ಪತ್ರ-೨

ನಿನ್ನ ಕಂಗಳ ಕೊಳದಿ
ಬೆಳದಿಂಗಳಿಳಿದಂತೆ
ನನ್ನೆದೆಯ ಕಡಲೇಕೋ ಬೀಗುತಿಹುದು……
ಅಂತ ನೀನು ಹಾಡುತ್ತಾ ಇದ್ದೀಯ.
ನಾನು ನಿನ್ನ ಮುಂದಿನಿಂದ ನಡೆದುಕೊಂಡು ಹೋಗುತ್ತಾ ಇದ್ದೇನೆ.
ಬಹುಶಃ ನೀನು ನನ್ನನ್ನೇ ಗಮನಿಸುತ್ತಿದ್ದೀಯಾ!
ಸೋಮವಾರ ಆ ದಿನ
ನನ್ನ ಮುಡಿಯಲ್ಲಿ ಮಲ್ಲಿಗೆ ಇದೆ. ಮಲ್ಲಿಗೆ, ಹಾ! ಮಲ್ಲಿಗೆಯ ಒಂದು ದಂಡೆ ಇದೆ.
ಮುಖದಲ್ಲಿ ನಗು, ಹೌದು! ನೀನು ಕಡಾಖಂಡಿತವಾಗಿ ನನ್ನನ್ನೇ ಗಮನಿಸುತ್ತಾ ಇದ್ದೀಯ.
ಹೌದು.
ಈಗ ಗಂಟೆ ೧೦:೧೦, ಮೋಹನ ಮೇಡಂ ಕನ್ನಡ ತರಗತಿಗೆ ಈಗ ತಾನೇ ಕಾಲಿಟ್ಟಿದ್ದಾರೆ.