆ ಬಂದವನೇ, ಅಮ್ಮ ಕೇಳಿದ್ಲು “ಎಲ್ಲಿ ಹೋಗಿದ್ದೆ, ಅವ್ಳು ನಿನ್ನ ಬಿಟ್ಟು ತಿಂಡಿ ಕೂಡಾ ತಿನ್ನದೆ ಉಪವಾಸ ಇದ್ದಾಳೆ!”.

“ಮಡಿಕೇರಿ ಹೋಗಿದ್ದೆ”.

“ಯಾಕೆ?”

“ಫ್ರೆಂಡ್ಸ್ ಜೊತೆ”

“ಹಾ.. ಅವಳಿಗೆ ಹೇಳಿ ಹೋಗೋದು ಆಲ್ವಾ…? ಹೋಗಿ ನೋಡು ಅವಳ ಕೋಪ ತಾಪ ಎಲ್ಲ…”

“ಸರಿ ಅರ್ಧ ಗಂಟೆಯಲ್ಲಿ ಅವಳನ್ನು ತಿಂಡಿ ತಿನ್ನೋಕೆ ಕರಕೊಂಡು ಬರ್ತೀನಿ ರೆಡಿ ಮಾಡಿ ಇಡಿ” ಎಂದು ನೇರವಾಗಿ ಅವಳ ರೂಂ ಗೆ ಹೋಗಿ ಬಾಗಿಲು ಹಾಕಿಕೊಂಡೆ.

“ಅಚ್ಚೂ.. ಅಚ್ಚೂ… ಸಾರಿ ಕಣೇ…”

“ಹೋಗು… ಹೊರಟು ಹೋಗು… ಮಾತಾಡ್ಬೇಡ ನನ್ ಜೊತೆ…”

“ನಾನು ಹೇಳೋದು ಕೇಳು… ಆಮೇಲೆ ನೀನು ಹೇಳಿದ ಹಾಗೆ ಮಾಡ್ತೀನಿ..”

ಎಲ್ಲಾ ಘಟನೆಗಳನ್ನೂ ವಿವರಿಸಿ ಹೇಳಿದೆ.

ಹಾಗಾದ್ರೆ ಅವಳು ಏನು ಎಂಬಂತೆ ನನ್ನ ಮುಖವನ್ನೇ ನೋಡುತ್ತಾ ಇದ್ದಾಳೆ.

“ನಾನು ಏನೂ ಕೇಳಿಲ್ಲ, ಮನೆಗೆ ಬಿಟ್ಟು ಬಂದೆ ಅಷ್ಟೇ…”

“ಒಳ್ಳೆ ಕೆಲಸ ಮಾಡ್ದೆ, ನಾನೇ ವಿಚಾರಿಸ್ತೀನಿ”

“ಸರಿ, ಈಗ ಎದ್ದು ಬಾ ಹಸಿವಾಗ್ತಾ ಇದೆ”

“ನಾನೇನು ಎಲ್ಲ ತಿಂದು ಕೂತಿದ್ದೇನಾ?”

“ಅಮ್ಮ ಹೇಳಿದ್ರು ಎಲ್ಲಾ ಖಾಲಿ ಮಾಡಿ ಇಟ್ಟಿದ್ದಾಳೆ ಅಂತ.. ಅದ್ಕೆ ರೆಡಿ ಮಾಡೋಕೆ ಹೇಳಿ ಬಂದೆ, ಬಾ ಬೇಗ..”

“ನಂಗೆ ಬೇಡ…”

“ಸರಿ ನಂಗೂ ಬೇಡ”.. ಎಂದು ಹೇಳಿ, “ಅಮ್ಮಾ, ಏನೂ ಮಾಡ್ಬೇಡಿ… ನಂಗೆ ಹಸಿವಿಲ್ಲ…”

ಅಷ್ಟರಲ್ಲಿ ಎದ್ದು “ಬಾ, ನಡಿ, ನಂಗೆ ಹಸಿವಿಲ್ಲದಿದ್ದರೂ ನಿನಗೋಸ್ಕರ ಬರ್ತೀನಿ!”

“ಆ ಸೀನ್ ಎಲ್ಲ ಬೇಡ.. ತಿನ್ನೋದಿದ್ರೆ ಮಾತ್ರ ಬಾ”…

“ಸರಿ, ನಡಿ ಮಹಾರಾಯಾ… ನಾನೇನು ಮನುಷ್ಯ ಆಲ್ವಾ ತಿನ್ನದೇ ಇರೋಕೆ?!”

“ಹೌದಾ… ಯಾರು ಹೇಳಿದ್ದು?…” ಎಂದು ಜೋರಾಗಿ ನಕ್ಕೆವು.

’”ಅಮ್ಮಾ ಅವ್ಳಿಗೆ ಎರಡು ರೊಟ್ಟಿ ಜಾಸ್ತಿ ಹಾಕು”…

“ಯಾಕೆ? ನಿಂಗೆ ಏನೂ ಬೇಡ್ವಾ…?”

“ಎಲ್ಲಾನೂ ನೀನೇ ತಿಂತೀಯಾ?”

“ಎರಡೆರಡು ರೊಟ್ಟಿ ಇದೆ ಮತ್ತೆ ಬೇಕಾದ್ರೆ ಬೇಕರಿ ತಿಂಡಿ ತಿನ್ನಿ ಎಂದು ಅಮ್ಮ ಟೀ ತಂದಿಟ್ಟು ಇಬ್ಬರ ಮುಖವನ್ನೇ ನೋಡುತ್ತಾ”

“ಅಲ್ಲ ಕಣೋ ಅಚ್ಚು ಮದ್ವೆ ಆದ್ಮೇಲೆ ನಿನ್ನನ್ನೂ ಅವ್ಳ ಜೊತೆಗೆ ಕಳಿಸ್ಬೇಕು ಅನ್ಸುತ್ತೆ”

“ಅಣ್ಣ ಬರೋದಾದ್ರೆ ಮಾತ್ರ ನಂಗೆ ಮದ್ವೆ ಮಾಡಿ ಇಲ್ಲಾಂದ್ರೆ ಆ ವಿಷ್ಯಕ್ಕೇ ಹೋಗ್ಬೇಡಿ” ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟಳು.

“ಹೌದು, ಎಲ್ರೂ ಫಸ್ಟ್ ಹಿಂಗೇ ಹೇಳೋದು.. ಹುಡುಗ ಸಿಕ್ಕ ಮೇಲೆ ಅಣ್ಣನೂ ನೆನಪಿಲ್ಲ ಅಪ್ಪನೂ ನೆನಪಿಲ್ಲ…”

“ಆಗಿರ್ಬೋದು ಆದ್ರೆ ನಾನು ಎಲ್ಲರಂತಲ್ಲ… ಇದನ್ನು ಬೇಕಾದ್ರೆ ಬರ್ದು ಇಟ್ಕೊಳ್ಳಿ..”

“ಅಮ್ಮಾ, ಆ ವಿಷಯ ಬಿಡಿ ಅವ್ಳು ನನ್ನ ಬಿಟ್ಟು ಹೋಗಲ್ಲ”

“ಅಲ್ಲ ಕಣೋ.. ಹಾಗಾದ್ರೆ ಮದ್ವೆ ಮಾಡೋಕೆ ಇಲ್ವಾ”

“ಟೈಮ್ ಬಂದಾಗ ನಾನೇ ಮುಂದೆ ನಿಂತು ಅವ್ಳ ಮದುವೆ ಮಾಡಿಸ್ತೀನಿ”

“ಏನೋ ಪಾ ನಿಮ್ಮಿಬ್ಬರಿಗೂ ಬಿಟ್ಟಿದ್ದು”

“ಸರಿ”

 ಫಸ್ಟ್ ಅತ್ತಿಗೆ ಬರ್ಲಿ ಆಮೇಲೆ ನೀನು ನನ್ನ ಮದ್ವೆ ಮಾಡ್ಸು ಆಮೇಲೆ ನನ್ನ ಮಾತಾಡ್ಸೋಕೂ ಟೈಮ್ ಇರಲಿಕ್ಕಿಲ್ಲ.”

“ಹೌದು.. ಕರೆಕ್ಟ್ ಹೇಳ್ದೆ..”

“ಹಾಗೇನಾದ್ರೂ ಆದ್ರೆ ಕೊಂದೇ ಬಿಡ್ತೀನಿ”

“ಯಾರನ್ನೋ”

“ಅತ್ತಿಗೆ ನಾ”

“ಸಾಕು, ಸಾಕು.. ಸುಮ್ನಿರಿ” ಎಂದು ಅವರು ಬ್ಯುಸಿ ಆದ್ರು.

ಕೈ ತೊಳೆದು ಬಂದು ಸೋಫಾದಲ್ಲಿ ಕುಳಿತು,  “ಅನನ್ಯನಿಗೆ ಕಾಲ್ ಮಾಡೋದಾ?..”

“ಹುಂ ಮಾಡು ನನ್ನ ವಿಷಯ ಹೇಳ್ಬೇಡ, ಏನು ಎಂತ ಎಂದು ವಿಚಾರಿಸಿ ನೋಡು. ಸುಮ್ನೆ ಹುಡುಗಿ ಮೇಲೆ ಅಪರಾಧ ಹೊರಿಸೋದು ಸರಿ ಅಲ್ಲ.”

”ಸರಿ, ನಾನು ಟೆರೇಸ್ ಮೇಲೆ ಹೋಗಿ ಮಾತಾಡಿ ಬರ್ತೀನಿ.”

“ಸರಿ ಹೋಗು.”

“ಮೇಲೆ ಬಂದು ಕಾಲ್ ಮಾಡ್ದೆ, ರಿಸೀವ್ ಆಯ್ತು ಆದ್ರೆ ಉಸಿರಾಟ ಬಿಟ್ಟು ಬೇರೇನೂ ಕೇಳ್ತಾ ಇಲ್ಲ.”

“ಹಲೋ… ಇದು ಅನನ್ಯ ಆಲ್ವಾ?…”

“ಹೌದು.. ನಾನೇ.. ಏನು ವಿಷಯ?..”

 “ಕಾಲ್ ಮಾಡ್ದೆ.. ಸುಮ್ಮನೆ”..

“ಸುಮ್ಮನೆ ಅಲ್ಲ ಬಿಡಿ..”

“ಹೌದು, ನಿಜ.. ನನಗಿನ್ನೂ ನಂಬೋಕೆ ಆಗ್ತಾ ಇಲ್ಲ..”

“ನಂಬೋದು – ಬಿಡೋದು ನಿಮ್ಮಿಷ್ಟ ಆದ್ರೆ ವಾಸ್ತವತೆ ನಾನು ಹೇಳಿದ್ದೆ..”

“ಯಾಕೆ ಹೀಗಾಯಿತು ನಿಮ್ಮನ್ನು ಒಳ್ಳೆಯ ಫ್ರೆಂಡ್ ಅಂದ್ಕೊಂಡೆ ಆದ್ರೆ ನೀವು ನನ್ನಿಂದ ಎಲ್ಲ ಮುಚ್ಚಿಟ್ಟ್ರಿ  ಆಲ್ವಾ..?”

ಜೋರಾಗಿ ಅಳತೊಡಗಿದ ಅವಳು, “ನಿಮ್ಮ ಜೊತೆ ನಾಳೆ ಮಾತಾಡ್ತೀನಿ..” ಎಂದಾಗ “ಬೇಡ, ಈಗಲೇ ಹೇಳಿ.. ನಾನು ಎಷ್ಟು ಹೊತ್ತಾದರೂ ಕಾಯ್ತೀನಿ..”

“ಸರಿ, ಲೈನ್ ಲಿ ಇರಿ, ಈಗ ಬಂದೆ..”

“ಸರಿ”

“ಹಲೋ.. ಬಂದೆ..”

“ಹಾ ಹೇಳಿ.. ತನ್ನ ಕಥೆಗಳನ್ನು ಹೇಳೋಕೆ ಶುರು ಮಾಡಿದಳು”.

“ಮೈಸೂರಿನಲ್ಲಿ ಕೆಲಸ ಇದ್ದಿದ್ದು ನಿಜ. ನೀವು ನನ್ನ ಮೀಟ್ ಆದ ದಿನ ನನ್ನ ಡ್ರಾಪ್ ಮಾಡಿ ಹೋಗ್ತಾ ಇದ್ರೆ ನಾನು ಈ ಫೀಲ್ಡ್ ಗೆ ಇಳೀತಾ ಇರ್ಲಿಲ್ಲ ಅನ್ಸುತ್ತೆ. ಬಸ್ ಸ್ಟಾಂಡ್ ಲಿ ಇದ್ದ ಒಂದು ಲೇಡಿ ಮಾತಾಡ್ತಾ ಪರಿಚಯ ಆಯ್ತು. ನನ್ನ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಅನಂತರ ಅಷ್ಟು ಕಡಿಮೆ ಸಂಬಳಕ್ಕೆ ಯಾಕೆ ಅಲ್ಲಿ ದುಡೀತೀಯಾ..? ಅದಕ್ಕಿಂತ ಹೆಚ್ಚು ಸಂಪಾದಿಸೋ ಕೆಲಸ ಮಾಡಿ ಕೊಡ್ತೀನಿ ಎಂದು ಮೈಂಡ್ ವಾಷ್ ಮಾಡಿ ಬಿಟ್ರು. ನನಗೆ ದುಡ್ಡಿನ ಅಗತ್ಯತೆ ತುಂಬಾನೇ ಇದೆ. ಅದ್ಕೆ ಸರಿ ಬರ್ತೀನಿ ಎಂದೆ. ಆದ್ರೆ ನಂಗೆ ಮೈ ಮಾರಿಕೊಳ್ಳುವ ಕೆಲಸ ಎಂದು ಗೊತ್ತಾಗಿದ್ದು ಒಂದು ವಾರದ ಬಳಿಕ. ಅಷ್ಟರಲ್ಲೇ ನಾನು ಅವರ ಬಲೆಗೆ ಬಿದ್ದಾಗಿತ್ತು. ಅಲ್ಲಿಂದ ಹೊರ ಬರೋದು ಅಷ್ಟು ಸುಲಭದ ಮಾತೂ ಆಗಿರ್ಲಿಲ್ಲ. ಈವಾಗ ಕೈ ತುಂಬಾ ದುಡ್ಡು ಬರುತ್ತೆ ಆದ್ರೆ ಮರ್ಯಾದೆಯ ಬದುಕು ಇಲ್ಲ. ಯಾರೂ ಕೂಡಾ ಈ ಕೆಲಸಕ್ಕೆ ತಾನಾಗಿಯೇ ಬರುವವರಿಲ್ಲ, ಎಲ್ಲರೂ ಹಣದ ಆಮಿಷಕ್ಕೆ ಒಳಗಾಗಿ ಅಚಾನಕ್ಕಾಗಿ ಬಂದವರೇ. ಈವಾಗ ನಾನೂ ಒಬ್ಬಳು ಅವರು ನಡುವೆ…”

“ಸರಿ, ಇಷ್ಟು ದಿನ ನಡೆಯಬಾರದು ನಡೆದು ಹೋಯಿತು, ಇನ್ನಾದರೂ ನಿಮ್ಮನ್ನು ನೀವೇ ಬದಲಾಯಿಸಿಕೊಳ್ಳಬಹುದಲ್ಲ?..”

“ಹೇಗೆ ಬದಲಾಯಿಸಿಕೊಳ್ಳೋದು.. ಆ ಕಡೆ ತಲೆ ಹಾಕಿ ಮಲಗೋಕೆ ಅಂಜಿಕೆ ಇನ್ನು ಮನೆಯಲ್ಲಿ ಇದ್ದು ಏನು ಮಾಡುವುದು?..”

“ಯಾರ ಹಂಗೂ ಇಲ್ಲದೆ ಸ್ವ ಉದ್ಯೋಗ ಏನಾದ್ರೂ ಮಾಡಬಹುದಲ್ಲ?..”

“ಹೌದು, ಅದ್ಕೆ ತಕ್ಕ ಬಂಡವಾಳ ಹೂಡಿಕೆ ಎಲ್ಲಿಂದ ಮಾಡ್ಲಿ?”

“ನೀವು ನಿಮ್ಮ ಮೇಲೆ ನಂಬಿಕೆ ಇಟ್ಟು ಯಾವುದಾದ್ರೂ ಒಂದು ಸ್ವ ಉದ್ಯೋಗಕ್ಕೆ ಕೈ ಹಾಕಿ ಗೆಲುವು ನಿಮ್ಮದು ನಿಶ್ಚಿತ”

“ನನಗೂ ಆಸೆಯಿದೆ ಆದ್ರೆ..”

“ಸರಿ ನಿಮ್ಮೊಂದಿಗೆ ನಾಳೆ ಮಾತಾಡ್ತೀನಿ. ಸಾಧ್ಯ ಆದ್ರೆ ನಾಳೇನೇ ನಿಮಗೊಂದು ಪರಿಹಾರ ನೀಡುತ್ತೇವೆ ಆದ್ರೆ ದಯವಿಟ್ಟು ಇನ್ನು ಮುಂದೆ ಆ ಕೆಲಸಕ್ಕೆ ಮುಂದಾಗ್ಬೇಡಿ, ನಿಮ್ಮತನವನ್ನು ಕಳೆದುಕೊಳ್ಳುವ ಆ ಕೆಲಸ ಬೇಡ”.

“ಸರಿ, ನಿಮ್ಮಂತೆ ಎಲ್ಲರೂ ಯೋಚಿಸುತ್ತಿದ್ದರೆ ಯಾರೂ ಮೈ ಮಾರಿಕೊಳ್ಳುವ ಅಗತ್ಯವಿಲ್ಲವಲ್ಲ..”

“ಹಾ ಅದೂ ನಿಜಾನೇ ಆದ್ರೆ ಸಿಗುತ್ತೆ ಅಂದ್ರೆ ಮನುಷ್ಯನಿಗೆ ತೃಪ್ತಿ ಇಲ್ಲ. ಇಲ್ಲ ಅಂದ್ರೆ ಇದ್ದಲ್ಲೇ ತೃಪ್ತಿ ಪಡೋಕೂ ಗೊತ್ತು”

“ನಿಜ”

“ಸರಿ, ಆರಾಮ ಇರಿ, ಯಾವುದೇ ಟೆನ್ಶನ್ ಬೇಡ”

“ಸರಿ, ಬಾಯ್”..

“ಬಾಯ್”

“ದೀರ್ಘವಾದ ನಿಟ್ಟುಸಿರು ಬಿಟ್ಟು ಭಾರವಾದ ಮನಸ್ಸಿನಿಂದ ಒಂದೊಂದೇ ಮೆಟ್ಟಿಲು ಇಳಿದು ಒಳಗೆ ಬಂದು ಅಚ್ಚು ಜೊತೆ ಚರ್ಚಿಸಿದೆ. ಅಪ್ಪನ ಜೊತೆ ಸಲಹೆ ಕೇಳುವ ನಿರ್ಧಾರಕ್ಕೆ ಬಂದೆವು. ನಮ್ಮಿಂದಾಗುವ ಸಹಾಯ ಇನ್ನೊಬ್ಬರ ಬಾಳಲ್ಲಿ ಬೆಳಕು ಚೆಲ್ಲುತ್ತದೆ ಎಂದರೆ ಹಿಂದೇಟು ಹಾಕುವ ಅಗತ್ಯವೇನಿದೆ.. ಆವಾಗಲೇ, “ಅಣ್ಣಾ ನೀನು ನಿಜವಾಗಿಯೂ ಊಹೆಗೆ ನಿಲುಕದ ಮನುಷ್ಯ ಆಲ್ವಾ?!”

“ಯಾಕೆ?”

“ಸುಮ್ಮನೆ ಕುಳಿತು ಯೋಚಿಸಿ ನೋಡು”

“ಹೌದಾಗಿದ್ರೆ ಅದರ ಹಿಂದೆ ಮೂರು ಶಕ್ತಿಗಳ ಕೈವಾಡನೂ ಇದೆ” ಎಂದು ಮುಗುಳ್ನಕ್ಕೆ.

ರಾತ್ರಿ ಊಟ ಮಾಡ್ತಾ
“ಅಪ್ಪಾ ನಂಗೊಂದು ಹೆಲ್ಪ್ ಆಗ್ಬೇಕಿತ್ತು…”

“ಏನು ಹೇಳು”

“ನನ್ನ ಫ್ರೆಂಡ್ ಒಬ್ಬಳು ಏನಾದ್ರೂ ಸ್ವ ಉದ್ಯೋಗದ ಕನಸು ಕಾಣ್ತಾ ಇದ್ದಾಳೆ”

“ಹುಂ ಸರಿ”

“ಅದ್ಕೆ ಲೋನ್ ತೆಗೆಯೋಕೆ ಏನಾದ್ರೂ ಹೆಲ್ಪ್ ಮಾಡೋಕೆ ಆಗುತ್ತಾ?..”

“ಮಾಡೋಣ, ಅದ್ಕೇನು.. ಎಲ್ಲಿಯವಳು?”

“ಮಡಿಕೇರಿಯವಳು”

“ಓ ಹಾಗಾದ್ರೆ ಅಲ್ಲೇ ಇರೋ ನಮ್ಮ ಬ್ರಾಂಚ್ ಗೆ ಹೋಗಿ ಮ್ಯಾನೇಜರ್ ಜೊತೆ ಮಾತಾಡೋಕೆ ಹೇಳು”

“ಸರಿ ಅಪ್ಪಾ ನಾಳೆ ಹೋಗೋಕೆ ಹೇಳ್ಲಾ?”

“ನಾಳೆ ಬೇಡ ನಾನು ಬ್ಯುಸಿ ಇರ್ತೀನಿ, ನಾಡಿದ್ದು ಹೋಗೋಕೆ ಹೇಳು. ಅವ್ಳು ಅಲ್ಲಿ ಇರೋವಾಗ ಕಾಲ್ ಮಾಡು ನಂಗೆ”

“ಹುಂ ಸರಿ ಅಪ್ಪ.. ಥ್ಯಾಂಕ್ಯೂ..”

“ಒಳ್ಳೆ ಕೆಲಸ ಮಾಡ್ತಾ ಇದ್ದೀಯ.. ಚೆನ್ನಾಗಿರು..”

“ಅಂದ್ರೆ”

“ಬೆಳಗಿನಿಂದ ಇಲ್ಲಿವರ್ಗೂ ನಡೆದಿರುವ ವಿಷಯ ನಂಗೆ ಗೊತ್ತಾಗಿದೆ”

“ದೊಡ್ಡ ಶಾಕ್ ಎಂಬಂತೆ ಅವರ ಮಾತನ್ನು ಕೇಳ್ತಾ ಇದ್ದೆ”

“ಆದ್ರೆ ಈವಾಗ ನಿನ್ನ ಮೇಲೆ ನಂಗೆ ನಂಬಿಕೆ ಇದೆ ನೀನು ಬೆಳೆಯುವ ಜೊತೆ ಇತರರನ್ನೂ ಬೆಳೆಸು, ದೇವರು ಕೈ ಬಿಡಲಾರ..”

“ಸರಿ ಅಪ್ಪಾ”

“ಹೌದು ಈ ವಿಷಯ ಯಾರು ಹೇಳಿದ್ದು?”

“ಹೆದರ್ಬೇಡ ನಿನ್ನ ಬಗ್ಗೆ ಗೂಢಚರ್ಯೆ ಮಾಡ್ತಾ ಇಲ್ಲ ಆದ್ರೂ ಒಂತರಾ ಭಯ ಇತ್ತು ಆದ್ರೆ ಇವತ್ತು ನಾನು ನಿರಾಳವಾಗಿ ಇದ್ದೀನಿ”

“ಹಾಗಲ್ಲಪ್ಪಾ ನಾಳೆ ದಿನ ಈ ವಿಷಯಗಳು ಕಿವಿಯಿಂದ ಕಿವಿಗೆ ಹೋಗಿ ಬಾಳು ಹಾಳಾಗ್ಲಿಕ್ಕಿಲ್ಲ ಆಲ್ವಾ?”..

“ಇಲ್ಲ.. ಡೋಂಟ್ ವರಿ”..

“ಥ್ಯಾಂಕ್ಯೂ ಪಾ “..

ಬೆಳಿಗ್ಗೆ ಎದ್ದು ಅನನ್ಯನಿಗೆ ಕಾಲ್ ಮಾಡಿ

“ಏನು ಮಾಡ್ಬೇಕು ಅಂತ ಇದ್ದೀಯ?”

“ಏನು?”

“ಅದೇ ಉದ್ಯೋಗ..”

“ಗೊತ್ತಿಲ್ಲ..”

“ಏನಾದರೂ ಒಂದು ಡಿಸೈಡ್ ಮಾಡಿ ಹೇಳು ಲೋನ್ ವ್ಯವಸ್ಥೆ ಮಾಡಿ ಕೊಡ್ತೀನಿ”

“ಸರಿ”

“ಆದರೆ ಎಷ್ಟೇ ಸಮಸ್ಯೆಗಳು ಬಂದ್ರೂ ಹಿಂತಿರುಗಿ ನೋಡ್ಲೆಬೇಡ”

“ಸರಿ ಮತ್ತೆ ಕಾಲ್ ಮಾಡ್ತೀನಿ”

“ಸರಿ”

ಅಂತೂ ಇಂತೂ ಸಂಜೆಯಾದರೂ ಇವಳ ಸುಳಿವೇ ಇಲ್ಲ, ಕೊನೆಗೆ ನಾನೇ ಅತ್ತ ಕಾಲ್ ಮಾಡ್ದೆ

“ಹಲೋ..ಸಾರೀ…”

“ಯಾಕೆ?”

“ನಾನು ಕಾಲ್ ಮಾಡ್ತೀನಿ ಅಂತ ಹೇಳಿದ್ದೆ ಆಲ್ವಾ ಅದ್ಕೆ..”

“ಓಕೆ.. ಓಕೆ.. ಏನಾಯ್ತು ಪ್ಲಾನ್?”

“ಹುಂ.. ಸಣ್ಣ ಒಂದು ಪ್ಲಾನ್ ಹಾಕ್ಕೊಂಡಿದ್ದೀನಿ…”

“ಗುಡ್.. ಏನು ಹೇಳಿ”..

“ನಗ್ಬೇಡಿ ಇನ್ನು…”

“ಇಲ್ಲ.. ಹೇಳಿ..”

“ಎರಡು ದನ ಮತ್ತು ಐವತ್ತು ಕೋಳಿ ಸಾಕೋಣ ಅಂತ ಇದ್ದೀನಿ ಏನಂತೀರಾ?”

“ಅಯ್ಯೋ ನಾನು ಏನು ಹೇಳೋದು… ಮಾಡೋದು ನೀವು ಆಲ್ವಾ ಏನೇ ಆದ್ರೂ ನನ್ನ ಮಾತಿಗೆ ಬೆಲೆ ಕೊಟ್ಟ್ರಲ್ಲ್ವಾ.. ಅಷ್ಟೇ ಸಾಕು..”

“ಮುಂದೆ ಬೇರೆ ಏನಾದ್ರೂ ನೋಡೋಣ..”

“ಸರಿ, ನಾಳೆ ಬ್ಯಾಂಕ್ ಗೆ ಹೋಗಿ ಕಾಲ್ ಮಾಡಿ ಓಕೆ ನಾ…?”

“ಓಕೆ.. ಥ್ಯಾಂಕ್ಯೂ…”

“ಮರುದಿನ ಲೋನ್ ಬಗ್ಗೆ ಮಾತು ಕತೆ ಆಯ್ತು. ಕೆಲವು ಸಿಂಪಲ್ ಡಾಕ್ಯುಮೆಂಟ್ ನೀಡಿದ ಒಂದು ವಾರದ ಒಳಗೆ ಲೋನ್ ಪಾಸ್ ಮಾಡುವ ಭರವಸೆನೂ ಸಿಕ್ತು.

ಒಂದು ವಾರದ ನಡುವೆ ದಿನಾ ಬೆಳಿಗ್ಗೆ ಕಾಲ್ ಮಾಡಿ ಮಾತಾಡ್ತಾ ಇದ್ಳು, ವಾರದ ಅನಂತರ ಒಂದು ದಿನ ಕಾಲ್ ಮಾಡಿ ಲೋನ್ ಸಿಕ್ಕಿರೋದು, ಆ ದಿನ ದನಗಳನ್ನು ತರೋಕೆ ಹೋಗ್ತಾ ಇದ್ದೀನಿ ಅಂತೆಲ್ಲ ಹೇಳಿ ಧನ್ಯವಾದ ಹೇಳಿ ಬಾಯ್ ಹೇಳಿದ್ಳು… ಮತ್ತೆ ಒಂದು ವಾರದ ಅನಂತರ ತಕ್ಕ ಮಟ್ಟಿಗೆ ನಡೀತಿದೆ ಪರವಾಗಿಲ್ಲ, ಲೋನ್ ಬೇಗ ಕ್ಲಿಯರ್ ಮಾಡಿ ಮತ್ತೆ ಎರಡು ಹಸು ತಗೋಬೇಕು ಅಂತೆಲ್ಲ ನನಸಾಗುವ ಕನಸನ್ನೇ ಕಂಡಳು. ಹೀಗೇ ದಿನಗಳು ಉರುಳಿದಂತೆ ಮಾತು ಕಡಿಮೆಯಾಗುತ್ತಾ ಹೋಯ್ತು.

ನಾಲ್ಕು ವರ್ಷಗಳ ಬಳಿಕ /

ಅಚ್ಚು ಈವಾಗ ಬಿಬಿಎಂ ಫೈನಲ್ ಇಯರ್ ಓದ್ತಾ ಇದ್ದಾಳೆ. ನಾನು ಮಾತ್ರ ಏನೂ ಸುಧಾರಿಸಿಲ್ಲ. ಅಪ್ಪ ಮ್ಯಾನೇಜರ್ ಆಗಿ ಭಡ್ತಿ ಪಡೆದು ಹೊರಗಡೆ ಇದ್ದಾರೆ. ಹಾಗಾಗಿ ನಾನಿನ್ನೂ ಮನೆಯಲ್ಲಿ. ಇದ್ದ ಸ್ವಲ್ಪ ಅಡಿಕೆ ಬೆಳೆನ ಚೆನ್ನಾಗಿ ನೋಡ್ತಾ ಇದ್ದೀನಿ.

ಅದೊಂದು ಭಾನುವಾರ ಬೆಳಗ್ಗೆ ಅಚ್ಚು ಒಂದೇ ಸಮನೆ ನನ್ನ ಎಬ್ಬಿಸೋಕೆ ಪ್ರಯತ್ನ ಪಡ್ತಾ ಇದ್ದಾಳೆ. ಹಠ ಹಿಡಿದು ನಾನು ಮಲಗಿದೆ.

“ಅಣ್ಣಾ… ಯಾರೋ ಬಂದಿದ್ದಾರೆ ನಿನ್ನ ಹುಡ್ಕೊಂಡು.. ಹೋಗಿ ಮಾತಾಡ್ಸು..”

“ಯಾರು?”

“ಗೊತ್ತಿಲ್ಲ”

“ಸರಿ ಬಂದೆ ಇರು ಎಂದು ಸ್ನಾನಕ್ಕೆ ಹೋದೆ”

ಮೋಸ್ಟ್ಲಿ ಅಡಿಕೆ ತಗೊಂಡು ಹೋಗೋಕೆ ಬಂದಿರ್ಬೇಕು, ಇವತ್ತು ಬರ್ತೀನಿ ಅಂತ ಹೇಳಿದ್ರು. ಅಂತ ಮನಸ್ಸಲ್ಲೇ ಅಂದ್ಕೊಂಡು ಹೊರಗೆ ಬಂದ್ರೆ ಹೆಣ್ಣೊಬ್ಬಳು ಅಮ್ಮ, ತಂಗಿ ಜೊತೆ ಮಾತಾಡ್ತಾ ಇದ್ದಾರೆ, ಯಾರಿರಬಹುದು ಎಂದು ಮತ್ತೆ ರೂಂ ಗೆ ಹೋಗಿ ಶರ್ಟ್ ಹಾಕಿಕೊಂಡು ಬಂದೆ ನನ್ನ ಆಗಮನವಾಗುತ್ತಿದ್ದಂತೆ ಎದ್ದು ನಿಂತು, “ಪರಿಚಯ ಇದ್ಯಾ?” ಎಂಬ ಪರಿಚಿತ ಧ್ವನಿ..

“ಓ… ಅನನ್ಯ ಆಲ್ವಾ…?”

“ಹೌದು..”

“ಕೂತ್ಕೊಳ್ಳಿ.. ಯಾಕೆ ನಿಂತುಕೊಂಡ್ರಿ?”

“ಸರಿ”

“ಹೇಗಿದ್ದೀರಿ..? ಹೇಗಿದೆ ವ್ಯವಹಾರ ಎಲ್ಲ…?” ಹೀಗೆ ಹಲವು ಮಾತುಗಳು ಬಂದು ಹೋಯ್ತು. ಅಚ್ಚು ಅಮ್ಮ ನನ್ನ ಜೋತೆಯಾದ್ಮೇಲೆ ಕೇಳ್ಬೇಕೇ, ಮಾತಿನ ಹೊಳೆನೇ ಹರಿದಿತ್ತು. “ನಿಮ್ಮ ನಂಬರ್ ಮಿಸ್ ಆಗಿ ತುಂಬಾ ಕಷ್ಟಪಟ್ಟು ಮನೆ ಹುಡ್ಕೊಂಡು ಬಂದೆ..”

“ಓ.. ಹೌದಾ.. ಒಳ್ಳೆದಾಯ್ತು ಬಂದಿದ್ದು..”

ಕೈಗೆ ಒಂದು ಇನ್ವಿಟೇಶನ್ ಕೊಡುತ್ತಾ ನೆಕ್ಸ್ಟ್ ಸಂಡೇ ನಮ್ಮ ಎಲೆಕ್ಟ್ರಾನಿಕ್ಸ್ ಶೋ ರೂಂ ಉದ್ಘಾಟನೆ.. ನೀವು ಮನೆಯವರೆಲ್ಲರೂ ಬರ್ಬೇಕು ಎಂದು ಆಮಂತ್ರಿಸಿ ಅಂಕಲ್ ಗೂ ಹೇಳಿ ಎಲ್ಲರನ್ನೂ ಕರ್ಕೊಂಡು ಬನ್ನಿ ಮತ್ತೊಮ್ಮೆ ನೆನಪಿಸಿ ಕಾರಲ್ಲಿ ಕುಳಿತು ಟಾಟಾ ಮಾಡುತ್ತಾ ಕಣ್ಣಿಂದ ಮರೆಯಾದಳು. “ಒಳ್ಳೆ ಹುಡುಗಿ.. ಕಷ್ಟಪಟ್ಟು ದುಡಿದು ಮೇಲೆ ಬಂದ್ಳು ಆಲ್ವಾ…?”

“ಹೌದಮ್ಮ”

“ಅಣ್ಣಾ ನಾನು ಅವತ್ತು ಹೇಳಿದ್ದು ನೆನಪಿದ್ಯಾ..?”

“ಏನು..?”

“ಅವಳಿಗಿಂತ ಯು ಆರ್ ಗ್ರೇಟ್..”

ನಕ್ಕು ಸುಮ್ಮನಾದೆ.

ಅಪ್ಪನ ಜೊತೆ ಹೇಳುವಾಗ, “ಹೋಗೋಣ ಮನೆವರ್ಗೂ ಬಂದು ಹೇಳಿ, ಹೋಗಿಲ್ಲ ಅಂದ್ರೆ ನಾವು ಅಹಂಕಾರಿಗಳಾಗ್ತೇವೆ… ಅವರ ಸಂತೋಷದಲ್ಲಿ ಭಾಗಿಯಾಗೋದು ನಮಗೂ ಖುಷಿ ಕೊಡುತ್ತೆ”…

ಭಾನುವಾರ ಬೆಳಿಗ್ಗೆ ಎಲ್ಲರೂ ಮಡಿಕೇರಿಯತ್ತ ಪ್ರಯಾಣ ಬೆಳೆಸಿದೆವು. ಸಮಯಕ್ಕೆ ಮುಂಚಿತವಾಗಿಯೇ ನಮ್ಮ ಉಪಸ್ಥಿತಿ ಕಂಡು ಖುಷಿ ಖುಷಿಯಾಗಿ ಉತ್ಸಾಹದಿಂದ ಓಡಾಡುತ್ತಿದ್ದ ಅನನ್ಯನ ಕಂಡು ನಾನೇ ವಿಚಲಿತನಾದೆ. ಏನೋ ಆಗಿದ್ದ ಹೆಣ್ಣೊಬ್ಬಳು ಆತ್ಮಾವಲೋಕನ ಮಾಡಿಕೊಂಡು ತನ್ನ ಛಲ ಬಿಡದೆ ಗೆಲುವಿನ ನಗೆ ಬೀರಲು ಇನ್ನು ಕೆಲವು ಕ್ಷಣಗಳು ಮಾತ್ರ ಬಾಕಿ. ಅದೇ ಸೌಮ್ಯತೆ ತಾಳ್ಮೆ ಧೈರ್ಯ ಇನ್ನೂ ಜೀವಂತವಾಗಿದೆ ಎಂದರೆ ತನ್ನ ಕಳೆದು ಹೋದ ದಿನಗಳು ಇನ್ನೂ ಮರೆತಿಲ್ಲ ಎನ್ನುವುದೂ ಸತ್ಯವೇ. ಹೀಗೆ ಅವಳನ್ನೇ ನೋಡ್ತಾ ಯೋಚಿಸುತ್ತಿದ್ದೆ. ಆಗಲೇ ಅವಳು ಅಮ್ಮ ತಂಗಿಯ ಪರಿಚಯಿಸುತ್ತಾಳೆ.

ತಂಗಿಯೂ ಇವಳ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದಾಳೆ ಎಂಬ ಖುಷಿ ಸಮಾಚಾರವೂ ಕಿವಿಗೆ ಬಿತ್ತು.

“ಬನ್ನಿ, ಟೈಮ್ ಆಯ್ತು ಓಪನ್ ಮಾಡೋಣ..” ಎಂದು ಒಂದು ಬದಿಯಲ್ಲಿ ಕುಳಿತಿದ್ದ ನಮ್ಮನ್ನು ಕರೆದಳು. ಗೆಸ್ಟ್ ಗಳು ಬಂದ್ರಾ ಎಂದು ಕೇಳಿದೆ.

“ಅವರು ಆವಾಗ್ಲೆ ಬಂದ್ರು.. ಪುರೋಹಿತರು ಬರೋದು ಸ್ವಲ್ಪ ಲೇಟ್ ಆಯ್ತು”..

“ಹೌದಾ ಸರಿ”

“ಇವತ್ತು ಫಸ್ಟ್ ಪರ್ಚೇಸ್ ನೀವೇ ಮಾಡ್ಬೇಕು..” ಎಂದಳು ನಗುತ್ತಾ…

“ಸರಿ ಎಂದು ಅಪ್ಪ ಒಪ್ಪಿಕೊಂಡರು.”

ಎಲ್ಲರೂ ಬಾಗಿಲ ಬಳಿ ಸಾಲಾಗಿ ನಿಂತಿದ್ದಾರೆ. ಕೈಯಲ್ಲಿ ಒಂದು ಹರಿವಾಣ ಹಿಡಿದು ಪುಟ್ಟ ಬಾಲಕಿಯು ಮುಗುಳ್ನಗೆ ಸೂಸುತ್ತಿದ್ದಾಳೆ.

ಪುರೋಹಿತರ ಮಂತ್ರೋದ್ಘೋಷ ಅರ್ಥವಾಗದಿದ್ದರೂ ಕಿವಿಗೆ ಇಂಪಾಗಿ ಮನಕ್ಕೆ ಮುದ ನೀಡುತ್ತಿದೆ. ಭಕ್ತಿಯ ಮೌನದಲಿ ದೇವರಲ್ಲಿ ನನ್ನದೊಂದು ಪುಟ್ಟ ಪ್ರಾರ್ಥನೆ… ‘ಗೆಲುವಿನ ಗೆರೆ ತಲುಪಿದ ಮೇಲೂ ಸೋಲಿನ ರುಚಿ ತೋರದಿರು’ ಎಂಬುದು. ಪುರೋಹಿತರು ಕೈ ಸನ್ನೆಯಲ್ಲಿ ಉದ್ಘಾಟನೆಗೆ ಸೂಚಿಸಿದರು. ಹರಿವಾಣ ಹಿಡಿದು ಬಂದ ಬಾಲಕಿಯ ಕೈ ಹಿಡಿದು ನನ್ನ ಬಳಿ ಬಂದು, “ಬನ್ನಿ…” ಎಂದು ಕರೆಯಲು ಕೈ ಕಾಲುಗಳು ನಿಶ್ಯಕ್ತವಾದವು.

“ಇಲ್ಲ.. ನಿಮ್ಮ ಅಮ್ಮನ ಕೈಯಲ್ಲಿ ಮಾಡಿಸಿ”.. ಎಂದೆ.

“ಇಲ್ಲ, ನೀವೇ ಮಾಡ್ಬೇಕು ಅಂತ ನಾನು ಇಷ್ಟು ಹೊತ್ತು ಸಸ್ಪೆನ್ಸ್ ಆಗಿ ಇಟ್ಟಿದ್ದು”…

 “ನಾನು ಅಷ್ಟು ಹಿರಿಯವನಲ್ಲ, ಅಮ್ಮ ಮಾಡೋದೇ ಉತ್ತಮ”…

ಅಷ್ಟರಲ್ಲಿ ಅಮ್ಮ ಬಂದು “ಬನ್ನಿ”, ಎಂದು ಒತ್ತಾಯಿಸಿದಾಗ ಬೆನ್ನ ಹಿಂದೆ ನಿಂತಿದ್ದ ಅಪ್ಪ ಅಮ್ಮ “ಹೋಗು, ಶುಭವಾಗಲಿ” ಎಂದರು.

ನಡುಗುವ ಕೈಯಲ್ಲಿ ಕತ್ತರಿ ಹಿಡಿದು ರಿಬ್ಬನ್ ಕತ್ತರಿಸುವಾಗ ಮನದಲ್ಲಿದ್ದ ಪ್ರಾರ್ಥನೆ ಒಂದೇ. “ನನ್ನ ಕೈ ನಡುಗುವಂತೆ ಈ ಮಳಿಗೆಯ ಏಳಿಗೆಯನ್ನು ನಡುಗಿಸದಿರು”.. ಉದ್ಘಾಟಿಸಿ ಬಲಗಾಲಿಟ್ಟು ಒಳಪ್ರವೇಶಿಸಿದಾಗ ಕಂಡಿದ್ದು ವಿಶಾಲವಾದ ವಿಸ್ಮಯ ನಗರಿ. ಏನಿಲ್ಲ ಏನುಂಟು ಎಂಬ ಮಾತು ಎತ್ತುವಂತೆ ಇಲ್ಲ. ಅಷ್ಟು ವಿಸ್ತೃತ ಮಳಿಗೆ ಮೊದಲ ಗ್ರಾಹಕನಾಗಿ ಅಪ್ಪ ಖರೀದಿಸಿದ್ದು ಒಂದು ಸೋಫಾ ಸೆಟ್ ರಿಯಾಯಿತಿ ದರದಲ್ಲಿ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿದಳು. ಅಚ್ಚುಕಟ್ಟಾಗಿ ಕಾರ್ಯಕ್ರಮ ನೆರವೇರಿತು. ಬಳಿಕ ಲಘು ಉಪಾಹಾರದ ವ್ಯವಸ್ಥೆಯಲ್ಲೂ ಒಂದೂ ಕೊಂಕಿಲ್ಲ. ಎಲ್ಲರೂ ಹೊರಡಲು ರೆಡಿಯಾದರು. ಆವಾಗ ನನ್ನ ಕರೆದು ಎಲ್ಲರಿಗೂ ಪರಿಚಯಿಸಿ ಬೀಳ್ಕೊಟ್ಟಳು. ನಾವೂ ಹೊರಡಲು ಅನುವಾದಾಗ ಊಟ ಮುಗಿಸಿ ಹೊರಡಿ ಮನೆಗೆ ಬನ್ನಿ ಎಂದು ತಂಗಿಗೆ ಜವಾಬ್ದಾರಿ ಹೊರಿಸಿ ಅಮ್ಮನ ಜೊತೆ ಹೊರಟಳು. ಮನೆಯಲ್ಲಿ ಊಟ ಮುಗಿಸಿ ಸ್ವಲ್ಪ ಕುಶಲೋಪರಿ ಮಾತಾಡ್ತಾ ಇದ್ದೆವು. ಆ ನಡುವೆ ನಾನೊಂದು ಮಾತು ಹೇಳಿ ಬಿಟ್ಟೆ “ಅನನ್ಯ.. ಯೂ ಆರ್ ಗ್ರೇಟ್”..

“ನಾನಲ್ಲ.. ಯು ಆರ್ ರಿಯಲ್ ಹೀರೋ”… ಎಂದಾಗ ಎಲ್ಲರೂ ನಕ್ಕರು.

ನಾವು ಹೊರಟು ನಿಂತಾಗ ಬಾಯ್ ಹೇಳಿ ಥ್ಯಾಂಕ್ಯೂ ಹೇಳ್ತಾ, “ನಿತಿನ್ ಅವ್ರೇ… ನಿಮ್ಮ ಗರ್ಲ್ಫ್ರೆಂಡ್ ತುಂಬಾ ಮುದ್ದಾಗಿದ್ದಾಳೆ.. ಚೆನ್ನಾಗಿ ನೋಡಿಕೊಳ್ಳಿ…” ಎಂದು ಅಚ್ಚು ಮುಖ ನೋಡಿದ್ಳು ಪಾಪ ಅಚ್ಚು ನಾಚಿ ನೀರಾಗಿದ್ದಳು.

ಮತ್ತೊಮ್ಮೆ ಬಾಯ್ ಹೇಳಿ ನಮ್ಮ ಪಯಣ ಹೊರಟಿತು.

“ಅಣ್ಣಾ.. ನಾನು ಹೇಳಿದ್ದೆ…”

“ಏನು?”

“ಯು ಆರ್ ಗ್ರೇಟ್”… ಎಂದಾಗ ಅಪ್ಪ ನಗುತ್ತಾ ಬೆನ್ನು ತಟ್ಟಿ, “ಎಸ್.. ಹಿ ಈಸ್ ಗ್ರೇಟ್!” ಎನ್ನಬೇಕೆ…

“ಅಪ್ಪ, ನೀನಲ್ಲದಿದ್ದರೆ ಇದೆಲ್ಲ ಹೇಗೆ ಸಾಧ್ಯ? ನಮ್ಮೊಳಗೆ ಯಾರು ಗ್ರೇಟ್ ಅನ್ನುವುದಕ್ಕಿಂತ ಆತ್ಮಾವಲೋಕನ ಮಾಡಿ ಗೆದ್ದ ಅನನ್ಯ ಆಲ್ವಾ ಗ್ರೇಟ್…?!”

ಹೌದೆಂಬಂತೆ ಎಲ್ಲರೂ ತಲೆಯಾಡಿಸಿದರು

“ಅಣ್ಣಾ.. ಅಣ್ಣಾ.. ಗಾಡಿ ನಿಲ್ಸು..”

“ಯಾಕೆ?”

“ಡೈರಿ ಮಿಲ್ಕ್!”

“ಈವಾಗನಾ?”

“ಹುಂ.. ಹೌದು.. ಈ ಖುಷಿಗೆ ಬಾಯಿ ಸಿಹಿ ಮಾಡೋಣಾ….!”

                                                                                                           

 

✒ನೀತು ಕುಕ್ಕೆ

65013474_2273996889352960_3853331631611838464_o2

neethukukke347@gmail.com
ನೀತು ಕುಕ್ಕೆ@fb

ಆಧುನಿಕ ಹರಿಶ್ಚಂದ್ರ

Adhunika harishchandra
“ಅವರು ಹಾಗಂದರೆ… ಇವರು ಹೀಗಂದರೆ… ನಮಗೆ ತೊಂದರೆಯಾದರೆ..” ಎಂಬೆಲ್ಲಾ ಕಾರಣಗಳನ್ನು ಕೊಟ್ಟು ದೊಡ್ಡವರಾದ ನಾವುಗಳೇ ಹಿಂಜರಿಯುವ ಹೊತ್ತಿನಲ್ಲಿ ಈ ಕಿರುಕಥೆ ಸತ್ಯ ಹೇಳಲು, ಒಳ್ಳೆಯದ್ದನ್ನು ಮಾಡಲು ಸ್ಪೂರ್ತಿ ನೀಡುವಂತಿದೆ..
ಇನ್ನಾದರೂ ಬದಲಾಗೋಣ, ಅಷ್ಟಲ್ಲವಾದರೂ, ಸ್ವಲ್ಪ..

             ಮಗನಿಗೆ “ಸುಳ್ಳು ಹೇಳಬಾರದು,ಸತ್ಯವನ್ನೇ ಹೇಳಬೇಕು ” ಎಂದು ಪ್ರೇರೇಪಿಸಿ ಬೆಳೆಸಿದ್ದೇ ತಪ್ಪಾಯಿತೇ? ಎಂಬ ಯೋಚನೆಯಲ್ಲಿದ್ದ ನೀಲಾಳನ್ನು ಮಗನೇ ಎಚ್ಚರಿಸಿದ್ದ.

             ಸುಮಾರು ವರ್ಷಗಳು ಮಕ್ಕಳೇ ಆಗದೇ ಹತಾಶೆಯಲ್ಲಿದ್ದ ನೀಲಾ-ಸಂತೋಷರಿಗೆ ದೇವರೇ ವರ ನೀಡಿದಂತೆ ಮುದ್ದಿನ ಮಗನಾಗಿ ಮಡಿಲು ತುಂಬಿದ್ದ ಅನಾಥ ಮಗು ಇವನು. ಸತ್ಯ ಹರಿಶ್ಚಂದ್ರ ನಾಟಕ ನೋಡಿಕೊಂಡು ಬರುತ್ತಿರುವಾಗ ಸಿಕ್ಕ ಮಗುವನ್ನು ಇಬ್ಬರೂ ಆದರ್ಶದಿಂದ ತಮ್ಮದೇ ಮಗುವೆಂಬಂತೆ ಬೆಳೆಸಿದ್ದರು, ಜೊತೆಗೆ ಹರಿಶ್ಚಂದ್ರ ಎಂಬ ಹೆಸರನ್ನೇ ಇಟ್ಟಿದ್ದರು. ಅವನೂ ಅಷ್ಟೆ, ಸತ್ಯ ಹರಿಶ್ಚಂದ್ರ ನನ್ನೇ ಆದರ್ಶವನ್ನಾಗಿಟ್ಟುಕೊಂಡಿದ್ದರೂ, ಆಧುನಿಕ ಯುವಕರಂತೆ ನಡೆ-ನುಡಿ,ಧೈರ್ಯ-ಸ್ಥೈರ್ಯ ಅಷ್ಟೇ ಅಲ್ಲದೆ, ಕ್ರೀಡೆಯಲ್ಲೂ ಮುಂದಿದ್ದ. ಮಗನ ಆ ಎಲ್ಲಾ ಗುಣಗಳಿಗೇ ಮೆಚ್ಚಿಕೊಂಡಿದ್ದ ನೀಲಾಳಿಗೆ ಇಂದು ಆ ಗುಣಗಳೇ ಆತಂಕಕ್ಕೆ ಕಾರಣವಾಗಿದ್ದವು. ಆದದ್ದಿಷ್ಟು,ದ್ವಿತೀಯ ಪಿ.ಯು.ಸಿ ಪರೀಕ್ಷೆಗೆ ಚೆನ್ನಾಗಿ ತಯಾರಾಗಿ ಹೋಗಿದ್ದ ಮಗ ಆಲ್ಲಿ ನಡೆದ ಸಾಮೂಹಿಕ ನಕಲನ್ನು ನೋಡಿ ಕೆಂಡಾಮಂಡಲವಾಗಿದ್ದ. ಓದಿದವರಿಗೂ, ಓದದವರಿಗೂ ಒಂದೇ ಎಂಬಂತೆ ಮಾಡಿದ್ದ ಆ ಇಡೀ ಅವ್ಯವಸ್ಥೆಯ ಕುರಿತು ಟಿ.ವಿ ಗೆ ಹೇಳಿಕೆ ನೀಡಿ ಸಾಮೂಹಿಕ ವಲಯದಲ್ಲೇ ಆ ಕುರಿತ ಚರ್ಚೆಯಾಗುವಂತೆ ಮಾಡಿದ್ದ.ಈ ಕುರಿತಂತೆ ಮಗನಿಗೆ ಬರುತ್ತಿದ್ದ ಜೀವ ಬೆದರಿಕೆ ಕರೆಗಳೇ ಅವಳ ಆತಂಕಕ್ಕೆ ಕಾರಣ.

             ಇದನ್ನು ಕುರಿತು ಮಗ ಅಮ್ಮನಿಗೆ ಹೇಳಿದ್ದು ಒಂದೇ ಮಾತುಗಳೊಂದಿಗೆ “ನೂರು ದಿನ ಸತ್ಯ ಮುಚ್ಚಿಟ್ಟು ಇಲಿಯಂತೆ ಬದುಕುವುದಕ್ಕಿಂತ, ಮೂರು ದಿನ ಸತ್ಯ ಹೇಳಿ ಹುಲಿಯಂತೆ ಬದುಕುವುದೇ ಲೇಸು”, ಆದದ್ದಾಗಲಿ ಬಂದದ್ದನ್ನೆದುರಿಸುವೆನೆಂದಾಗ, ಒಂದರೆಕ್ಷಣ ನೀಲಾಳಿಗೆ, ಸತ್ಯ ಹರಿಶ್ಚಂದ್ರ ನೇ ಪುನರ್ಜನ್ಮವನ್ನೆತ್ತಿ ಬಂದಿರುವನೇನೋ ಎನ್ನಿಸಿಬಿಟ್ಟಿತು.

✒~ವಿಭಾ ವಿಶ್ವನಾಥ್

vibhavishwanath96@gmail.com

ವಿಭಾ ವಿಶ್ವನಾಥ್ @ facebook

ಭುವಿಯ ಭಾವಯಾನ

 

ಕಾಲಚಕ್ರ

ಕಾಲಚಕ್ರ
ಸಮುದ್ರ ಕಿನಾರೆಗೆ ಬಂದವನೇ ಅಲ್ಲಿಯ ಬಂಡೆ ಮೇಲೆ ಕುಳಿತುಕೊಂಡು ಯೋಚಿಸತೊಡಗಿದೆ. ನಾನು ಮಾಡುತ್ತಿರುವುದು ಸರಿಯೇ ಎಂದು..  ಬಹಳ ಹೊತ್ತು ಯೋಚಿಸಿದ ಬಳಿಕ ಒಂದು ದೃಢ ನಿರ್ಧಾರದೊಂದಿಗೆ ಮನೆ ಕಡೆ ಹೆಜ್ಜೆ ಹಾಕಿದೆ. ಮನಸ್ಸು ಮಾತ್ರ ನನ್ನ ಹತೋಟಿಯಲ್ಲಿರಲಿಲ್ಲ.  ಹೇಗಾದರೂ ಮಾಡಿ ಸಂಧ್ಯಾಳ ಮಾತಿಗೆ ಪ್ರತ್ಯುತ್ತರ ನೀಡಲೇಬೇಕೆಂಬ ಛಲ ನನ್ನಲ್ಲಿ ಬೇರೂರಿತು……

             ಅಂದು ಸೋಮವಾರ, ಮಧ್ಯಾಹ್ನ ೨.೩೦ರ ಸಮಯ. ಮನೆಯಲ್ಲಿ ಊಟ ಮುಗಿಸಿಕೊಂಡು ಬಂದ ನಾನು ಆಫೀಸಿನಲ್ಲಿ ಆರಾಮವಾಗಿ ಕುಳಿತುಕೊಂಡಿದ್ದೆ. ಫೋನ್ ರಿಂಗಣಿಸತೊಡಗಿತು. ರಿಸೀವರ್ ಎತ್ತಿಕೊಂಡ ನಾನು ಆ ಕಡೆಯಿಂದ ಬಂದ ವಿಷಯ ಕೇಳಿ ಬೆಚ್ಚಿಬಿದ್ದಿದ್ದೆ. ನಮ್ಮ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಸಂದೇಶ್ ಆತ್ಮಹತ್ಯೆ ಮಾಡಿಕೊಂಡಿದ್ದ. ಸಂಸ್ಥೆಯ ಎಲ್ಲಾ ನೌಕರರಿಗೂ ವಿಷಯ ತಿಳಿಸಲು ಮತ್ತು ಅಂತಿಮ ದರ್ಶನಕ್ಕೆ ಅನುಮತಿಯನ್ನು ನೀಡಲು ಮ್ಯಾನೇಜರ್ ಬಳಿ ಹೇಳಿ ಸಿಬ್ಬಂದಿಯೊಡನೆ ನಾನೂ ಸಂದೇಶನ ಮನೆಗೆ ತೆರಳಿದೆ. ಅದಾಗಲೇ ಜನ ಜಮಾಯಿಸಿದ್ದರು. ಮನೆಯವರ ಆಕ್ರಂದನ ಮುಗಿಲು ಮುಟ್ಟಿತ್ತು. ಮಧ್ಯಮ ವರ್ಗದ ಕುಟುಂಬವದು. ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದ ಸಂದೇಶ್ ಗೆ ತಾಯಿ, ತಂಗಿಯೇ ಆಸ್ತಿಯಾಗಿದ್ದರು. ಎಳವೆಯಲ್ಲಿಯೇ ಸಂಸಾರದ ನೊಗ ಹೊತ್ತಿದ್ದ. ಆತನೇ ಮನೆಯ ಆಧಾರಸ್ತಂಭವಾಗಿದ್ದ ಎಂದು ಮ್ಯಾನೇಜರ್ ಒಬ್ಬರು ತಿಳಿಸಿದರು. ಅಂತಿಮ ದರ್ಶನ ಪಡೆದು, ಮನೆಯವರಿಗೆ ಸಾಂತ್ವನ ಹೇಳಿ ಪಕ್ಕದಲ್ಲೇ ನಿಂತಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಬಳಿ ಕಾರಣವೇನಿರಬಹುದೆಂದು ಕೇಳಿದೆ. ಅದಕ್ಕವರು “ಯಾವುದೋ ಹುಡುಗಿಯನ್ನು ಪ್ರೀತಿಸುತ್ತಿದ್ದನಂತೆ. ಈ ವಿಚಾರ ಆಕೆಯ ಮನೆಯಲ್ಲಿ ತಿಳಿದು ಆಕೆಗೆ ಬೇರೆ ಮದುವೆ ಮಾಡಿದರಂತೆ. ಅದಕ್ಕೆ ಮನನೊಂದು ಈ ರೀತಿ ಮಾಡ್ಕೊಂಡಿದ್ದಾನೆ, ಡೆತ್ ನೋಟ್ ಸಿಕ್ಕಿದೆ”. ಎಂದಾಗ ನಾನು ಒಮ್ಮೆಗೇ ದಿಗ್ಭ್ರಾಂತನಾದೆ. ಮನಸ್ಸು ಯಾಕೋ ಅಲ್ಲಿರಲು ಒಪ್ಪಲಿಲ್ಲ. ನೇರವಾಗಿ ಆಫೀಸಿಗೆ ಬಂದವನೇ ಮುಖ ತೊಳೆದುಕೊಂಡು ಫ್ರೆಶ್ ಆಗಿ ಬಂದು ನನ್ನ ಚೆಯರ್ ನಲ್ಲಿ ಕುಳಿತು ರಿಲ್ಯಾಕ್ಸ್ ಮಾಡಿಕೊಂಡೆ. ಮನಸ್ಸು ವಿಚಲಿತವಾಗಿತ್ತು. ನನ್ನ ಜೀವನದ ಆ ಕಹಿ ಘಟನೆಗಳು ನನ್ನನ್ನು ಮತ್ತೆ ಕಾಡತೊಡಗಿತು.

             ನಮ್ಮದು ಬಡ ಕುಟುಂಬ. ಇವತ್ತು ದುಡಿದರೆ ಇವತ್ತಿನ ಖರ್ಚಿಗೆ ಸಾಕು ಎಂಬಂತೆ ನಮ್ಮ ಸಂಸಾರ. ನಾಳಿನ ಬಗ್ಗೆ ಯೋಚಿಸಲೂ ಸಾಧ್ಯವಿಲ್ಲದ ಪರಿಸ್ಥಿತಿ. ತಂದೆ ತಾಯಿ ಕೂಲಿ ನಾಲಿ ಮಾಡಿ ತಂಗಿಯಂದಿರ ಜೊತೆಗೆ ನನ್ನನ್ನು ಓದಿಸಲು ಹರಸಾಹಸ ಪಡುತ್ತಿದ್ದರು. ಹೀಗಿರಲು ನನಗೆ ಕಾಲೇಜಿನಲ್ಲಿ ಪರಿಚಯವಾದವಳು ಸಂಧ್ಯಾ. ಯಾಕೋ ಏನೋ ಗೊತ್ತಿಲ್ಲ ಆಕೆ ಮೊದಲ ನೋಟದಲ್ಲೇ ಹಿಡಿಸಿಬಿಟ್ಟಿದ್ದಳು.

Continue reading ಕಾಲಚಕ್ರ

ಜೀವನ ಜ್ಯೋತಿ

finalcut3-copy
ದೂರದಿಂದಲೇ ಆಕೆಯ ಚಲನವಲನಗಳನ್ನು ಕೂಲಂಕಷವಾಗಿ ನೋಡಿದವನೇ, ಏನೋ ಹೊಳೆದಂತವನಾಗಿ ಸೀದಾ ಆಕೆಯ ಹತ್ತಿರ ಹೋಗಿ “ಹಲೋ ನೀನು ಜ್ಯೋತಿ ತಾನೇ?” ಎಂದು ಕೇಳಿದಾಗ ಒಮ್ಮೆಲೇ ಬೆಚ್ಚಿಬಿದ್ದು ‘ಈ ನಗರದಲ್ಲಿ ನನ್ನ ಹೆಸರನ್ನು ಕರೆಯುವವರು ಯಾರು?’ ಎಂದು ಪ್ರಶ್ನಾರ್ಥಕವಾಗಿ ಹಿಂತಿರುಗಿದವಳು ಒಮ್ಮೆಗೇ ದಿಗ್ಭ್ರಾಂತಳಾದಳು. ಜೀವನ್ ನ ಮುಖವನ್ನು ನೋಡಲಾಗದೆ ಹೌದು ಎಂಬಂತೆ ತಲೆಯಾಡಿಸಿ, ತಲೆ ತಗ್ಗಿಸಿ ನಿಂತು ಬಿಕ್ಕಿ ಬಿಕ್ಕಿ ಅಳತೊಡಗಿದಳು. ಆಕೆಯ ಸ್ಥಿತಿಯನ್ನು ಕಂಡು ಕರುಳು ಹಿಂಡಿದಂತಾಗಿ ದುಃಖ ಒತ್ತರಿಸಿ ಬಂತು ಜೀವನ್ ಗೆ

                         ಅದು ಮುಂಬಯಿಯ ಜನನಿಬಿಡ ಪ್ರದೇಶ, ಜೀವನ ತನ್ನ ಬಾಳ ಸಂಗಾತಿ ಶ್ವೇತಾಳೊಂದಿಗೆ ಮುಂಬಯಿಯಲ್ಲಿರುವ ತನ್ನ ಗೆಳೆಯ ಅರುಣ್ ನ ಅಪೇಕ್ಷೆಯ ಮೇರೆಗೆ ಹದಿನೈದು ದಿನ ಇದ್ದು ಹೋಗಲೆಂದು ಎರಡು ದಿನಗಳ ಹಿಂದೆಯಷ್ಟೇ ಮುಂಬಯಿಗೆ ಆಗಮಿಸಿದ್ದ. ಅರುಣ್ ಮದುವೆಯಾದ ಮೂರು ತಿಂಗಳಲ್ಲೇ ಅಪಘಾತವೊಂದರಲ್ಲಿ ಹೆಂಡತಿಯನ್ನು ಕಳೆದುಕೊಂಡ ನತದೃಷ್ಟ. ತನ್ನ ತಾಯಿಯೊಂದಿಗೆ ಮುಂಬಯಿಯಲ್ಲೇ ನೆಲೆಸಿದ್ದ. ಅದು ಮುಂಜಾವಿನ ಒಂಬತ್ತು ಗಂಟೆ ಸಮಯ. ದಿನಪತ್ರಿಕೆ ಓದುವ ಮನಸ್ಸಾಗಿ ಬಸ್ ಸ್ಟಾಂಡ್ ಹತ್ತಿರವಿರುವ ಅಂಗಡಿಗೆ ಬಂದಿದ್ದ ಜೀವನ್, ದಿನಪತ್ರಿಕೆ ಹಿಡಿದುಕೊಂಡು ಹೊರಟು ನಿಂತವನಿಗೆ ದೂರದಲ್ಲೊಬ್ಬಳು ಭಿಕ್ಷುಕಿ ಜೋಳಿಗೆಯಲ್ಲಿ ಮಗುವನ್ನೆತ್ತಿಕೊಂಡು ಭಿಕ್ಷೆ ಬೇಡುತ್ತಿದ್ದುದು ಕಂಡುಬಂತು. ದೂರದಿಂದಲೇ ಆಕೆಯ ಚಲನವಲನಗಳನ್ನು ಕೂಲಂಕಷವಾಗಿ ನೋಡಿದವನೇ, ಏನೋ ಹೊಳೆದಂತವನಾಗಿ ಸೀದಾ ಆಕೆಯ ಹತ್ತಿರ ಹೋಗಿ “ಹಲೋ ನೀನು ಜ್ಯೋತಿ ತಾನೇ?” ಎಂದು ಕೇಳಿದಾಗ ಒಮ್ಮೆಲೇ ಬೆಚ್ಚಿಬಿದ್ದ ಭಿಕ್ಷುಕಿ ‘ಈ ನಗರದಲ್ಲಿ ನನ್ನ ಹೆಸರನ್ನು ಕರೆಯುವವರು ಯಾರು?’ ಎಂದು ಪ್ರಶ್ನಾರ್ಥಕವಾಗಿ ಹಿಂತಿರುಗಿದವಳು ಒಮ್ಮೆಗೇ ದಿಗ್ಭ್ರಾಂತಳಾದಳು. ಜೀವನ್ ನ ಮುಖವನ್ನು ನೋಡಲಾಗದೆ ಹೌದು ಎಂಬಂತೆ ತಲೆಯಾಡಿಸಿ, ತಲೆ ತಗ್ಗಿಸಿ ನಿಂತು ಬಿಕ್ಕಿ ಬಿಕ್ಕಿ ಅಳತೊಡಗಿದಳು. ಆಕೆಯ ಸ್ಥಿತಿಯನ್ನು ಕಂಡು ಜೀವನ್ ನ ಕರುಳು ಹಿಂಡಿದಂತಾಯಿತು. ಕೆದರಿದ ಕೂದಲು, ಹರಿದ ಸೀರೆ, ಮಾಸಿ ಹೋದ ಮುಖ, ಯಾವುದೇ ಆಶಾಭಾವನೆಗಳಿಲ್ಲದ ಕಣ್ಣುಗಳು, ಜೋಳಿಗೆಯಲ್ಲಿ ಅಳುತ್ತಿರುವ ಮಗು.. ಇವೆಲ್ಲವನ್ನೂ ಕಂಡು ದುಃಖ ಒತ್ತರಿಸಿ ಬಂತು ಜೀವನ್ ಗೆ.

Continue reading ಜೀವನ ಜ್ಯೋತಿ

ಆಶಾಕಿರಣ

 ೨೦೧೩ರ ಸುದ್ದಿ ಬಿಡುಗಡೆ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾದ ಕತೆ

Ashakirana img
ಇಷ್ಟಕ್ಕಾದರೂ ಈ ಕಿರಣ್ ಯಾರು? ಆತನಿಗೂ ನಮಗೂ ಏನು ಸಂಬಂಧ? ಆತ ಯಾತಕ್ಕಾಗಿ ನಮಗೆ ನೆರವಾಗುತ್ತಿದ್ದಾನೆ? ನಮ್ಮ ಬಗ್ಗೆ ಯಾಕೆ ಇಷ್ಟೊಂದು ಕಾಳಜಿವಹಿಸುತ್ತಿದ್ದಾನೆ? ಎಂಬ ಪ್ರಶ್ನೆಗಳು ನನ್ನ ಮನದಲ್ಲಿ ಸುಳಿಯದೆ ಇರಲಿಲ್ಲ. ಆತ ನನ್ನನ್ನು ಪ್ರೀತಿಸುತ್ತಿರಬಹುದೇ ಎಂಬ ಸಂಶಯ ಮೂಡತೊಡಗಿತು. ಇಲ್ಲ, ಆತ ನನ್ನ ಸ್ನೇಹಿತ ಮಾತ್ರ. ಆತ ನನ್ನನ್ನು ಪ್ರೀತಿಸಲಾರ. ಅನುಕಂಪದ ಮೇರೆಗೆ ಹತ್ತಿರವಾಗಿದ್ದಾನೆ ಅಷ್ಟೇ ಎಂದು ಆ ಸಂಶಯಕ್ಕೆ ನಾನೇ ಉತ್ತರವನ್ನು ಹುಡುಕಿದೆ. ಆದರೂ ಹುಚ್ಚು ಮನಸು ಮಾತ್ರ ನನ್ನ ಮಾತು ಕೇಳಲಿಲ್ಲ. ದಿನಕಳೆದಂತೆ ಮನದ ಮೂಲೆಯಲ್ಲಿ ‘ಪ್ರೀತಿ’ ಎಂಬ ಎರಡಕ್ಷರದ ಪದ ಚಿಗುರೊಡೆಯತೊಡಗಿತು. ಹೃದಯದೊಳಗೆ ಒಂದು ಪುಟ್ಟ ಜಾಗದಲ್ಲಿ ಆತನನ್ನು ಆರಾಧಿಸತೊಡಗಿದೆ. ನನ್ನ ಮನದಲ್ಲಿ ಮೂಡಿರುವ ಪ್ರೀತಿಯ ಭಾವನೆಗಳಿಗೆ ಅಕ್ಷರದ ರೂಪ ನೀಡಿದ್ದೆ. ಆ ಪತ್ರವನ್ನು ಆತನಿಗೆ ನೀಡಲು ಅವಕಾಶಕ್ಕಾಗಿ ಕಾಯತೊಡಗಿದೆ.

            ಅದು ಮುಂಜಾನೆಯ ಹನ್ನೊಂದು ಗಂಟೆ ಸಮಯ. ಬೆಳಗ್ಗಿನ ನಿತ್ಯ ಕರ್ಮಗಳನ್ನು ಮುಗಿಸಿ ಗಂಡನನ್ನು ಆಫೀಸಿಗೆ ಕಳುಹಿಸಿಕೊಟ್ಟು, ಮಗುವನ್ನು ಸ್ನಾನ ಮಾಡಿಸಿ ತೊಟ್ಟಿಲಲ್ಲಿ ಮಲಗಿಸಿ, ಸ್ನಾನ ಮಾಡಿ ವರಾಂಡದಲ್ಲಿ ಬಂದು ನಿಂತು ತಲೆ ಬಾಚಿಕೊಳ್ಳುತಿದ್ದೆ. ಒಳಗಿನಿಂದ ನನ್ನ ಸೆಲ್ ಫೋನ್ ರಿಂಗಣಿಸತೊಡಗಿತು. ಯಾರಿರಬಹುದೆಂದು ಕುತೂಹಲದಿಂದ ಅತ್ತ ಧಾವಿಸಿ ಸೆಲ್ ಫೋನ್ ಕೈಗೆ ತೆಗೆದುಕೊಂಡು ನೋಡಿದರೆ ನನ್ನ ಪತಿರಾಯರ ಕರೆ ಅದಾಗಿತ್ತು. ರಿಸೀವ್ ಮಾಡಿ “ಹಲೋ…. ಹೇಳಿ..” ಎಂದೆ. “ಹಲೋ… ಆಶಾ… ಏನಿಲ್ಲ, ಅಲ್ಲಿ ಟೇಬಲ್ ಮೇಲ್ಗಡೆ ಕೆಲವು ಅಗತ್ಯ ಫೈಲ್ ಗಳಿವೆ. ಅದನ್ನು ಒಳಗಿಡಲು ಮರೆತುಬಿಟ್ಟೆ. ಪಾಪುವಿನ ಕೈಗೆ ಸಿಕ್ಕರೆ ಕಷ್ಟ. ಅದನ್ನು ತೆಗೆದು ಡ್ರಾಯರ್ ಒಳಗಿಟ್ಟು ಬೀಗ ಹಾಕಿಬಿಡು. ನಾನು ಸ್ವಲ್ಪ ಬ್ಯುಸಿ ಇದ್ದೇನೆ, ಆಮೇಲೆ ಕಾಲ್ ಮಾಡ್ತೇನೆ ಎಂದಾಗ “ಆಯ್ತು… ರೀ”  ಎಂದು. ಸೆಲ್ ಫೋನ್ ಆ ಟೇಬಲ್ ನತ್ತ ನಡೆದೆ. ಅಲ್ಲಿ ಫೈಲ್ ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅವನ್ನೆತ್ತಿ ಡ್ರಾಯರ್ ಒಳಗಿಡಬೇಕಾದರೆ ಅಲ್ಲಿದ್ದ “ಡೈರಿ” ಮತ್ತೆ ನನ್ನ ಹಳೆ ನೆನಪುಗಳನ್ನು ಮರು ನೆನಪಿಸಿತು.

Continue reading ಆಶಾಕಿರಣ

ಅರುಣರಾಗ

Arunaraga 3
“ಅರುಣರಾಗ” ಇದು ‘ಸುದ್ದಿ ಬಿಡುಗಡೆ ದೀಪಾವಳಿ ವಿಶೇಷಾಂಕ ೨೦೧೪’ ರ ಮಿನಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತದೆ.

ಅಂದು ರವಿವಾರ, ಕಾಲೇಜ್ ಗೆ ರಜೆ ಇದ್ದುದರಿಂದ ಕೊಂಚ ತಡವಾಗಿ ಎದ್ದ ನಾನು, ಅಮ್ಮನ ಉತ್ಸಾಹವನ್ನು ಕಂಡು ಆಶ್ಚರ್ಯಚಕಿತಳಾಗಿದ್ದೆ. ಮತ್ತೊಂದೆಡೆ ರೂಪ ಮತ್ತು ರೇಶ್ಮಾ ಕೂಡ ತುಂಬಾ ಉತ್ಸಾಹದಲ್ಲಿದ್ದಂತೆ ಕಂಡಿತು. “ಏನಿವತ್ತು ಇಷ್ಟೊಂದು ಉಲ್ಲಾಸದಿಂದ ತಯಾರಿ ನಡೆಸುತ್ತಿದ್ದಾರಲ್ಲ” ಎಂದು ಚಿಂತಿತಳಾದ ನಾನು ಅಮ್ಮನಲ್ಲಿ “ಏನಮ್ಮ ಇವತ್ತು ತುಂಬಾ ಗಡಿಬಿಡಿಯಲ್ಲಿ ಕೆಲಸ ಮಾಡುತ್ತಿದ್ದೀರಾ, ಏನು ವಿಶೇಷ?” ಎಂದಾಗ ಅಮ್ಮ ನನ್ನ ತಲೆ ನೇವರಿಸಿ “ಹೋಗಿ ಹಲ್ಲುಜ್ಜಿ, ಸ್ನಾನ ಮಾಡಿ ಫ್ರೆಶ್ ಆಗಿ ಬಾ ಆಮೇಲೆ ಹೇಳ್ತೀನಿ” ಎಂದಾಗ ಇನ್ನಷ್ಟು ಕುತೂಹಲಭರಿತಳಾದ ನಾನು, ತಂಗಿಯರಾದರೂ ವಿಷಯ ತಿಳಿಸಬಹುದು ಎಂದು ಅವರಲ್ಲಿ ಕೇಳಿದಾಗ ಅವರೂ ಅದೇ ರಾಗವನ್ನು ಹಾಡಿದರು. “ಅಂಥದ್ದೇನು ವಿಶೇಷವಪ್ಪಾ?” ಎಂದು ಯೋಚಿಸುತ್ತಾ ಟವೆಲ್, ಡ್ರೆಸ್ ಹಿಡಿದುಕೊಂಡು ಬಾತ್ ರೂಮ್ ನತ್ತ ನಡೆದೆ. ಅಲ್ಲೂ ಅದೇ ಯೋಚನೆ ಮತ್ತೆ ಕಾಡತೊಡಗಿತು. ಏನಿದ್ದರೂ ಮತ್ತೆ ಗೊತ್ತಾಗುತ್ತಲ್ಲಾ ಎಂದು ಸ್ನಾನ ಮಾಡಿ ಟವೆಲ್ ನಿಂದ ತಲೆ ಒರೆಸುತ್ತಾ ಬಂದಾಗ, ಅಮ್ಮ ಕರೆದು “ಇವತ್ತು ನಿನ್ನನ್ನು ನೋಡೋಕೆ ವರನ ಕಡೆಯವರು ಬರ್ತಾ ಇದ್ದಾರೆ, ಬೇಗ ಸೀರೆ ಉಟ್ಟು ರೆಡಿಯಾಗು. ಅಲ್ಲಿ ಟೇಬಲ್ ಮೇಲೆ ಮಲ್ಲಿಗೆ, ಗುಲಾಬಿ ಇದೆ. ರೂಪಾ, ರೇಶ್ಮಾ ಅಕ್ಕನಿಗೆ ಸ್ವಲ್ಪ ಹೆಲ್ಪ್ ಮಾಡ್ರಮ್ಮಾ” ಎಂದಾಗ ನಾನು ತಬ್ಬಿಬ್ಬಾದೆ. ಅಮ್ಮ ಮಾತು ಮುಂದುವರಿಸಿ “ಹುಡುಗ ಇಲ್ಲೇ ಪಕ್ಕದೂರಿನವನಂತೆ, ಯಾವುದೋ ಒಳ್ಳೆಯ ಕೆಲಸದಲ್ಲಿದ್ದಾನಂತೆ, ಒಳ್ಳೆಯ ಹುಡುಗನಂತೆ ಪಕ್ಕದ ಮನೆ ಸದಾಶಿವಣ್ಣ ತಿಳಿಸಿದ್ರು. ಅವರೇ ಕರೆದುಕೊಂಡು ಬರ್ತಾ ಇದ್ದಾರೆ” ಎಂದಾಗ, ಒಮ್ಮೆಗೆ ಕೋಪ, ದುಃಖ ಉಮ್ಮಳಿಸಿ ಬಂದು “ನನ್ನಲ್ಲಿ ಏನನ್ನೂ ಕೇಳದೆ ಯಾಕೆ ಬರಹೇಳಿದ್ರಿ, ನನಗೂ ಸ್ವಂತ ಆಸೆ ಆಕಾಂಕ್ಷೆಗಳಿವೆ” ಎಂದು ಒಮ್ಮೆಗೇ ಕೇಳಿಬಿಡಬೇಕು ಎಂದು ಬಾಯಿ ತೆರೆದವಳು, ಸುಮ್ಮನಾಗಿ ನನ್ನನ್ನು ನಾನು ಸಮಾಧಾನಪಡಿಸಿಕೊಂಡು ಅತ್ತುಬಿಟ್ಟಿದ್ದೆ. ಯಾಕಂದ್ರೆ ನಾನೊಬ್ಬಳು ಅನಾಥೆ.

Continue reading ಅರುಣರಾಗ