ಸೃಷ್ಟಿ – ಪ್ರೀತಿ

SP 2

ರವಿಯು ಹುಡುಕುತಿಹ ಹಗಲಿಡೀ
ಎಲ್ಲಿ ಹೋದಳು ನನ್ನ ಶಶಿಯು ಎಂದು…
ಬಂದೇ ಬರುವಳು ಶಶಿಯು ಕಾದು-
ನೋಡುವ ಸಂಜೆಯಾಗಲಿ ಎಂದು…
           ಶಶಿಯು ಅಡಿಯಿಡುತಿಹ ಕಂಡು
           ಓಡುವನು ಅವಳ ಕಾಂತಿಗೆ ಸೋತು
           ರವಿಯು ಬಲು ನಾಚಿಕೆಯಿಂದಲೇ
           ಇಣುಕುವನು ಮತ್ತೆ ಆಗಸದ ಹಿಂದೆ ನಿಂದು…
ಶಶಿಯು ಓಡೋಡಿ ಬರುತಿಹ ಕಂಡು
ರವಿ ನಾಚಿ ಓಡುವನು ಆಗಸದ ಹಿಂದೆ
ದಿನಗಳು ಕಳೆದು ವರುಷಗಳಾದರೂ
ಹಿಂದೆಂದೂ ಆಗಲಿಲ್ಲ ಅವರ ಭೇಟಿ
           ಹೀಗೆಯೇ ಮುಂದುವರಿಯಲಿ ಅವರ ಪ್ರೀತಿ
           ಎಂದು ಆಶಿಸುವ ನಾವೆಲ್ಲರೂ ಇಂದು
           ಅವರಿಬ್ಬರೂ ಬೆರೆತು ಹೋದರೆ
           ಎಲ್ಲಿ ಹುಡುಕಲಿ ನಾವು ನಾಳೆ – ಇಂದು!

            -ತೀರ್ಥಪ್ರಸಾದ್ ಕೆ
            tpkpanja@gmail.com