ವರ್ಣಗಳ ಸಂಗಮ – ಪತಂಗ
ಹೀಗೊಂದು ಪ್ರೇಮಪತ್ರ….!
– ಯೋಗೀಶ್ ಕುಲಾಲ್, ಸೋಣಂದೂರು
ಕಾಲಚಕ್ರ

ಅಂದು ಸೋಮವಾರ, ಮಧ್ಯಾಹ್ನ ೨.೩೦ರ ಸಮಯ. ಮನೆಯಲ್ಲಿ ಊಟ ಮುಗಿಸಿಕೊಂಡು ಬಂದ ನಾನು ಆಫೀಸಿನಲ್ಲಿ ಆರಾಮವಾಗಿ ಕುಳಿತುಕೊಂಡಿದ್ದೆ. ಫೋನ್ ರಿಂಗಣಿಸತೊಡಗಿತು. ರಿಸೀವರ್ ಎತ್ತಿಕೊಂಡ ನಾನು ಆ ಕಡೆಯಿಂದ ಬಂದ ವಿಷಯ ಕೇಳಿ ಬೆಚ್ಚಿಬಿದ್ದಿದ್ದೆ. ನಮ್ಮ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಸಂದೇಶ್ ಆತ್ಮಹತ್ಯೆ ಮಾಡಿಕೊಂಡಿದ್ದ. ಸಂಸ್ಥೆಯ ಎಲ್ಲಾ ನೌಕರರಿಗೂ ವಿಷಯ ತಿಳಿಸಲು ಮತ್ತು ಅಂತಿಮ ದರ್ಶನಕ್ಕೆ ಅನುಮತಿಯನ್ನು ನೀಡಲು ಮ್ಯಾನೇಜರ್ ಬಳಿ ಹೇಳಿ ಸಿಬ್ಬಂದಿಯೊಡನೆ ನಾನೂ ಸಂದೇಶನ ಮನೆಗೆ ತೆರಳಿದೆ. ಅದಾಗಲೇ ಜನ ಜಮಾಯಿಸಿದ್ದರು. ಮನೆಯವರ ಆಕ್ರಂದನ ಮುಗಿಲು ಮುಟ್ಟಿತ್ತು. ಮಧ್ಯಮ ವರ್ಗದ ಕುಟುಂಬವದು. ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದ ಸಂದೇಶ್ ಗೆ ತಾಯಿ, ತಂಗಿಯೇ ಆಸ್ತಿಯಾಗಿದ್ದರು. ಎಳವೆಯಲ್ಲಿಯೇ ಸಂಸಾರದ ನೊಗ ಹೊತ್ತಿದ್ದ. ಆತನೇ ಮನೆಯ ಆಧಾರಸ್ತಂಭವಾಗಿದ್ದ ಎಂದು ಮ್ಯಾನೇಜರ್ ಒಬ್ಬರು ತಿಳಿಸಿದರು. ಅಂತಿಮ ದರ್ಶನ ಪಡೆದು, ಮನೆಯವರಿಗೆ ಸಾಂತ್ವನ ಹೇಳಿ ಪಕ್ಕದಲ್ಲೇ ನಿಂತಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಬಳಿ ಕಾರಣವೇನಿರಬಹುದೆಂದು ಕೇಳಿದೆ. ಅದಕ್ಕವರು “ಯಾವುದೋ ಹುಡುಗಿಯನ್ನು ಪ್ರೀತಿಸುತ್ತಿದ್ದನಂತೆ. ಈ ವಿಚಾರ ಆಕೆಯ ಮನೆಯಲ್ಲಿ ತಿಳಿದು ಆಕೆಗೆ ಬೇರೆ ಮದುವೆ ಮಾಡಿದರಂತೆ. ಅದಕ್ಕೆ ಮನನೊಂದು ಈ ರೀತಿ ಮಾಡ್ಕೊಂಡಿದ್ದಾನೆ, ಡೆತ್ ನೋಟ್ ಸಿಕ್ಕಿದೆ”. ಎಂದಾಗ ನಾನು ಒಮ್ಮೆಗೇ ದಿಗ್ಭ್ರಾಂತನಾದೆ. ಮನಸ್ಸು ಯಾಕೋ ಅಲ್ಲಿರಲು ಒಪ್ಪಲಿಲ್ಲ. ನೇರವಾಗಿ ಆಫೀಸಿಗೆ ಬಂದವನೇ ಮುಖ ತೊಳೆದುಕೊಂಡು ಫ್ರೆಶ್ ಆಗಿ ಬಂದು ನನ್ನ ಚೆಯರ್ ನಲ್ಲಿ ಕುಳಿತು ರಿಲ್ಯಾಕ್ಸ್ ಮಾಡಿಕೊಂಡೆ. ಮನಸ್ಸು ವಿಚಲಿತವಾಗಿತ್ತು. ನನ್ನ ಜೀವನದ ಆ ಕಹಿ ಘಟನೆಗಳು ನನ್ನನ್ನು ಮತ್ತೆ ಕಾಡತೊಡಗಿತು.
ನಮ್ಮದು ಬಡ ಕುಟುಂಬ. ಇವತ್ತು ದುಡಿದರೆ ಇವತ್ತಿನ ಖರ್ಚಿಗೆ ಸಾಕು ಎಂಬಂತೆ ನಮ್ಮ ಸಂಸಾರ. ನಾಳಿನ ಬಗ್ಗೆ ಯೋಚಿಸಲೂ ಸಾಧ್ಯವಿಲ್ಲದ ಪರಿಸ್ಥಿತಿ. ತಂದೆ ತಾಯಿ ಕೂಲಿ ನಾಲಿ ಮಾಡಿ ತಂಗಿಯಂದಿರ ಜೊತೆಗೆ ನನ್ನನ್ನು ಓದಿಸಲು ಹರಸಾಹಸ ಪಡುತ್ತಿದ್ದರು. ಹೀಗಿರಲು ನನಗೆ ಕಾಲೇಜಿನಲ್ಲಿ ಪರಿಚಯವಾದವಳು ಸಂಧ್ಯಾ. ಯಾಕೋ ಏನೋ ಗೊತ್ತಿಲ್ಲ ಆಕೆ ಮೊದಲ ನೋಟದಲ್ಲೇ ಹಿಡಿಸಿಬಿಟ್ಟಿದ್ದಳು.
ತುಡರ ಪರ್ಬ
– ಯೋಗೀಶ್ ಕುಲಾಲ್, ಸೋಣಂದೂರು
ಜೀವನ ಜ್ಯೋತಿ

ಅದು ಮುಂಬಯಿಯ ಜನನಿಬಿಡ ಪ್ರದೇಶ, ಜೀವನ ತನ್ನ ಬಾಳ ಸಂಗಾತಿ ಶ್ವೇತಾಳೊಂದಿಗೆ ಮುಂಬಯಿಯಲ್ಲಿರುವ ತನ್ನ ಗೆಳೆಯ ಅರುಣ್ ನ ಅಪೇಕ್ಷೆಯ ಮೇರೆಗೆ ಹದಿನೈದು ದಿನ ಇದ್ದು ಹೋಗಲೆಂದು ಎರಡು ದಿನಗಳ ಹಿಂದೆಯಷ್ಟೇ ಮುಂಬಯಿಗೆ ಆಗಮಿಸಿದ್ದ. ಅರುಣ್ ಮದುವೆಯಾದ ಮೂರು ತಿಂಗಳಲ್ಲೇ ಅಪಘಾತವೊಂದರಲ್ಲಿ ಹೆಂಡತಿಯನ್ನು ಕಳೆದುಕೊಂಡ ನತದೃಷ್ಟ. ತನ್ನ ತಾಯಿಯೊಂದಿಗೆ ಮುಂಬಯಿಯಲ್ಲೇ ನೆಲೆಸಿದ್ದ. ಅದು ಮುಂಜಾವಿನ ಒಂಬತ್ತು ಗಂಟೆ ಸಮಯ. ದಿನಪತ್ರಿಕೆ ಓದುವ ಮನಸ್ಸಾಗಿ ಬಸ್ ಸ್ಟಾಂಡ್ ಹತ್ತಿರವಿರುವ ಅಂಗಡಿಗೆ ಬಂದಿದ್ದ ಜೀವನ್, ದಿನಪತ್ರಿಕೆ ಹಿಡಿದುಕೊಂಡು ಹೊರಟು ನಿಂತವನಿಗೆ ದೂರದಲ್ಲೊಬ್ಬಳು ಭಿಕ್ಷುಕಿ ಜೋಳಿಗೆಯಲ್ಲಿ ಮಗುವನ್ನೆತ್ತಿಕೊಂಡು ಭಿಕ್ಷೆ ಬೇಡುತ್ತಿದ್ದುದು ಕಂಡುಬಂತು. ದೂರದಿಂದಲೇ ಆಕೆಯ ಚಲನವಲನಗಳನ್ನು ಕೂಲಂಕಷವಾಗಿ ನೋಡಿದವನೇ, ಏನೋ ಹೊಳೆದಂತವನಾಗಿ ಸೀದಾ ಆಕೆಯ ಹತ್ತಿರ ಹೋಗಿ “ಹಲೋ ನೀನು ಜ್ಯೋತಿ ತಾನೇ?” ಎಂದು ಕೇಳಿದಾಗ ಒಮ್ಮೆಲೇ ಬೆಚ್ಚಿಬಿದ್ದ ಭಿಕ್ಷುಕಿ ‘ಈ ನಗರದಲ್ಲಿ ನನ್ನ ಹೆಸರನ್ನು ಕರೆಯುವವರು ಯಾರು?’ ಎಂದು ಪ್ರಶ್ನಾರ್ಥಕವಾಗಿ ಹಿಂತಿರುಗಿದವಳು ಒಮ್ಮೆಗೇ ದಿಗ್ಭ್ರಾಂತಳಾದಳು. ಜೀವನ್ ನ ಮುಖವನ್ನು ನೋಡಲಾಗದೆ ಹೌದು ಎಂಬಂತೆ ತಲೆಯಾಡಿಸಿ, ತಲೆ ತಗ್ಗಿಸಿ ನಿಂತು ಬಿಕ್ಕಿ ಬಿಕ್ಕಿ ಅಳತೊಡಗಿದಳು. ಆಕೆಯ ಸ್ಥಿತಿಯನ್ನು ಕಂಡು ಜೀವನ್ ನ ಕರುಳು ಹಿಂಡಿದಂತಾಯಿತು. ಕೆದರಿದ ಕೂದಲು, ಹರಿದ ಸೀರೆ, ಮಾಸಿ ಹೋದ ಮುಖ, ಯಾವುದೇ ಆಶಾಭಾವನೆಗಳಿಲ್ಲದ ಕಣ್ಣುಗಳು, ಜೋಳಿಗೆಯಲ್ಲಿ ಅಳುತ್ತಿರುವ ಮಗು.. ಇವೆಲ್ಲವನ್ನೂ ಕಂಡು ದುಃಖ ಒತ್ತರಿಸಿ ಬಂತು ಜೀವನ್ ಗೆ.
ಕಲಾವಿದನ ಕುಂಚದಲ್ಲಿ ಕಥಕ್ಕಳಿ ಮುಖವರ್ಣಿಕೆ
– ಯೋಗೀಶ್ ಕುಲಾಲ್, ಸೋಣಂದೂರು
ಬಡತನವೆಂಬುದು ಶಾಪವೇ?
ಮೇ ೧೬, ೨೦೧೩ರ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ.

ಅಕ್ಕಿ ಇನ್ನಿತರ ದಿನಬಳಕೆಯ ಆಹಾರ ಪದಾರ್ಥಗಳ ಬೆಲೆಯು ಸಿಗರೇಟ್, ತಂಬಾಕು, ಗುಟ್ಕಾ, ಮದ್ಯ ಮುಂತಾದ ಅಮಲು ಪದಾರ್ಥಗಳ ಬೆಲೆಗಿಂತ ಜಾಸ್ತಿಯಾಗಿವೆ…..
ಭಾರತ ದೇಶವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ದೇಶಗಳಲ್ಲೊಂದಾಗಿದೆ. ಹಿಂದಿನ ದಿನಗಳಿಂದಲೂ ಬಡತನವೆಂಬ ಪೆಡಂಭೂತ ದೇಶದ ಅಭಿವೃದ್ಧಿಗೆ ಪರಿಣಾಮ ಬೀರುತ್ತಲೇ ಬಂದಿದೆ. ಸಿರಿವಂತ – ಬಡವನೆಂಬ ತಾರತಮ್ಯ ಇಂದಿಗೂ ಕಮ್ಮಿಯಾಗಿಲ್ಲ. ಸಿರಿವಂತ ಸಿರಿವಂತನಾಗಿಯೇ ಬೆಳೆಯುತ್ತಿದ್ದಾನೆ. ಬಡವ ಬಡವನಾಗಿಯೇ ಉಳಿದು ಬಿಟ್ಟಿದ್ದಾನೆ. ಈಗಿನ ದಿನಗಳಲ್ಲಿ ‘ದುಡ್ಡಿದ್ರೆ ದುನಿಯಾ’ ಎಂಬ ಮಟ್ಟಿಗೆ ವಾತಾವರಣ ನಿರ್ಮಾಣವಾಗಿಬಿಟ್ಟಿದೆ. ಹಣದ ಬಲದಿಂದಲೇ ಜಗತ್ತನ್ನು ಆಳುವ ದಿನಗಳು ಎದುರಾಗಿವೆ.
ಹಿಂದಿನ ಕಾಲದಲ್ಲಿ ಪಿ ಯು ಸಿ, ಡಿಗ್ರಿ ಶಿಕ್ಷಣ ಪಡೆದರೆ ಸರ್ಕಾರಿ ಕೆಲಸ ಖಚಿತ ಎಂಬಂತಿತ್ತು. ಆ ದಿನಗಳಲ್ಲಿ ಇದೇ ಉನ್ನತ ಮಟ್ಟದ ಶಿಕ್ಷಣವಾಗಿತ್ತು. ಆ ಸಂದ ರ್ಭದಲ್ಲಿ ಮನೆಯಲ್ಲಿ ಗದ್ದೆ, ತೋಟ, ಜಮೀನು ಇರುವಂತಹ ಶ್ರೀಮಂತ ವ್ಯಕ್ತಿಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ಉನ್ನತ ಹುದ್ದೆ ಗಿಟ್ಟಿಸುವಲ್ಲಿ ಯಶಸ್ವಿಯಾಗುತ್ತಿದ್ದರು. ಮುಂದೆ ಆತ ತನ್ನ ಮಕ್ಕಳಿಗೂ ಉನ್ನತ ವ್ಯಾಸಂಗ ಮಾಡಿಸಿ ಉತ್ತಮ ಕೆಲಸ ದೊರಕಿಸುವಲ್ಲಿ ಸಫಲನಾಗುತ್ತಾನೆ. ಆತ ಆರ್ಥಿಕವಾಗಿ ಸದೃಢನಾಗಿರುವುದರಿಂದ ಇದೆಲ್ಲಾ ಸಾಧ್ಯವಾಗುತ್ತದೆ. ಇದರಿಂದಾಗಿ ಆತನ ಇಡೀ ಕುಟುಂಬವೇ ಆಭಿವೃದ್ಧಿಯ ಪಥದಲ್ಲಿ ಸಾಗುತ್ತದೆ. ಅವರು ಇನ್ನಷ್ಟು ಸಿರಿವಂತರಾಗುತ್ತಾರೆ. ಅದೇ ಒಬ್ಬ ಕೂಲಿ ಕಾರ್ಮಿಕ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಆರ್ಥಿಕವಾಗಿ ಆಶಕ್ತನಾಗಿ ತನ್ನ ಜೊತೆ ಕೂಲಿ ಕೆಲಸಕ್ಕೆ ಕರೆದುಕೊಂಡು ಹೋದುದರ ಪರಿಣಾಮವಾಗಿ ಆತನ ಮುಂದಿನ ತಲೆಮಾರು ಕೂಡಾ ಇದೇ ರೀತಿ ಮುಂದುವರಿಯುತ್ತಾ ಸಾಗುತ್ತದೆ. ಹೀಗೆ ಆರ್ಥಿಕವಾಗಿ ಅಶಕ್ತನಾದವನು ಅಶಕ್ತನಾಗಿಯೇ ಉಳಿದುಕೊಂಡರೆ, ಸಶಕ್ತನಾದವನು ಸಿರಿವಂತನಾಗಿಯೇ ಬೆಳೆಯತೊಡಗುತ್ತಾನೆ.
ಜೂನ್ ೧

ಜೂನ್ ೧ ಪನ್ಪುನವು ನಮ್ಮಂಚಿನ ಮಾತಾ ಜನಕುಲೆನ ಜೀವನಡ್_ಲಾ ಭಾರಿ ನೆಂಪು ದೀಪುನಂಚಿನ ದಿನಂದ್ ಪಂಡಲಾ ತಪ್ಪಾವಂದ್. ಬುಡಂದೆ ಬರ್ಪಿನ ಬರ್ಸದ ನಡುಟ್, ಸಂಗೀಸ್_ದ ಚೀಲ ಪಾಡೊಂದು, ತಾವರೆ ಕಡ್ಡಿದ ಕೊಡೆ ಪತೊಂದು, ಬೊಲ್ದು – ನೀಲಿ ಅಂಗಿ – ಚಡ್ಡಿ ಪಾಡೊಂದು, ಅಂಚಿ ಚೀಲಲ ಚಂಡಿ ಆವರೆ ಬಲ್ಲಿ, ನಮಲ ಚಂಡಿ ಆವರೆ ಬಲ್ಲಿ ಪಂಡ್_ದ್, ಬೀಜುನ ಗಾಳಿಗ್ ಕೊಡೆನ್ ಗಟ್ಟಿ ಪತೊಂದು, ಬೈಕಾಫ್ ಜೋಡು ಪಾಡೊಂದು, ತರೆ ಮುಟ್ಟ ಕೆಸರ್ ರಟ್ಟಾವೊಂದು ಕ್ಲಾಸ್_ಗ್ ಪೋಪಿನ ಆ ದಿನಕುಲು ಇನಿಕ್_ಲಾ ಕಣ್ಣ್_ಗ್ ಕಟ್ಟಿಲೆಕ ತೋಜಿದ್ ಬರ್ಪುಂಡು. ಒಂಜಿ ತಿಂಗೊಲು, ಇರ್ವ ದಿನತ ರಜೆಟ್ ಅಜ್ಜಿಲ್ಲಡೆ, ಬಿನ್ನೆರ್ನ ಇಲ್ಲಡೆ ಪಂಡ್_ದ್ ಪೋದು ಅಲ್ಪ ಜೋಕ್ಲೆನ ಒಟ್ಟಿಗೆ ಸೇರೊಂದು, ತೆಲ್ತೊಂದು, ನಲ್ತೊಂದು, ಗೊಬ್ಬೊಂದ, ಗಮ್ಮತ್ ಮಂತೊಂದು ಇತ್ತಿನ ನಮಕ್ ಶಾಲೆ ಸುರು ಆಯೆರೆ ಒಂತೆ ದಿನ ಇಪ್ಪುನಿ ಪನ್ನಗ ದಾದನ ಒಂಜಿ ಉಲತ್ತ ಉಲಯಿ ಬೇಜಾರ್.
ಆಶಾಕಿರಣ
೨೦೧೩ರ ಸುದ್ದಿ ಬಿಡುಗಡೆ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾದ ಕತೆ

ಅದು ಮುಂಜಾನೆಯ ಹನ್ನೊಂದು ಗಂಟೆ ಸಮಯ. ಬೆಳಗ್ಗಿನ ನಿತ್ಯ ಕರ್ಮಗಳನ್ನು ಮುಗಿಸಿ ಗಂಡನನ್ನು ಆಫೀಸಿಗೆ ಕಳುಹಿಸಿಕೊಟ್ಟು, ಮಗುವನ್ನು ಸ್ನಾನ ಮಾಡಿಸಿ ತೊಟ್ಟಿಲಲ್ಲಿ ಮಲಗಿಸಿ, ಸ್ನಾನ ಮಾಡಿ ವರಾಂಡದಲ್ಲಿ ಬಂದು ನಿಂತು ತಲೆ ಬಾಚಿಕೊಳ್ಳುತಿದ್ದೆ. ಒಳಗಿನಿಂದ ನನ್ನ ಸೆಲ್ ಫೋನ್ ರಿಂಗಣಿಸತೊಡಗಿತು. ಯಾರಿರಬಹುದೆಂದು ಕುತೂಹಲದಿಂದ ಅತ್ತ ಧಾವಿಸಿ ಸೆಲ್ ಫೋನ್ ಕೈಗೆ ತೆಗೆದುಕೊಂಡು ನೋಡಿದರೆ ನನ್ನ ಪತಿರಾಯರ ಕರೆ ಅದಾಗಿತ್ತು. ರಿಸೀವ್ ಮಾಡಿ “ಹಲೋ…. ಹೇಳಿ..” ಎಂದೆ. “ಹಲೋ… ಆಶಾ… ಏನಿಲ್ಲ, ಅಲ್ಲಿ ಟೇಬಲ್ ಮೇಲ್ಗಡೆ ಕೆಲವು ಅಗತ್ಯ ಫೈಲ್ ಗಳಿವೆ. ಅದನ್ನು ಒಳಗಿಡಲು ಮರೆತುಬಿಟ್ಟೆ. ಪಾಪುವಿನ ಕೈಗೆ ಸಿಕ್ಕರೆ ಕಷ್ಟ. ಅದನ್ನು ತೆಗೆದು ಡ್ರಾಯರ್ ಒಳಗಿಟ್ಟು ಬೀಗ ಹಾಕಿಬಿಡು. ನಾನು ಸ್ವಲ್ಪ ಬ್ಯುಸಿ ಇದ್ದೇನೆ, ಆಮೇಲೆ ಕಾಲ್ ಮಾಡ್ತೇನೆ ಎಂದಾಗ “ಆಯ್ತು… ರೀ” ಎಂದು. ಸೆಲ್ ಫೋನ್ ಆ ಟೇಬಲ್ ನತ್ತ ನಡೆದೆ. ಅಲ್ಲಿ ಫೈಲ್ ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅವನ್ನೆತ್ತಿ ಡ್ರಾಯರ್ ಒಳಗಿಡಬೇಕಾದರೆ ಅಲ್ಲಿದ್ದ “ಡೈರಿ” ಮತ್ತೆ ನನ್ನ ಹಳೆ ನೆನಪುಗಳನ್ನು ಮರು ನೆನಪಿಸಿತು.