ವರುಷದ ಸಂಭ್ರಮದಲ್ಲಿ

anniversary
ಆರಂಭದಿಂದಲೇ ಜೊತೆಯಾಗಿದ್ದ ಸದಸ್ಯರ ಅಭೂತಪೂರ್ವ ಸಹಕಾರದಿಂದ ಪತಂಗ ಇಂದು ನಿರೀಕ್ಷೆಗೂ ಮೀರಿದ ಅಭಿವೃದ್ಧಿ ಕಂಡಿದೆ. ಬರಿಯ ಲೇಖನ ಮಾತ್ರವಲ್ಲದೆ ಕಥೆ, ಕವನ, ಅನುಭವ ಕಥನ, ಚಿತ್ರ ಕಲೆ, ಛಾಯಾಚಿತ್ರ, ಕರಕುಶಲ ವಸ್ತುಗಳು ಹೀಗೇ ಒಂದೊಂದು ಹೆಜ್ಜೆಗಳೂ ಓದುಗರನ್ನು ಮತ್ತೆ ಮತ್ತೆ ಇತ್ತ ಆಕರ್ಷಿಸುತ್ತಲೇ ಇದೆ. ಮುಂಬರುವ ದಿನಗಳಲ್ಲಿ ಜನರ ಅಪೇಕ್ಷೆ, ಅಭಿರುಚಿಗಳಿಗೆ ತಕ್ಕಂತೆ ಪತಂಗ ಇನ್ನೂ ಹಲವು ಗರಿಗಳನ್ನು ತನ್ನ ರೆಕ್ಕೆಗೆ ಜೋಡಿಸಿಕೊಳ್ಳಲಿದೆ. ಹಾಗಾಗಿ ಪ್ರತಿದಿನ ಪತಂಗ ಪುಟ ತೆರೆಯುವುದೂ ಒಂದು ಒಳ್ಳೆಯ ಹವ್ಯಾಸ ಆಗಬಹುದು…!

– ಪತಂಗ

patanga2004@gmail.com

             ಬರೆಯುವ ಮುನ್ನಾದಿನವೇ ಓದು ಕೊನೆಯಾಗಿದೆ. ಎಕ್ಸಾಮ್’ನ ಹಿಂದಿನ ರಾತ್ರಿ ೧೨:೦೦ ಗಂಟೆಗೆ ನಿದ್ರೆಗೆಟ್ಟು ಓದಿದ ಪುಸ್ತಕವೇ ಕೊನೆಯದು. ಎಕ್ಸಾಮ್’ನಲ್ಲಿ ಗೀಚಿದ ಆ ನಾಲ್ಕಕ್ಷರಗಳೇ ಕೊನೆಯ ಬರವಣಿಗೆ.ಮುಂದೆ ಎಲ್ಲೋ ಉದ್ಯೋಗ, ಕಂಪ್ಯೂಟರ್ ಮುಂದೆ ಹೋಗಿ ಕುಳಿತುಬಿಟ್ಟರೆ ಪೆನ್ ಪುಸ್ತಕಗಳೆಲ್ಲವೂ ಮೂಲೆಗುಂಪೇ ಸರಿ. ಆದರೆ ಕಾಲೇಜು ಮುಗಿದಾಕ್ಷಣ ವಿದ್ಯಾರ್ಜನೆ ಅಂತ್ಯವಾಯಿತೇ… ಓದಲು ಇನ್ನಷ್ಟಿದೆ. ಪಂಚೇಂದ್ರಿಯಗಳು ತೆರೆದಿರುವಲ್ಲಿಯವರೆಗೆ ಮೆದುಳಿಗೆ ಮಾಹಿತಿ ರವಾನೆ ಆಗುತ್ತಲೇ ಇರುತ್ತದೆ. ಕೊನೆಯುಸಿರೆಳೆಯುವ ತನಕ ಕಣ್ಣು ತೆರೆದಿರುತ್ತದೆ, ನಾವು ಪ್ರಪಂಚವನ್ನು ನೋಡುತ್ತಲೇ ಇರುತ್ತೇವೆ. ಅದೇ ತಾನೆ ಅನುಭವ, ಜ್ಞಾನ ಸಂಪಾದನೆ. ಪ್ರತಿದಿನದ ಅನುಭವಗಳನ್ನು ಒಂದು ಪುಸ್ತಕದಲ್ಲಿ ಬರೆಯಹೊರಟರೆ ಅದೊಂದು ಡೈರಿ ಎನಿಸಿಕೊಳ್ಳುತ್ತದೆ. ಹಾಗೆಯೇ ನೆನಪಿನ ಪುಟಗಳಲ್ಲಿ ಕೆಲವು ಹಾಳೆಗಳನ್ನು ಆಯ್ದು ಒಂದಿಷ್ಟು ರಂಗು ಬೆರೆಸಿ ಹೊಸ ರೂಪು ಕೊಟ್ಟರೆ ಅದೇ ಒಂದು ಲೇಖನವಾಯಿತು.

             ಇದೇ ಉದ್ದೇಶದಿಂದ ಹುಟ್ಟಿಕೊಂಡಿದೆ ನಮ್ಮ ಬ್ಲಾಗ್, ‘ಪತಂಗ’ – ಜೀವನದ ಒಂದು ಸ್ವಚ್ಛಂದ ಹಾರಾಟ.

             ಮೇಲಿಂದ ಏನೇನು ಕಂಡೆವೋ ಅವುಗಳೆಲ್ಲವನ್ನೂ ಇಲ್ಲಿ ಅಕ್ಷರದ ರೂಪದಲ್ಲಿ ಚಿತ್ರಿಸಹೊರಟಿದ್ದೇವೆ. ಇಲ್ಲಿ ಎಲ್ಲವೂ ಸದಸ್ಯರ ಸ್ವಂತ. ಆದರೆ ಇಲ್ಲಿ ಯಾರೊಬ್ಬನೂ ಮಹಾನ್ ಬರಹಗಾರ ಎಂದಲ್ಲ. ಬರೆಯುತ್ತಾ ನಮ್ಮ ಸ್ವಂತ ಅಭಿರುಚಿ, ಶೈಲಿಗಳನ್ನು ಪಕ್ವಗೊಳಿಸಬಹುದು. ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು. ಜೊತೆಗೆ ವರ್ಣಚಿತ್ರ, ಛಾಯಾಚಿತ್ರಗಳನ್ನೂ ಸೇರಿಸಿ ‘ಬ್ಲಾಗ್’ನ ಅಂದವನ್ನು ಹೆಚ್ಚಿಸಬಹುದು. ಬ್ಲಾಗ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಬಹುದು. ನಮ್ಮ ಈ ಹೊಸ ಹವ್ಯಾಸವನ್ನು ಎಲ್ಲರೊಂದಿಗೂ ಹಂಚಿಕೊಳ್ಳಬಹುದು. ಉತ್ತಮವೆನಿಸಿದರೆ ಪತ್ರಿಕೆಗಳಲ್ಲೂ ಪ್ರಕಟಿಸಬಹುದು. ಇದೇ ನಮ್ಮ ಬ್ಲಾಗ್ ನ ಉದ್ದೇಶ.

             ಸರಿ, ಬನ್ನಿ, ತೋಚಿದ್ದನ್ನು ಗೀಚಿ ನೋಡೋಣ. ಏನೋ ಒಂದು ರೂಪು ನೀಡೋಣ. ಅದೇ ನಮ್ಮ ಶೈಲಿ. ಪತಂಗ ಇದಕ್ಕೊಂದು ಮುಕ್ತ ವೇದಿಕೆ.

             ಆರಂಭದಿಂದಲೇ ಜೊತೆಯಾಗಿದ್ದ ಸದಸ್ಯರ ಅಭೂತಪೂರ್ವ ಸಹಕಾರದಿಂದ ಪತಂಗ ಇಂದು ನಿರೀಕ್ಷೆಗೂ ಮೀರಿದ ಅಭಿವೃದ್ಧಿ ಕಂಡಿದೆ. ಬರಿಯ ಲೇಖನ ಮಾತ್ರವಲ್ಲದೆ ಕಥೆ, ಕವನ, ಅನುಭವ ಕಥನ, ಚಿತ್ರ ಕಲೆ, ಛಾಯಾಚಿತ್ರ, ಕರಕುಶಲ ವಸ್ತುಗಳು ಹೀಗೇ ಒಂದೊಂದು ಹೆಜ್ಜೆಗಳೂ ಓದುಗರನ್ನು ಮತ್ತೆ ಮತ್ತೆ ಇತ್ತ ಆಕರ್ಷಿಸುತ್ತಲೇ ಇದೆ. ಮುಂಬರುವ ದಿನಗಳಲ್ಲಿ ಜನರ ಅಪೇಕ್ಷೆ, ಅಭಿರುಚಿಗಳಿಗೆ ತಕ್ಕಂತೆ ಪತಂಗ ಇನ್ನೂ ಹಲವು ಗರಿಗಳನ್ನು ತನ್ನ ರೆಕ್ಕೆಗೆ ಜೋಡಿಸಿಕೊಳ್ಳಲಿದೆ. ಹಾಗಾಗಿ ಪ್ರತಿದಿನ ಪತಂಗ ಪುಟ ತೆರೆಯುವುದೂ ಒಂದು ಒಳ್ಳೆಯ ಹವ್ಯಾಸ ಆಗಬಹುದು…!

             ಒಂದು ವರುಷದ ಸ್ವಚ್ಛಂದ ಹಾರಾಟದಲ್ಲಿ ಸಾಕಷ್ಟು ದೂರ ತಲುಪಿದೆ ಪತಂಗ. ಈ ಸುಸಂದರ್ಭದಲ್ಲಿ ಸಹಕಾರವಿತ್ತ ನಮ್ಮ ಎಲ್ಲ ಉದಯೋನ್ಮುಖ ಬರಹಗಾರರು, ಕಲಾವಿದರು, ಛಾಯಾಗ್ರಾಹಕರು, ಓದುಗ ಮಿತ್ರರು ಮತ್ತು ಹಿತೈಷಿಗಳನ್ನು ಸ್ಮರಿಸಿಕೊಳ್ಳುತ್ತಿದ್ದೇವೆ. ಮುಂದಿನ ದಿನಗಳಲ್ಲೂ ತಮ್ಮ ಶುಭ ಆಶಯಗಳನ್ನು ಬಯಸುತ್ತೇವೆ.

-ಪತಂಗ-