ಪ್ರೀತಿನ… ಪ್ರೀತಿಯಿಂದ… ಪ್ರೀತಿಸು…

6940024-girl-boy-couple-smile-love-photo2
೦೯ ಫೆಬ್ರವರಿ ೨೦೧೨ರ ‘ಸುದ್ದಿ ಬಿಡುಗಡೆ’ ಪತ್ರಿಕೆಯ ಬೆಳ್ತಂಗಡಿ ಆವೃತ್ತಿಯಲ್ಲಿ ಪ್ರಕಟವಾದ ಲೇಖನ.

ಪ್ರೀತಿ ಎಂದರೆ ಉಸಿರು, ಪ್ರೀತಿ ಎಂದರೆ ಬದುಕು, ಪ್ರೀತಿ ಎಂದರೆ ಮರೆಯಲಾಗದ ಅನುಬಂಧ,  ಎರಡು ಹೃದಯಗಳ ಪಿಸುಮಾತು, ಎರಡು ಮನಸುಗಳ ಮಿಲನ, ಎರಡು ಜೀವಗಳ ಅಂತರಾಳದಲ್ಲಿ ಹುದುಗಿರುವ ಸುಂದರವಾದ ಭಾವನೆಗಳೇ ಈ ಪ್ರೀತಿ.

Continue reading ಪ್ರೀತಿನ… ಪ್ರೀತಿಯಿಂದ… ಪ್ರೀತಿಸು…

ಅರುಣರಾಗ

Arunaraga 3
“ಅರುಣರಾಗ” ಇದು ‘ಸುದ್ದಿ ಬಿಡುಗಡೆ ದೀಪಾವಳಿ ವಿಶೇಷಾಂಕ ೨೦೧೪’ ರ ಮಿನಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತದೆ.

ಅಂದು ರವಿವಾರ, ಕಾಲೇಜ್ ಗೆ ರಜೆ ಇದ್ದುದರಿಂದ ಕೊಂಚ ತಡವಾಗಿ ಎದ್ದ ನಾನು, ಅಮ್ಮನ ಉತ್ಸಾಹವನ್ನು ಕಂಡು ಆಶ್ಚರ್ಯಚಕಿತಳಾಗಿದ್ದೆ. ಮತ್ತೊಂದೆಡೆ ರೂಪ ಮತ್ತು ರೇಶ್ಮಾ ಕೂಡ ತುಂಬಾ ಉತ್ಸಾಹದಲ್ಲಿದ್ದಂತೆ ಕಂಡಿತು. “ಏನಿವತ್ತು ಇಷ್ಟೊಂದು ಉಲ್ಲಾಸದಿಂದ ತಯಾರಿ ನಡೆಸುತ್ತಿದ್ದಾರಲ್ಲ” ಎಂದು ಚಿಂತಿತಳಾದ ನಾನು ಅಮ್ಮನಲ್ಲಿ “ಏನಮ್ಮ ಇವತ್ತು ತುಂಬಾ ಗಡಿಬಿಡಿಯಲ್ಲಿ ಕೆಲಸ ಮಾಡುತ್ತಿದ್ದೀರಾ, ಏನು ವಿಶೇಷ?” ಎಂದಾಗ ಅಮ್ಮ ನನ್ನ ತಲೆ ನೇವರಿಸಿ “ಹೋಗಿ ಹಲ್ಲುಜ್ಜಿ, ಸ್ನಾನ ಮಾಡಿ ಫ್ರೆಶ್ ಆಗಿ ಬಾ ಆಮೇಲೆ ಹೇಳ್ತೀನಿ” ಎಂದಾಗ ಇನ್ನಷ್ಟು ಕುತೂಹಲಭರಿತಳಾದ ನಾನು, ತಂಗಿಯರಾದರೂ ವಿಷಯ ತಿಳಿಸಬಹುದು ಎಂದು ಅವರಲ್ಲಿ ಕೇಳಿದಾಗ ಅವರೂ ಅದೇ ರಾಗವನ್ನು ಹಾಡಿದರು. “ಅಂಥದ್ದೇನು ವಿಶೇಷವಪ್ಪಾ?” ಎಂದು ಯೋಚಿಸುತ್ತಾ ಟವೆಲ್, ಡ್ರೆಸ್ ಹಿಡಿದುಕೊಂಡು ಬಾತ್ ರೂಮ್ ನತ್ತ ನಡೆದೆ. ಅಲ್ಲೂ ಅದೇ ಯೋಚನೆ ಮತ್ತೆ ಕಾಡತೊಡಗಿತು. ಏನಿದ್ದರೂ ಮತ್ತೆ ಗೊತ್ತಾಗುತ್ತಲ್ಲಾ ಎಂದು ಸ್ನಾನ ಮಾಡಿ ಟವೆಲ್ ನಿಂದ ತಲೆ ಒರೆಸುತ್ತಾ ಬಂದಾಗ, ಅಮ್ಮ ಕರೆದು “ಇವತ್ತು ನಿನ್ನನ್ನು ನೋಡೋಕೆ ವರನ ಕಡೆಯವರು ಬರ್ತಾ ಇದ್ದಾರೆ, ಬೇಗ ಸೀರೆ ಉಟ್ಟು ರೆಡಿಯಾಗು. ಅಲ್ಲಿ ಟೇಬಲ್ ಮೇಲೆ ಮಲ್ಲಿಗೆ, ಗುಲಾಬಿ ಇದೆ. ರೂಪಾ, ರೇಶ್ಮಾ ಅಕ್ಕನಿಗೆ ಸ್ವಲ್ಪ ಹೆಲ್ಪ್ ಮಾಡ್ರಮ್ಮಾ” ಎಂದಾಗ ನಾನು ತಬ್ಬಿಬ್ಬಾದೆ. ಅಮ್ಮ ಮಾತು ಮುಂದುವರಿಸಿ “ಹುಡುಗ ಇಲ್ಲೇ ಪಕ್ಕದೂರಿನವನಂತೆ, ಯಾವುದೋ ಒಳ್ಳೆಯ ಕೆಲಸದಲ್ಲಿದ್ದಾನಂತೆ, ಒಳ್ಳೆಯ ಹುಡುಗನಂತೆ ಪಕ್ಕದ ಮನೆ ಸದಾಶಿವಣ್ಣ ತಿಳಿಸಿದ್ರು. ಅವರೇ ಕರೆದುಕೊಂಡು ಬರ್ತಾ ಇದ್ದಾರೆ” ಎಂದಾಗ, ಒಮ್ಮೆಗೆ ಕೋಪ, ದುಃಖ ಉಮ್ಮಳಿಸಿ ಬಂದು “ನನ್ನಲ್ಲಿ ಏನನ್ನೂ ಕೇಳದೆ ಯಾಕೆ ಬರಹೇಳಿದ್ರಿ, ನನಗೂ ಸ್ವಂತ ಆಸೆ ಆಕಾಂಕ್ಷೆಗಳಿವೆ” ಎಂದು ಒಮ್ಮೆಗೇ ಕೇಳಿಬಿಡಬೇಕು ಎಂದು ಬಾಯಿ ತೆರೆದವಳು, ಸುಮ್ಮನಾಗಿ ನನ್ನನ್ನು ನಾನು ಸಮಾಧಾನಪಡಿಸಿಕೊಂಡು ಅತ್ತುಬಿಟ್ಟಿದ್ದೆ. ಯಾಕಂದ್ರೆ ನಾನೊಬ್ಬಳು ಅನಾಥೆ.

Continue reading ಅರುಣರಾಗ